ನಾವು ಸಿದ್ದರಾಮಯ್ಯ ಚಮಚಾಗಳಲ್ಲ, ಅಭಿಮಾನಿಗಳು: ಜಮೀರ್ ಅಹ್ಮದ್
Recommended Video
ಹುಬ್ಬಳ್ಳಿ, ಮೇ 13: ಸಿದ್ದರಾಮಯ್ಯನ ಚಮಚಾಗಳು ಎಂದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಮತ್ತು ಬಿಜೆಪಿಯ ಈಶ್ವರಪ್ಪ ಅವರಿಗೆ ಪ್ರತಿಕ್ರಿಯಿಸಿರುವ ಜಮೀರ್ ಅಹ್ಮದ್, ನಾವು ಸಿದ್ದರಾಮಯ್ಯ ಚಮಚಾಗಳಲ್ಲ ಅವರ ಕಟ್ಟಾ ಅಭಿಮಾನಿಗಳು ಎಂದಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಬಿಜೆಪಿ ಮುಖಂಡ ಈಶ್ವರಪ್ಪ ಅವರು, ಸಿದ್ದರಾಮಯ್ಯ ಈ ಜನ್ಮದಲ್ಲಿ ಮತ್ತೆ ಸಿಎಂ ಆಗಲ್ಲ. ಕಾಂಗ್ರೆಸ್ನ ಕೆಲವು ಚೇಲಾ ಶಾಸಕರಿಂದ ಸಿದ್ದರಾಮಯ್ಯ ಸಿಎಂ ಅಂತಾ ಹೇಳಿಸಿಕೊಳ್ಳುತ್ತಿದ್ದಾರೆ ಎಂದು ಈಶ್ವರಪ್ಪ ಹೇಳಿಕೆ ನೀಡಿದ್ದರು. ಜೆಡಿಎಸ್‌ನ ರಾಜ್ಯಾಧ್ಯಕ್ಷ ವಿಶ್ವನಾಥ್ ಸಹ ಇದೇ ಮಾದರಿಯ ಹೇಳಿಕೆಯನ್ನು ಇಂದು ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್ ಮೊದಲಿಗೆ ಈಶ್ವರಪ್ಪ ಅವರ ಮಾತಿಗೆ ಪ್ರತಿಕ್ರಿಯಿಸಿ, ನಾವು ಸಿದ್ದರಾಮಯ್ಯ ಅವರ ಚಮಚಾಗಳಲ್ಲ, ಅವರ ಕಟ್ಟಾ ಅಭಿಮಾನಿಗಳು, ಬಿಜೆಪಿಯವರಿಗೆ ಚಮಚಾಗಿರಿ ಮಾಡಿ ಅಭ್ಯಾಸವಿದೆ ಹಾಗಾಗಿ ಹೀಗೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ವಿಶ್ವನಾಥ್ ಅವರ ಹೇಳಿಕೆಗೂ ಪ್ರತಿಕ್ರಿಯಿಸಿದ ಜಮೀರ್ ಅಹ್ಮದ್, ವಿಶ್ವನಾಥ್ ಅವರಿಗೆ ಎಸ್.ಎಂ.ಕೃಷ್ಣ ಅವರ ಚಮಚಾಗಿರಿ ಮಾಡಿ ಅಭ್ಯಾಸವಾಗಿದೆ ಹಾಗಾಗಿ ಹೀಗೆ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಫಲಿತಾಂಶ ಬಂದಮೇಲೆ ರಾಜ್ಯ ರಾಜಕಾರಣದಲ್ಲಿ ಯಾವ ಬದಲಾವಣೆಯೂ ಆಗಲ್ಲ, ಮೇ 25 ರಂದು ಯಡಿಯೂರಪ್ಪ ಸರ್ಕಾರ ರಚಿಸಿಬಿಟ್ಟರೆ, ನಾನು ವಾಚ್‌ಮನ್ ಬಟ್ಟೆ ತೊಟ್ಟು ಯಡಿಯೂರಪ್ಪ ಮನೆ ಕಾವಲು ಕಾಯುತ್ತೇನೆ ಎಂದು ಜಮೀರ್ ಅಹ್ಮದ್ ಹೇಳಿದರು.












Click it and Unblock the Notifications