ಹುಬ್ಬಳ್ಳಿ ಬಳಿ ಲಾರಿ-ಕಾರ್ ಡಿಕ್ಕಿ, ಇಬ್ಬರು ಸ್ಥಳದಲ್ಲೇ ಸಾವು
ಹುಬ್ಬಳ್ಳಿ, ನವೆಂಬರ್ 6: ಹುಬ್ಬಳ್ಳಿಯಲ್ಲಿ ಮಂಗಳವಾರ ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.
ಕಂಟೆನರ್ ಲಾರಿ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿ ಹೊಡೆತಕ್ಕೆ ಹಲವು ಸುತ್ತು ಕಾರು ಮಲ್ಟಿಯಾಗಿದ್ದು, ಕಾರಿನಲ್ಲಿನದ್ದ ಇಬ್ಬರು ಸಾವನ್ನಪ್ಪಿದ್ದಾರೆ, ಚಾಲಕನ ಶವ ಹೊರತೆಗೆಯಲಾಗದೆ ಪೊಲೀಸರು ಪರದಾಡುತ್ತಿದ್ದಾರೆ, ಡಿಕ್ಕಿಯ ರಭಸಕ್ಕೆ ಕಾರಿ ನುಜ್ಜುಗುಜ್ಜಾಗಿದೆ.

KA25MA9984 ನಂಬರ್ ಕಾರು ಧಾರವಾಡ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೊರಟಿತ್ತು, ಹುಬ್ಬಳ್ಳಿ-ಧಾರವಾಡ ಮಧ್ಯೆ ಮೈಕ್ರೋಫಿನಿಷ್ ಕಾರ್ಖಾನೆ ಬಳಿ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಅಪಘಾತ ಸಂಭವಿಸಿದೆ. ಕಾರಿನಲ್ಲಿರುವವರ ಬಗ್ಗೆ ಗುರುತು ತಿಳಿದುಬಂದಿಲ್ಲ, ಸ್ಥಳಕ್ಕೆ ಪಿಎಸ್‌ಐ ಆನಂದ್ ಡೋಣಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.












Click it and Unblock the Notifications