ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಟೈಮಲ್ಲಿ ಕಿಮ್ಸ್ ನಲ್ಲಿ ಡ್ಯಾನ್ಸ್; ಪ್ರಕರಣಕ್ಕೀಗ ಹೊಸ ಟ್ವಿಸ್ಟ್

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಮಾರ್ಚ್ 16: ಇಲ್ಲಿನ ಕಿಮ್ಸ್ ಆಸ್ಪತ್ರೆಯಲ್ಲಿ ಸಿಬ್ಬಂದಿ ಡಾನ್ಸ್ ಮಾಡಿದ್ದ ವಿಡಿಯೋವೊಂದು ಈಚೆಗೆ ವೈರಲ್ ಆಗಿತ್ತು. ಕೊರೊನಾ ಭೀತಿ ಆವರಿಸಿರುವ ಈ ಹೊತ್ತಿನಲ್ಲಿ ಈ ರೀತಿ ಡಾನ್ಸ್ ಮಾಡಲಾಗಿದೆ ಎಂದು ಟೀಕೆಯೂ ವ್ಯಕ್ತಗೊಂಡಿತ್ತು. ಇದೀಗ ಈ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಬ್ಲ್ಯಾಕ್ ಮೇಲ್ ಮಾಡುವ ಉದ್ದೇಶದಿಂದ ಗಂಡನೇ ಹೆಂಡತಿಯ ಹಳೇ ವಿಡಿಯೋ ಹರಿಬಿಟ್ಟಿರುವುದಾಗಿ ಮಹಿಳೆ ತಿಳಿಸಿದ್ದಾರೆ.

ವೀಡಿಯೋದಲ್ಲಿ ಕಿಮ್ಸ್ ಆಸ್ಪತ್ರೆಯಲ್ಲಿ ಡ್ಯಾನ್ಸ್ ಮಾಡಿದ ಆಯಾ ಇಂದು ಮಾಧ್ಯಮದ ಮುಂದೆ ಬಂದು ಸ್ಪಷ್ಟಪಡಿಸಿದ್ದು, ಕೌಟುಂಬಿಕ ಕಲಹದಿಂದ ನನ್ನ ಪತಿ ಹೀಗೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಭಯ ಪಡಬೇಡಿ, ವೈಯುಕ್ತಿಕ ಸ್ವಚ್ಛತೆ ಕಾಪಾಡಿ: ಕೊರೊನಾ ಬಗ್ಗೆ ಪುನೀತ್ ಸಂದೇಶಭಯ ಪಡಬೇಡಿ, ವೈಯುಕ್ತಿಕ ಸ್ವಚ್ಛತೆ ಕಾಪಾಡಿ: ಕೊರೊನಾ ಬಗ್ಗೆ ಪುನೀತ್ ಸಂದೇಶ

"ಈ ವಿಡಿಯೋ ಒಂದು ವರುಷದ ಹಿಂದೆ ಮಾಡಿದ್ದು, ಎರಡು ಮೂರು ದಿನಗಳ ಹಿಂದೆ ಪತಿ ನನ್ನ ಮೊಬೈಲ್ ನಿಂದ ವಿಡಿಯೋ ಹರಿಬಿಟ್ಟಿದ್ದಾರೆ. ನನ್ನ ಮೊಬೈಲ್ ನಲ್ಲಿನ ವಿಡಿಯೋವನ್ನು ಕದ್ದು ಕಳಿಸಿದ್ದಾರೆ ಎಂದು ಮಹಿಳೆ ಮಾಧ್ಯಮದ ಮುಂದೆ ಕಣ್ಣೀರು ಹಾಕಿದ್ದಾರೆ.

Twist To Hubballi Kims Staff Dance Video Case

ಘಟನೆ ಹಿನ್ನಲೆ: ಕಿಮ್ಸ್ ಆಸ್ಪತ್ರೆಯಲ್ಲಿ ಕರ್ತವ್ಯನಿರತ ಸಿಬ್ಬಂದಿ ಡ್ಯಾನ್ಸ್ ಮಾಡಿದ್ದರು. ಬಸಣ್ಣಿ ಬಾ ಹಾಡಿಗೆ ಸಿಬ್ಬಂದಿ ಕುಣಿದು ಕುಪ್ಪಳಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಎಲ್ಲ ಮಾಧ್ಯಮದಲ್ಲಿ ಈ ಸುದ್ದಿ ಬಿತ್ತರವಾಗುತ್ತಿದ್ದಂತೆ ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಇಬ್ಬರನ್ನು ಅಮಾನತು ಮಾಡಿದ್ದಾರೆ. ಅಮಾನತಿಗೆ ಒಳಗಾದ ಮಹಿಳೆ, ವಿಡಿಯೋ ವೈರಲ್ ಮಾಡಿದ್ದು ತನ್ನ ಪತಿ ಎಂದು ಆರೋಪಿಸಿದ್ದಾರೆ.

English summary
The video of kims staff dancing went viral recently, it got a twist now. Women staff of the kims alleges that was old video and got viral by her husband
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X