• search
  • Live TV
ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದರ ಏರಿಕೆಯಲ್ಲೂ ನಗೆ ಉಕ್ಕಿಸುತ್ತಿರುವ ಟೊಮೆಟೋ ಜೋಕ್ಸ್!

By Basavaraj
|

ಹುಬ್ಬಳ್ಳಿ, ಜುಲೈ 20: ಮುಂಗಾರು ಮಳೆ ಧರೆಗಿಳಿಯುತ್ತಿದ್ದಂತೆ ಟೊಮೆಟೋ ಬೆಳೆ ಕೊಚ್ಚಿ ಹೋಗಿದೆ. ಪರಿಣಾಮ ಟೊಮೆಟೋ ಬೆಲೆ ಸೆಂಚುರಿ ಬಾರಿಸುವ ಸನ್ನಾಹದಲ್ಲಿದೆ.

ಟೊಮೆಟೋ ದರ ಏರಿಕೆ ಗೃಹಿಣಿಯರೂ ಸೇರಿದಂತೆ ಹೋಟೆಲ್ ಮಾಲಿಕರಿಗೆ ಕಣ್ಣೀರು ತರಿಸುತ್ತಿದೆ. ಆದರೆ ಈ ಕಹಿಯ ಮಧ್ಯೆಯೂ ನಗೆ ಉಕ್ಕಿಸುತ್ತಿವೆ ಉತ್ತರ ಕರ್ನಾಟಕದ ಜೋಕುಗಳು.

ಸೇಬಿನ ರೇಟಿನ ಜತೆಗೆ ಟೊಮೆಟೊ ಫೈಟು; ಕೇಜಿಗೆ ಎಪ್ಪತ್ತು ರುಪಾಯಿ

ಟೊಮೇಟೋ ದರ ಏರಿಕೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಪರೂಪದ ಜೋಕ್ಸ್‌ಗಳು ಹರಿದಾಡುತ್ತಿದ್ದು ಜನರ ಗಮನ ಸೆಳೆಯುತ್ತಿವೆ. ಫೇಸ್‌ಬುಕ್, ವಾಟ್ಸ್‌ಅಪ್ ಹಾಗೂ ಟಿಟ್ವರ್‌ನಲ್ಲಿ ಆಕರ್ಷಕವಾಗಿ ಮೂಡಿ ಬರುತ್ತಿರುವ ಈ ಜೋಕುಗಳು ಟೊಮೆಟೋ ದರ ಏರಿಕೆಯ ನೋವಿನ ಮಧ್ಯೆಯೂ ಗ್ರಾಹಕರನ್ನು ನಗೆಗಡಲಿನಲ್ಲಿ ತೇಲಿಸುತ್ತಿವೆ.

ಟೊಮ್ಯಾಟೊ ಬೆಲೆ ಡಬ್ಬಲ್, ಕಂಗಲಾದ ಸಾರು, ಚಟ್ನಿ ಪ್ರಿಯರು

ಟೊಮೆಟೊ ದರ ಏರಿಕೆ ನಿತ್ಯ ಜೀವನದ ಮೇಲೆ ಬೀರಿದ ಪರಿಣಾಮವನ್ನು ಹಾಸ್ಯದ ರೀತಿಯಲ್ಲಿ ಬಿಂಬಿಸಲಾಗಿದ್ದು, ಇಂಥ ಕೆಲವು ಜೋಕ್ಸ್‌ಗಳನ್ನು ಇಲ್ಲಿ ಪ್ರಕಟಿಸಲಾಗಿದೆ, ನೀವು ನೋಡಿ ನಕ್ಕು ಬಿಡಿ.

ಉತ್ತರ ಕರ್ನಾಟಕ ಜೋಕ್ಸ್

ಉತ್ತರ ಕರ್ನಾಟಕ ಜೋಕ್ಸ್

ಅದರಲ್ಲೂ ಮುಖ್ಯವಾಗಿ ಫೇಸ್‌ಬುಕ್‌ನಲ್ಲಿ ಜನಪ್ರಿಯವಾಗಿರುವ ಹಾಗೂ ಲಕ್ಷಾಂತರ ಜನರು ಮೆಚ್ಚಿಕೊಂಡಿರುವ 'ಉತ್ತರ ಕರ್ನಾಟಕ ಜೋಕ್ಸ್' ಪೇಜಿನಲ್ಲಿ ತರಹೇವಾರಿ ಹಾಸ್ಯಗಳು ಮೂಡಿ ಬರುತ್ತಿವೆ.

'ಮನ್ಯಾಗ ಎಷ್ಟ ಬಂಗಾರ, ಹಣ ಇದ್ರ ಏನು ಉಪಯೋಗ, ನೆಟ್ಟಗೆ 1ಕೆಜಿ ಟೊಮೆಟೊ ಇಲ್ಲ ಅಂದ್ರ' ಅಂತ ಮೆಮ್ಸ್ ಗಳಲ್ಲಿ ಹಾಸ್ಯ ಮಾಡಲಾಗುತ್ತಿದೆ. ಈ ಮೂಲಕ ಟೊಮೆಟೋ ಸದ್ಯ ಚಿನ್ನಕ್ಕಿಂತಲೂ ದುಬಾರಿಯಾಗಿದೆ ಎಂದು ಪರೋಕ್ಷವಾಗಿ ಹೇಳುತ್ತಿದ್ದಾರೆ.

ಪೆಟ್ರೋಲ್ ಬೆಲೆ 20 ರೂ. ಕಡಿಮೆ

ಪೆಟ್ರೋಲ್ ಬೆಲೆ 20 ರೂ. ಕಡಿಮೆ

ನಿನ್ನೆಯ ತನಕ ಪೆಟ್ರೋಲ್ ದರದ್ದೇ ಜನ ಸಾಮಾನ್ಯರ ಚಿಂತೆಯಾಗಿತ್ತು. ಇದೀಗ ಪೆಟ್ರೋಲನ್ನು ಟೊಮೆಟೋ ಮೀರಿಸಿದ್ದರಿಂದ 'ಪೆಟ್ರೋಲ್ ಬೆಲೆ 20 ರೂಪಾಯಿ ಕಡಿಮೆ, ಟೊಮೆಟೊಗಿಂತ', ಅಂತ ಜನ ಮಾತಾಡಿಕೊಳ್ತಿದ್ದಾರೆ.

ಟೊಮೆಟೋ ಖರೀದಿಸಿದವನೇ ಶ್ರೀಮಂತ!

ಟೊಮೆಟೋ ಖರೀದಿಸಿದವನೇ ಶ್ರೀಮಂತ!

ಈಗ ಶ್ರೀಮಂತ ಎಂದು ತೋರಿಸಿಕೊಳ್ಳಲು ಕಾರು, ಚಿನ್ನ ತೋರಿಸಬೇಕಾಗಿಲ್ಲ. ಟೊಮೆಟೋ ಕೈಯಲ್ಲಿದ್ದರೆ ಸಾಕು. ನೀವೇ ಶ್ರೀಮಂತರು. ಅದಕ್ಕೆ ಉದಾಹರಣೆಯಾಗಿದೆ ಈ ಜೋಕ್.

ಪ್ರಾಮಾಣಿಕತೆಗೂ ಟೊಮೆಟೋ ಸಾಕ್ಷಿ!

ಪ್ರಾಮಾಣಿಕತೆಗೂ ಟೊಮೆಟೋ ಸಾಕ್ಷಿ!

ಆಟೋದಲ್ಲಿ ಬಿಟ್ಟು ಹೋದ ಪರ್ಸ್ ಕೊಟ್ಟವನೇ ಮಹಾ ಪ್ರಮಾಣಿಕ ಅಂತಿತ್ತು. ಕಾಲ ಬದಲಾಗಿದೆ; ಟೊಮೆಟೋ ವಾಪಸ್ ಕೊಟ್ಟೂ ನಿಮ್ಮ ಪ್ರಾಮಾಣಿಕತೆ ಮೆರೆಯಬಹುದು. ಇದೇ ಟೊಮೆಟೋ ಮಹಿಮೆ.

',ಹುಬ್ಬಳ್ಳಿಯಲ್ಲಿ ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದ ಟೊಮೆಟೋಗಳನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೊ ಚಾಲಕ' ಎನ್ನುವುದು ಸುದ್ದಿಯೂ ಆಗಬಹುದು. ಪೇಪರಿನಲ್ಲಿ ಬಂದರೂ ಆಶ್ಚರ್ಯವಿಲ್ಲ.

ಟೊಮೆಟೋ ಸ್ಮಾರಕ

ಟೊಮೆಟೋ ಸ್ಮಾರಕ

ಪ್ರೀಯೆ ನಿನ್ನ ಸಲುವಾಗಿ ಗೋಳಗುಮ್ಮಟ ಕಟ್ಟಸ್ಲೋ ಬಾರಕಮಾನ ಕಟ್ಟಿಸ್ಲೋ ಅಂತ ಕೇಳಿದ್ರೆ ಹುಡುಗಿ ಸೈಲೆಂಟಾಗಿ ಹೇಳಿದ್ದಿಷ್ಟೆ, 'ಲೇ ಹುಚ್ಚಾ ಹಟ್ಯಾ ಮೆನೆಯಾಗ ಟೊಮೆಟೋ ಖಾಲಿ ಆಗ್ಯಾವಾ ಮೊದಲು ಅದನ್ನ ತೊಗೊಂಡ ಬಾ'! ಪಾಪ ಗೋಳಗುಮ್ಮಟವನ್ನು ಟೊಮೆಟೋ ಮೀರಿಸುತ್ತೆ ಅಂತ ಪಾಪ ಅದಕ್ಕೆ ಕಲ್ಪನೆನೂ ಇರಲಿಕ್ಕಿಲ್ಲ.

ಹೀಗೆ 'ಉತ್ತರ ಕರ್ನಾಟಕ ಸ್ಪೇಷಲ್' ಹೆಸರಿನ ಪೇಜ್‌ ನಲ್ಲೂ ಟೊಮೆಟೋ ಜೋಕ್ಸ್‌ಗಳು ಭರ್ಜರಿಯಾಗಿ ಮೂಡಿ ಬರುತ್ತಿವೆ.

 ಬರ್ತ್ ಡೇ ಗೂ ಟೊಮೆಟೋ ಗಿಫ್ಟ್

ಬರ್ತ್ ಡೇ ಗೂ ಟೊಮೆಟೋ ಗಿಫ್ಟ್

ಜೋಕ್ಸ್‌ಗಳಿಗೆ ಅನುಗುಣವಾಗಿ ಬಳಕೆ ಮಾಡುವ ಪೋಟೊಗಳೂ ಜನರನ್ನು ಆಕರ್ಷಿಸುತ್ತಿವೆ. ಇವುಗಳಿಗೆ ಸಾವಿರಾರು ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಿನ್ನ ಬರ್ತಡೇಗೆ ಏನು ಬೇಕು ಅಂತ ಕೇಳಿದರೆ ಟೊಮೆಟೋ ಕೊಡು ಎನ್ನುವಲ್ಲಿವರೆಗೆ ಕಾಲ ಬದಲಾಗಿದೆ. ಟೊಮೆಟೋದ ಡಿಮ್ಯಾಂಡೇ ಹಾಗಿದೆ.

ಸಾಯಲಿಕ್ಕ ಹೊರಟಾಗಲೂ ಟೊಮೆಟೋದ್ದೇ ಚಿಂತೆ

ಸಾಯಲಿಕ್ಕ ಹೊರಟಾಗಲೂ ಟೊಮೆಟೋದ್ದೇ ಚಿಂತೆ

ಗಂಡ ಸಾಯಲಿಕ್ಕೆ ಹೊರಟಾಗಲೂ ಹೆಂಡತಿ ಜತೆಗೆ ಬ್ಯಾಗ್ ತೆಗೊಂದು ಹೋಗಿ ಅನ್ನುತ್ತಿದ್ದಾಳೆ. ಸತ್ತಿಲ್ಲದಿದ್ದರೆ ಬರುವಾಗ ಟೊಮೆಟೋ ತರಬೇಕಂತೆ. ಗಂಡನಿಗಿಂತಲೂ ಪಾಪ ಹೆಂಡತಿಗೆ ಅಡುಗೆಗೆ ಬಳಸುವ ಟೊಮೆಟೋದ್ದೇ ಚಿಂತೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tomato price drastically hiked in market either retail or whole sale in Hubballi. Now tomato jokes were viral in Facebook, WhatsApp and twitter. Moreover special pages representing of North Karnataka are promoting tomato jokes in social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more