ನ.10 ರಂದು ಹುಬ್ಬಳ್ಳಿ-ಧಾರವಾಡದಲ್ಲಿ ಸೆಕ್ಷನ್ 144 ಜಾರಿ,ಮದ್ಯ ಬಂದ್

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ನವೆಂಬರ್. 09 : ಇತ್ತ ಬಿಜೆಪಿ ಕರಾಳ ದಿನವನ್ನಾಗಿ ಆಚರಿಸುತ್ತೇವೆ ಅನ್ನುತ್ತಿದ್ದರೇ ಇತ್ತ ಪ್ರತಿಷ್ಠೆಯಾಗಿ ಸ್ವೀಕರಿಸಿರುವ ರಾಜ್ಯ ಸರ್ಕಾರ ಟಿಪ್ಪು ಜಯಂತಿ ಮಾಡಿಯೇ ತೀರುತ್ತೇವೆ ಎನ್ನುತ್ತಿದೆ.

ಹಲವು ವಿರೋಧಗಳ ನಡುವೆಯೂ ಜಿಲ್ಲೆಗಳಲ್ಲಿ ನಿಷೇಧಾಜ್ಷೆ ಜಾರಿ ಮಾಡಿ ಟಿಪ್ಪು ಜಯಂತಿ ಆಚರಣೆ ಮಾಡುವುದು ಜರೂರತ್ ಆದರೂ ಏನು ಎಂಬುವುದು ಸಾರ್ವಜನಿಕರ ಪ್ರಶ್ನೆ.

ಈ ತೀವ್ರ ವಿವಾದಹಿನ್ನಲೆಯಲ್ಲಿ ಟಿಪ್ಪು ಜಯಂತಿ ವೇಳೆ ಅಹಿತಕರ ಘಟನೆಗಳು ತಡೆಯುವ ಉದ್ದೇಶದಿಂದ ಅವಳಿ ನಗರಗಳಲ್ಲಿ ನ.10 ರಂದು 144 ಸೆಕ್ಷನ್ ಜಾರಿಗೊಳಿಸಲಾಗಿದೆ ಹಾಗೂ ಬೆಳಿಗ್ಗೆಯಿಂದ ಮಧ್ಯರಾತ್ರಿ ವರೆಗೆ ಮದ್ಯ ಮಾರಾಟ ಕೂಡ ನಿಷೇಧಿಸಲಾಗಿದೆ ಎಂದು ಹು-ಧಾ ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ ತಿಳಿಸಿದ್ದಾರೆ.

Tipu Jayanti:imposed prohibitory orders under section 144 in hubballi-dharwad

ಮುಂಜಾಗೃತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ನ.10 ರ ಬೆಳಗ್ಗೆ 5ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಜಾರಿಯಲ್ಲಿರಲ್ಲಿದೆ. ನಗರದಲ್ಲಿ ಸಂಪೂರ್ಣ ಭದ್ರತೆ ಒದಗಿಸಲಾಗಿದ್ದು, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ರಾಣೆ ಹೇಳಿದ್ದಾರೆ.

ಟಿಪ್ಪು ಜಯಂತಿ ವಿರೋಧಿಸಿ ಮುತ್ತಿಗೆ, ಪ್ರತಿಭಟನೆ ಮತ್ತಿತರ ಚಟುವಟಿಕೆಗಳನ್ನು ನಡೆಸುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ನಿಷೇಧಾಜ್ಞೆ ವೇಳೆ ಶಾಂತಿ ಕದಡುವವರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ರಾಣೆ ತಿಳಿಸಿದ್ದಾರೆ.

ದೇವಸ್ಥಾನದಲ್ಲಿ ಕಳ್ಳತನ : ಧಾರವಾಡ ಕೆಲಗೇರಿ ಕಲ್ಮೇಶ್ವರ ಗುಡಿಯ ಶೆಟರ್ಸ್ ಮುರಿದು ದೇವಸ್ಥಾನದ ಹುಂಡಿಯೊಂದಿಗೆ ಅಂದಾಜು 1,00,000 ರೂ ಹಣವನ್ನು ದೋಚಿ ಪರಾರಿಯಾಗಿದ್ದಾರೆ.

ಮನೆಗಳ್ಳತನ: ಹಳೇಹುಬ್ಬಳ್ಳಿ ಲೋಹಿಯಾನಗರದ ಚಂದ್ರಗೌಡ ಹಿರೇಗೌಡ್ರ ಎಂಬುವರ ಮನೆ ಕೀಲಿ ಮುರಿದು 1,35,050 ರೂ. ಮೌಲ್ಯದ 64 ಗ್ರಾಂ ಬಂಗಾರ ಮತ್ತು 235 ಗ್ರಾಂ ಬೆಳ್ಳಿಯ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ.

ಸಂಚಾರ ನಿಯಮ ಉಲ್ಲಂಘನೆ: ಸಂಚಾರ ನಿಯಮ ಉಲ್ಲಂಘನೆ ಮಾಡಿದ 797 ಕೇಸ್ ದಾಖಲಿಸಿ 99,400 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The hubblli dharwad police commissioner Panduranga Rane has imposed prohibitory orders under section 144 and liquor ban in the district from 6 am on November 10 to 12 pm, for ahead Tipu Jayanti celebration precautionary measure.Public meetings, and rallies are banned during this period said commissioner.
Please Wait while comments are loading...