ಗಮನಿಸಿ ಹುಬ್ಬಳ್ಳಿ ನಿಲ್ದಾಣದ ರೈಲುಗಳ ಸಮಯ ಬದಲು: ಹೊಸ ವೇಳಾಪಟ್ಟಿ ಇಲ್ಲಿದೆ

ಹುಬ್ಬಳ್ಳಿ, ಮೇ 30: ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣಕ್ಕೆ ಆಗಮಿಸುವ ಕೆಲವು ರೈಲುಗಳ ಆಗಮನ ಮತ್ತು ನಿರ್ಗಮನದ ಸಮಯದಲ್ಲಿ ಬದಲಾವಣೆ ಆಗಿದೆ. ನೈಋತ್ಯ ರೈಲ್ವೆಯು ಪರಿಷ್ಕರಿಸಿದ ಈ ರೈಲುಗಳ ಸಮಯ ಮತ್ತು ದಿನಾಂಕಗಳ ಮಾಹಿತಿ ಇಲ್ಲಿದೆ.

* ಮುಂದಿನ ಜೂನ್ 21 ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 16532 ಕೆಎಸ್ಆರ್ ಬೆಂಗಳೂರು-ಅಜ್ಮೀರ್ ಗರೀಬ್ ನವಾಜ್ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣಕ್ಕೆ ಬೆಳಗ್ಗೆ 06:00/06:10 ಗಂಟೆಯ ಬದಲು 05:35 ಗಂಟೆಗೆ ಆಗಮಿಸಿದೆಲಿ. ಇಲ್ಲಿಂದ 05:45 ಗಂಟೆಗೆ ಹೊರಡಲಿದೆ.

SWR Hubballi Railway Station Change of Train Arriving and Will Left Time Check Revision details

* 2024 ಜೂನ್ 22 ರಿಂದ ರೈಲು ಸಂಖ್ಯೆ 16506 ಕೆಎಸ್ಆರ್ ಬೆಂಗಳೂರು-ಗಾಂಧಿ ಧಾಮ್ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣಕ್ಕೆ ಬೆಳಗ್ಗೆ 06:00/06:10 ಗಂಟೆ ಆಗಮಿಸುವ ಬದಲು 05:35 ಗಂಟೆಗೆ ಆಗಮಿಸಲಿದೆ. ಇಲ್ಲಿಂದ 05:45 ಗಂಟೆಗೆ ಮುಂದೆ ಪ್ರಯಾಣ ಬೆಳೆಸಲಿದೆ.

* ಜೂನ್ 23ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 16534 ಕೆಎಸ್ಆರ್ ಬೆಂಗಳೂರು-ಜೋಧಪುರ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣಕ್ಕೆ ಬೆಳಗ್ಗೆ 06:00/06:10 ಗಂಟೆಯ ಬದಲು 05:35 ಗಂಟೆಗೆ ಆಗಮಿಸಲಿದೆ, ಅಲ್ಲಿಂದ 05:45 ಗಂಟೆಗೆ ಮುಂದಿನ ನಿಲ್ದಾಣಕ್ಕೆ ತೆರಳಲಿದೆ.

* ಜೂನ್ 24 ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 16508 ಕೆಎಸ್ಆರ್ ಬೆಂಗಳೂರು-ಜೋಧಪುರ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣಕ್ಕೆ ಬೆಳಗ್ಗೆ 06:00/06:10 ಗಂಟೆಯ ಬದಲು 05:35 ಗಂಟೆಗೆ ಆಗಮಿಸುತ್ತದೆ. ನಂತರ 05:45 ಗಂಟೆಗೆ ನಿಲ್ದಾಣದಿಂದ ಹೊರಡುತ್ತದೆ.

* 2024 ಜೂನ್ 25ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 16210 ಮೈಸೂರು-ಅಜ್ಮೀರ್ ದ್ವಿ-ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣಕ್ಕೆ ಬೆಳಗ್ಗೆ 06:00/06:10 ಗಂಟೆಯ ಬದಲು 05:35 ಗಂಟೆಗೆ ಆಗಮಿಸಿ, 05:45 ಗಂಟೆಗೆ ತೆರಳುತ್ತದೆ.

ಸುಗಮ ಮತ್ತು ತೊಂದರೆ ರಹಿತ ಪ್ರಯಾಣ ಬೆಳೆಸುವುದನ್ನು ಖಚಿತಪಡಿಸಿಕೊಳ್ಳಲು ಪ್ರಯಾಣಿಕರು ಈ ಪರಿಷ್ಕೃತ ಸಮಯವನ್ನು ಗಮನಿಸಲು ನೈರುತ್ಯ ರೈಲ್ವೆ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ ಕನಮಡಿ ಮಾಹಿತಿ ನೀಡಿದ್ದಾರೆ.

SWR Hubballi Railway Station Change of Train Arriving and Will Left Time Check Revision details

ವಿವಿಧ ರೈಲುಗಳನ್ನು ಪುನಾರಂಭಿಸಲು ಮನವಿ

ಪ್ರಯಾಣಿಕರಿಗೆ ಇನ್ನಿತರ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ರಾಷ್ಟ್ರೀಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಮಾಜಿ ಸದಸ್ಯ ಬಾಬುಲಾಲ್ ಜಿ. ಜೈನ್ ನೇತೃತ್ವದ ನಿಯೋಗ ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ ಅವರಿಗೆ ಬುಧವಾರ ಮನವಿ ಸಲ್ಲಿಸಿತು.

ಬೆಳಗಾವಿ- ಬದ್ರಾಚಲಮ್ ರೈಲು ಸಂಚಾರ ರದ್ದುಗೊಂಡಿದೆ. ಈ ರೈಲು ಹೊಸಪೇಟೆ ಮತ್ತು ಬಳ್ಳಾರಿ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಿತ್ತು. ಹೊಸಪೇಟ-ಬಳ್ಳಾರಿ-ಕೊಪ್ಪಳ ಮಾರ್ಗ ಬಹುದೊಡ್ಡ ಕೈಗಾರಿಕೆ ಮಾರ್ಗವಾಗಿದೆ ಹಾಗೂ ಹೈದ್ರಾಬಾದ್‌ನಿಂದ ವಿಮಾನ ಪ್ರಯಾಣ ಪ್ರಾರಂಭಿಸಲು ಅನೇಕರು ಈ ರೈಲನ್ನು ಬಳಸುತ್ತಿದ್ದರು. ಹೀಗಾಗಿ, ಈ ರೈಲು ಸಂಚಾರವನ್ನು ಮರಳಿ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.

ಹುಬ್ಬಳ್ಳಿ-ಗುಂತಕಲ್ ರೈಲು ಸಂಚಾರ ಇದೀಗ ರೈಲ್ವೆ ಕಾಮಗಾರಿಯಿಂದಾಗಿ ತೋರಣಗಲ್ಲುವರೆಗೆ ಮಾತ್ರ ಸಂಚರಿಸುತ್ತಿದೆ. ರೈಲ್ವೆ ಕಾಮಗಾರಿಯಿಂದಾಗಿ ಗುಂಟೂರು ರೈಲ್ವೆ ವಿಭಾಗ ಹುಬ್ಬಳ್ಳಿ- ವಿಜಯವಾಡ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದೆ. ಕಾಮಗಾರಿಯನ್ನು ವೇಗವಾಗಿ ಮುಗಿಸಿ, ಶೀಘ್ರ ರೈಲು ಸಂಚಾರ ಮರಳಿ ಪ್ರಾರಂಭಿಸುವಂತೆ ಆಗ್ರಹಿಸಲಾಯಿತು. ಮಳೆಯಿಂದಾಗಿ ಹೊಸಪೇಟ ರೈಲು ನಿಲ್ದಾಣದ ಛಾವಣಿ ಸೋರುತ್ತಿದ್ದು, ಸರಿಪಡಿಸುವಂತೆ ಮನವಿ ಸಂಘ ಮನವಿ ಮಾಡಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+