Breaking; ಹುಬ್ಬಳ್ಳಿ-ವಿಜಯವಾಡ ರೈಲು ಆರಂಭ, ವೇಳಾಪಟ್ಟಿ

ಹುಬ್ಬಳ್ಳಿ, ಏಪ್ರಿಲ್ 20; ನೈಋತ್ಯ ರೈಲ್ವೆ ಹುಬ್ಬಳ್ಳಿ-ವಿಜಯವಾಡ ನಡುವಿನ ಪ್ರತಿದಿನದ ಎಕ್ಸ್‌ಪ್ರೆಸ್ ರೈಲು ಸೇವೆಗೆ ಬುಧವಾರ ಚಾಲನೆ ನೀಡಲಿದೆ. ಆಂಧ್ರ ಪ್ರದೇಶಕ್ಕೆ ಸಂಚಾರ ನಡೆಸುವ ಜನರಿಗೆ ಈ ರೈಲು ಸೇವೆಯಿಂದ ಅನುಕೂಲವಾಗಲಿದೆ.

ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ಸ್ವಾಮೀಜಿ ರೈಲು ನಿಲ್ದಾಣದಿಂದ ವಿಜಯವಾಡಕ್ಕೆ ಪ್ರತಿದಿನ ಈ ರೈಲು ಸಂಚಾರ ನಡೆಸಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ. ಹುಬ್ಬಳ್ಳಿಯಿಂದ ಬುಧವಾರ ರೈಲು ಸಂಚಾರ ಆರಭವಾಗಲಿದೆ. ಏಪ್ರಿಲ್ 21ರಂದು ವಿಜಯವಾಡದಿಂದ ಸಂಚಾರ ಪ್ರಾರಂಭವಾಗಲಿದೆ.

SSS Hubballi Vijayawada Daily Express Train Schedule

ರೈಲು ಸಂಖ್ಯೆ 17329/ 17330 ಎಸ್. ಎಸ್. ಎಸ್.‌ ಹುಬ್ಬಳ್ಳಿ-ವಿಜಯವಾಡ ನಡುವೆ ಪ್ರತಿದಿನ ಸಂಚಾರ ನಡೆಸಲಿವೆ. ಈ ರೈಲಿನಲ್ಲಿ ಎಸಿ 3ಟೈರ್, ಸ್ಲೀಪರ್ ಮತ್ತು ಸಾಮಾನ್ಯ ದ್ವಿತೀಯ ದರ್ಜೆಯ ಬೋಗಿಗಳು ಇರಲಿವೆ.

ವೇಳಾಪಟ್ಟಿ; ರೈಲು ಸಂಖ್ಯೆ 17329 ಎಸ್‌. ಎಸ್. ಎಸ್. ಹುಬ್ಬಳ್ಳಿ-ವಿಜಯವಾಡ ರೈಲು ಹುಬ್ಬಳ್ಳಿಯಿಂದ 19.30ಕ್ಕೆ ಹೊರಡಲಿದೆ. ವಿಜಯವಾಡದಿಂದ ರೈಲು ಸಂಖ್ಯೆ 17330 13.50ಕ್ಕೆ ಹೊರಡಲಿದೆ.

ಈ ರೈಲು ಗದಗ ಜಂಕ್ಷನ್, ಭಾಣಾಪುರ, ಕೊಪ್ಪಳ, ಮುನಿರಾಬಾದ್, ಹೊಸಪೇಟೆ, ತೋರಣಗಲ್ಲು, ಕುಡತಿನಿ, ಬಳ್ಳಾರಿ, ಬಂಟನಹಾಲ್, ಗುಂತಕಲ್ಲು, ಮುದ್ದಿಕೆರ, ತುಗ್ಗಲಿ, ಪಂಡೇಕಲ್ಲು, ಲಿಂಗನೇನಿ ದೊಡ್ಡಿ, ಮಲ್ಲಿಯಾಲ, ಡೋನ್, ರಂಗಾಪುರಂ, ಬೇತಂರ್ಚೆಲ, ಬಿ. ಸಿಮೆಂಟ್ ನಗರ್, ಪಾಣ್ಯಂ ನಲ್ಲಿ ನಿಲುಗಡೆಗೊಳ್ಳಲಿದೆ.

ನಂದ್ಯಾಲ, ಗಾಜುಲಪಲ್ಲಿ, ದಿಗುವಟ್ಟುಮೆಟ್ಟ, ಗಿದ್ದಲೂರು, ಸೋಮಿದೇವಿಪಲ್ಲೆ, ಕಂಬಂ, ತುರ್ಲುಪಾಡು, ಮಾರ್ಕಾಪುರ್ ರೋಡ್, ದೊನಕೊಂಡ, ಕುರಿಚೇಡು, ವಿನುಗೊಂಡ, ಶಾವಲ್ಯಪುರಂ, ಸಂತಮಾಗುಲೂರು, ನರಸರಾವು ಪೇಟ, ನುದುರುಪಾಡು, ಪೇರೆಚೆರ್ಲ, ನಲ್ಲಪಾಡು ಜಂಕ್ಷನ್, ಗುಂಟೂರು ಜಂಕ್ಷನ್, ನಂಬೂರು ಮತ್ತು ಮಂಗಳಗಿರಿಯಲ್ಲಿ ಸಹ ನಿಲುಗಡೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+