SWR Revenue: ಸರಕು ಸಾಗಣೆಯಲ್ಲಿ ದಾಖಲೆ ಬರೆದ ನೈಋತ್ಯ ರೈಲ್ವೆ: ಅಂಕಿ-ಸಂಖ್ಯೆ ಗಮನಿಸಿ
ಬೆಂಗಳೂರು, ಏಪ್ರಿಲ್ 09: ಕರ್ನಾಟಕ ಸೇರಿದಂತೆ ದೇಶದ ದಕ್ಷಿಣ ರಾಜ್ಯಗಳಿಗೆ ಅತ್ಯುತ್ತಮ ಸೇವೆ ನೀಡುತ್ತಿರುವ ನೈಋತ್ಯ ರೈಲ್ವೆ ವಲಯವು (SWR) ಕಳೆದ ಆರ್ಥಿಕ ಒಂದು ವರ್ಷದಲ್ಲಿ (2023-24) ಅತ್ಯುತ್ತಮ ಸಾಧನೆ ಮಾಡಿದೆ.
ಹಿಂದಿನ ಹಣಕಾಸು ವರ್ಷ 2023-24ರ ಅವಧಿಯಲ್ಲಿ ನೈಋತ್ಯ ರೈಲ್ವೆಯು ಸರಕು ಸಾಗಾಣೆಯ ಪ್ರಮಾಣ, ಆದಾಯವನ್ನು ಹೆಚ್ಚಿಸಿಕೊಂಡು ಬೆಳವಣಿಗೆ ಸಾಧಿಸಿದೆ. ಈ ಅವಧಿಯಲ್ಲಿ ಒಟ್ಟು ₹50.37 ಮಿಲಿಯನ್ ಟನ್‌ಗಳಷ್ಟು ಸರಕು ಸಾಗಣೆ ಮಾಡಿದೆ. ಈ ಪ್ರಮಾಣ ಮೊದಲಿಗಿಂತಲೂ ಹೆಚ್ಚಿನದ್ದು, ಇದರಿಂದ ರೈಲ್ವೆಯು ಕಳೆದ ಹಣಕಾಸು ವರ್ಷದಲ್ಲಿ 7.9ರಷ್ಟು ಬೆಳವಣಿಗೆ ದಾಖಲಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಮೂಲ ಸರಕು ಸಾಗಾಣೆಯಿಂದ (2023-24) ನೈಋತ್ಯ ರೈಲ್ವೆಗೆ ಆದಾಯವು ₹5022.85 ಕೋಟಿ ಗಳಿಕೆ ಆಗಿದೆ. ಇದು ಹಿಂದೆ ರೈಲ್ವೆ ವಲಯ ಗಳಿಸಿದ್ದ ಆದಾಯಕ್ಕಿಂತ ಅಧಿಕವಾಗಿದೆ. ಅಂದರೆ ಹಿಂದಿನ ವರ್ಷದ ಸಾಧನೆಗಿಂತ ಶೇಕಡಾ 8.94 ರಷ್ಟು ಹೆಚ್ಚಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪಾರ್ಸೆಲ್ ಸೇರಿ ವಿವಿಧ ವಿಭಾಗದ ಆದಾಯ ಏರಿಕೆ
ನೈಋತ್ಯ ರೈಲ್ವೆಯು ಪಾರ್ಸೆಲ್ ವಿಭಾಗ ಒಂದರಲ್ಲಿಯೇ ಈ (2023-24) ಅವಧಿಯಲ್ಲಿಬರೋಬ್ಬರಿ 157.69 ಕೋಟಿ ರೂಪಾಯಿ ಆದಾಯ ಗಳಿಕೆ ಮಾಡಿದೆ. 2023-24ರ ಆರ್ಥಿಕ ವರ್ಷದಲ್ಲಿ ವಲಯವು 658 ಆಟೋಮೊಬೈಲ್ ರೇಕ್‌ಗಳನ್ನು ಲೋಡ್ ಮಾಡಿದೆ. ಇದು ಸೇರಿದಂತೆ ವಿವಿಧ ಮೂಲಗಳಿಂದ ಒಟ್ಟು ₹333.46 ಕೋಟಿ ರೂಪಾಯಿ ಸಂಗ್ರಹಿಸಿದೆ. ಜೊತೆಗೆ ಸ್ಕ್ರ್ಯಾಪ್ ಮಾರಾಟದಿಂದ ರೂಪಾಯಿ ₹155.32 ಗಳಿಕೆ ಮಾಡಿದೆ.
ವಿದ್ಯುದೀಕರಣ ಪೂರ್ಣದ ಮಾಹಿತಿ
ನೈಋತ್ಯ ರೈಲ್ವೇ ವ್ಯಾಪ್ತಿಯಲ್ಲಿ 29 ಕಿಮೀ ಹೊಸ ಮಾರ್ಗಗಳನ್ನು ನಿರ್ಮಿಸಲಾಗಿದೆ. 43 ಕಿಮೀ ಡಬ್ಲಿಂಗ್ ಹಾಗೂ 611 ಕಿಮೀ ವಿದ್ಯುದ್ದೀಕರಣ ಪೂರ್ಣಗೊಳಿಸಿದೆ. ಇದೇ ವರ್ಷ 2024ರ ಮಾರ್ಚ್ ಒಂದೇ ತಿಂಗಳಲ್ಲಿ 5.06 ಮಿಲಿಯನ್ ಟನ್‌ಗಳ ಸರಕು ಸಾಗಣೆಯ ಮೂಲಕ ಶೇಕಡಾ 2.26ರಷ್ಟು ಏರಿಕೆ ಮೂಲಕ ದಾಖಲೆ ನಿರ್ಮಿಸಿದೆ. ಇದೇ ಅವಧಿ ಮಾರ್ಚ್ 2023ರಲ್ಲಿ ರೈಲ್ವೆಯು 4.95 ಮಿಲಿಯನ್ ಟನ್ ಸರಕು ಸಾಗಾಣೆ ಮಾಡಿದೆ ಎಂದು ರೈಲ್ವೆ ವಲಯವು ಪ್ರಕಟಣೆಯಲ್ಲಿ ತಿಳಿಸಿದೆ.

ಹುಬ್ಬಳ್ಳಿ:7 ವರ್ಷಗಳ ನಂತರ ಹೆಚ್ಚು ಸರಕು ಸಾಗಾಣೆ
ರೈಲ್ವೆ ವಲಯದ ಉತ್ತರ ಕರ್ನಾಟಕದ ಹುಬ್ಬಳ್ಳಿ ವಿಭಾಗವು ಏಳು ವರ್ಷಗಳ ಬಳಿಕ ಅತ್ಯಧಿಕ ಸರಕು ಸಾಗಾಣೆ ಮಾಡಿದೆ. ಹೌದು, ಹುಬ್ಬಳ್ಳಿಯು 36.551 ಮಿಲಿಯನ್ ಟನ್‌ಗಳನ್ನು ಸರಕುಗಳ ಲೋಡ್ ಮಾಡಿದೆ. ಇದೇ ರೀತಿ ಮೈಸೂರು ವಿಭಾಗವು 11.65 ಮಿಲಿಯನ್ ಟನ್‌ಗಳಷ್ಟು ಸರಕು ಸಾಗಣೆ ಮಾಡಿದರೆ, ಸಾಧಿಸಿದ್ದು, ಇದು ಅದರ ಹಿಂದಿನ ವರ್ಷ (2022-23ರಲ್ಲಿ) 9.54 ಮಿಲಿಯನ್ ಟನ್‌ಗಳಷ್ಟು ಸರಕು ದಾಖಲಿಸಿದೆ.
ಇನ್ನೂ ದಕ್ಷಿಣ ಕರ್ನಾಟದ ಬೆಂಗಳೂರು ವಿಭಾಗವು 2.17 ಮಿಲಿಯನ್ ಟನ್‌ಗಳಷ್ಟು ಸರಕು ಸಾಗಣೆಯಲ್ಲಿ ಪ್ರತಿ ವರ್ಷಕ್ಕಿಂತಲೂ ಈ ವರ್ಷ ಹೆಚ್ಚಿನ ಸರಕು ಸಾಗಾಣೆ ಮಾಡಿ ದಾಖಲೆ ಬರಿದಿದೆ. ಇದೇ ಅವಧಿಯಲ್ಲಿ ಅದರ ಹಿಂದಿನ ವರ್ಷ (2022-23ರ) ಬೆಂಗಳೂರು ವಿಭಾಗದಿಂದ ಕೇವಲ 1.91 ಮಿಲಿಯನ್ ಟನ್‌ಗಳಷ್ಟು ಸರಕು ಸಾಗಾಣೆ ಮಾಡಿದೆ.
ನೈಋತ್ಯ ರೈಲ್ವೆಯ ಈ ಸಾಧನೆಗಾಗಿ ವಲಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯ, ನಿರಂತರ ಶ್ರಮವನ್ನು ವಲಯದ ಪ್ರಧಾನ ವ್ಯವಸ್ಥಾಪಕ ಅರವಿಂದ್ ಶ್ರೀವಾಸ್ತವ ಅವರು ಶ್ಲಾಘಿಸಿದ್ದಾರೆ
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ












Click it and Unblock the Notifications