ಮತ್ತೊಂದು ದಾಖಲೆ ಸೃಷ್ಟಿಸಿದ ನೈಋತ್ಯ ರೈಲ್ವೆ: ಸರಕು ಸಾಗಣೆಯಲ್ಲಿ ದಾಖಲೆ..!

ಹುಬ್ಬಳ್ಳಿ, ಡಿಸೆಂಬರ್‌ 23: ವಾಣಿಜ್ಯನಗರಿ ಹುಬ್ಬಳ್ಳಿಯ ನೈಋತ್ಯ ರೈಲ್ವೆ ಹಲವಾರು ದಾಖಲೆಗಳನ್ನು ಮುಡಿಗೇರಿಸಿಕೊಂಡಿದೆ. ಪ್ರಯಾಣಿಕರ ಸೇವೆಯಲ್ಲಿ ಮಾತ್ರವಲ್ಲದೆ ಸರಕು ಸಾಗಣೆಯಲ್ಲಿಯೂ ಕೂಡ ನೈಋತ್ಯ ರೈಲ್ವೆ ವಲಯ ದಾಖಲೆ ಮಾಡಿದೆ.

ವಾಣಿಜ್ಯನಗರಿ ಹುಬ್ಬಳ್ಳಿಯ ನೈಋತ್ಯ ರೈಲ್ವೆ ವಲಯಕ್ಕೆ ಹುಬ್ಬಳ್ಳಿ ಆರಾಧ್ಯದೈವ ಸಿದ್ಧಾರೂಢರ ಹೆಸರನ್ನು ನಾಮಕರಣ ಮಾಡಿದ್ದೇ ತಡ ಸಾಲು ಸಾಲು ಹಲವಾರು ದಾಖಲೆಗಳನ್ನು ಮಾಡುತ್ತಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.

ಸರಕು ಸಾಗಣೆಯಲ್ಲಿ ಹುಬ್ಬಳ್ಳಿ ರೈಲ್ವೆ ವಿಭಾಗವು ಈ ವರ್ಷ 2500 ಕೋಟಿ ರೂಪಾಯಿ ಆದಾಯಗಳಿಸಿದ್ದು, ಒಂದು ವರ್ಷದಲ್ಲಿ 84 ಕಿ.ಮೀ ಜೋಡಿ ಮಾರ್ಗ ಪೂರ್ಣಗೊಳಿಸಲಾಗಿದೆ. 36ನೇ ವಿಭಾಗೀಯ ರೈಲ್ವೆ ಬಳಕೆದಾರರ ಸಲಹಾ ಸಮಿತಿಯ ಸಭೆಯಲ್ಲಿ ಮಹತ್ವದ ಮಾಹಿತಿಯನ್ನು ನೀಡಿದ್ದು, ಮೂಲಭೂತ ಸೌಕರ್ಯ ಅಭಿವೃದ್ಧಿ ಮತ್ತು ಪ್ರಯಾಣಿಕ ಸೌಲಭ್ಯಗಳ ಸುಧಾರಣೆಗೆ ವಿಶೇಷ ಒತ್ತು ನೀಡಲಾಗುತ್ತಿದೆ.

South Western Railway Created A Record In Goods Transport

ಈ ಸಭೆಯಲ್ಲಿ ನಡೆಯುವ ಚರ್ಚೆಯು ಮತ್ತಷ್ಟು ಉತ್ತಮ ಸೌಲಭ್ಯ ಮತ್ತು ಸುಧಾರಿತ ಸೇವೆಯನ್ನು ಒದಗಿಸುವ ರೈಲ್ವೆಯ ಪ್ರಯತ್ನಕ್ಕೆ ಸಹಾಯ ಮಾಡಲಿದೆ. ಈ ನಿಟ್ಟಿನಲ್ಲಿ ವ್ಯವಸ್ಥಿತ ಸೇವೆಯ ಮೂಲಕ ನೈಋತ್ಯ ರೈಲ್ವೆ ಇಂತಹದೊಂದು ಸಾಧನೆ ಮಾಡಿರುವುದು ವಿಶೇಷವಾಗಿದೆ.

ಇನ್ನು ರೈಲ್ವೆಯು ಒದಗಿಸುತ್ತಿರುವ ಸೇವೆ ಮತ್ತು ಸುಧಾರಣೆಗಳ ಬಗ್ಗೆ ರೈಲ್ವೆ ಆಡಳಿತ ಮತ್ತು ರೈಲ್ವೆ, ಬಳಕೆದಾರರ ನಡುವೆ ಸಲಹೆ, ಸಮಾಲೋಚನೆಗೆ ವೇದಿಕೆಯನ್ನು ಒದಗಿಸಲು ರೈಲ್ವೆ ವಿಭಾಗಗಳಲ್ಲಿ ಡಿ.ಆರ್.ಯು.ಸಿ.ಸಿ.ಗಳನ್ನು ರಚಿಸಲಾಗಿದೆ. ಮೂಲಭೂತ ಸೌಕರ್ಯ ಕಾಮಗಾರಿಗಳು, ಪ್ರಯಾಣಿಕ ಸೌಲಭ್ಯಗಳು, ರೈಲುಗಳ ನಿಲುಗಡೆ, ರೈಲುಗಳ ವಿಸ್ತರಣೆ ಇತ್ಯಾದಿ ವಿಷಯಗಳ ಕುರಿತು ಚರ್ಚಿಸಿದ್ದು, ಮತ್ತಷ್ಟು ಅಭಿವೃದ್ಧಿ ಕಾರ್ಯಗಳ ಮೂಲಕ ನೈಋತ್ಯ ರೈಲ್ವೆ ವಿನೂತನ ಸೇವೆಯಿಂದ ಹೊರಹೊಮ್ಮಿದೆ.

ಒಟ್ಟಿನಲ್ಲಿ ಈ ಹಿಂದಿನ ಹಲವಾರು ದಾಖಲೆಗಳನ್ನು ನೈಋತ್ಯ ರೈಲ್ವೆ ಬ್ರೇಕ್ ಮಾಡಿದ್ದು, ಈಗ ಮತ್ತಷ್ಟು ಹೊಸ ತಂತ್ರಜ್ಞಾನ ಹೊಸ ವೈಜ್ಞಾನಿಕ ನಿರ್ಧಾರದ ಮೂಲಕ ಜನಮಾನಸದಲ್ಲಿ ಉಳಿದಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೆಸರು ಮಾಡಲಿ ಎಂಬುವುದು ಎಲ್ಲರ ಆಶಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+