ವೇತನ‌ ಪರಿಷ್ಕರಣೆ: ಸರ್ಕಾರಕ್ಕೆ ಶಾಕ್ ನೀಡಲು ತಯಾರಾದ ಹೆಸ್ಕಾಂ ನೌಕರರು: ಸಿಎಂ ಕೊಟ್ಟ ಭರವಸೆ ಏನು?

ವೇತನ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಪಿಟಿಸಿಎಲ್‌ ನೌಕರರು ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.

ಹುಬ್ಬಳ್ಳಿ, ಮಾರ್ಚ್‌, 15: ವೇತನ ಪರಿಷ್ಕರಣೆ ಸೇರಿದಂತೆ ಸರ್ಕಾರಿ ನೌಕರರು ಈಗಾಗಲೇ ಸರ್ಕಾರಕ್ಕೆ ಮುಷ್ಕರದ ಬಿಸಿ ಮುಟ್ಟಿಸಿದ್ದಾರೆ. ಈ ಮೂಲಕ ತಮ್ಮ ಬೇಡಿಕೆಗಳ ಕುರಿತು ಒಂದೆಡೆ ಶಕ್ತಿ ಪ್ರದರ್ಶನ ಮಾಡಿದ್ದಾಯಿತು. ಇದೀಗ ನಿಗಮಗಳ ಸರದಿ ಬಂದಿದ್ದು, ಕೆಪಿಟಿಸಿಎಲ್‌ನ ನೌಕರರು ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.

ಕೆಪಿಟಿಸಿಎಲ್‌ನ ನೌಕರರು ವೇತನ‌ ಪರಿಷ್ಕರಣೆ, ಒಪಿಎಸ್ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂಬ ಹಠಕ್ಕೆ ಮುಂದಾಗಿದ್ದಾರೆ. ಹೆಸ್ಕಾಂ ನೌಕರರು ಇದೇ ಮಾರ್ಚ್ 16ರಿಂದ ರಾಜ್ಯವ್ಯಾಪಿ ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ. ಹೀಗೆ ಮೂಲಕ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಸಾಥ್‌ ನೀಡುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲಿದ್ದಾರೆ.

Salary revision: Strike by Hescom employees from March 16 in hubballi

ಸ್ಪಂದನೆ ನೀಡಡ ಮಂಡಳಿ
ವೇತನ ಪರಿಷ್ಕರಣೆ ಸೇರಿದಂತೆ ಹಲವು ಬೇಡಿಕೆಗಳ ಕುರಿತಂತೆ ಆಡಳಿತ ಮಂಡಳಿಯಿಂದ 14 ದಿನಗಳವರೆಗೆ ನೋಟೀಸ್ ಜಾರಿ ಮಾಡಲಾಗಿದೆ. ಆದರೂ 10 ದಿನಗಳು ಕಳೆದರೂ ಮಂಡಳಿಯಿಂದ ಯಾವುದೇ ಸ್ಪಂದನೆ ದೊರೆತಿಲ್ಲ. ಈ ಹಿನ್ನೆಲೆ ಇದೀಗ ಇದೇ ಮಾರ್ಚ್‌ 16ರಿಂದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಹುಬ್ಬಳ್ಳಿಯಲ್ಲೂ ತಯಾರಿ ನಡೆಸಿದ್ದಾರೆ.

ಮಾರ್ಚ್‌ 16ರಿಂದ ಮುಷ್ಕರಕ್ಕೆ ಕರೆ
ಇನ್ನು ಪ್ರಮುಖವಾಗಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೇತೃತ್ವದಲ್ಲಿ ಈಗಾಗಲೇ ಇದೇ ಮಾರ್ಚ್‌ 16ರಿಂದ ಮುಷ್ಕರಕ್ಕೆ ಕರೆ ಕೊಡಲಾಗಿದೆ. ಇದರ ಬೆನ್ನಲ್ಲೇ ಹೆಸ್ಕಾಂ ನೌಕರರೂ ಸಹ ಮುಷ್ಕರಕ್ಕೆ ಸಾಥ್ ನೀಡಿದ್ದಾರೆ. ಕರ್ತವ್ಯಕ್ಕೆ ಹಾಜರಾಗದೇ ತಮ್ಮ ಬೇಡಿಕೆಗಳಿಗೆ ಸ್ಪಂದನೆ ನೀಡುವಂತೆ ಮುಷ್ಕರಕ್ಕೆ ಮುಂದಾಗಲಿದ್ದಾರೆ. ಈ ಮೂಲಕ ಹೆಸ್ಕಾಂ ವ್ಯಾಪ್ತಿಯ 50 ಸಾವಿರಕ್ಕೂ ಅಧಿಕ ನೌಕರರು ಮುಷ್ಕರರದಲ್ಲಿ ಭಾಗವಹಿಸಲು ನಿರ್ಧರಿಸಿದ್ದಾರೆ.

Salary revision: Strike by Hescom employees from March 16 in hubballi

ಈ ಕುರಿತಂತೆ ಸರ್ಕಾರ ಸ್ಪಂದನೆ ಮಾಡದಿದ್ದಲ್ಲಿ ನಿರಂತರವಾಗಿ ಅನಿರ್ಧಿಷ್ಠಾವಧಿ ಮುಷ್ಕರದ ಎಚ್ಚರಿಕೆ ನೀಡಿದ್ದಾರೆ. ನೌಕರರು ಸರ್ಕಾರದ ಎದುರು ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾಗಿರುವುದು ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ, ನಮ್ಮ ಸಚಿವರು ಅವರೊಂದಿಗೆ ಸಂಪರ್ಕದಲ್ಲಿದ್ದು, ಅವರ ಜೊತೆಗೆ ಮಾತುಕತೆ ನಡೆಸಿದ್ದಾರೆ. ಮುಷ್ಕರ ನಿಲ್ಲಿಸುವಂತೆ ಮನವೊಲಿಸುವ ಪ್ರಕ್ರಿಯೆ ನಡೆದಿದೆ ಎಂದು ಹೇಳಿದರು.

ಒಟ್ಟಾರೆ ಸರ್ಕಾರ ನೌಕರರ ಬೇಡಿಕೆ ಈಡೇರಿಸುವ ಮೂಲಕ ಅವರ ಹಿತ ಕಾಪಾಡುತ್ತಾ ಅನ್ನುವುದನ್ನು ಕಾದುನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+