ದಸರಾ ರಜೆ; ಪ್ರಯಾಣಿಕರಿಗೆ ಸಿಹಿ ಸುದ್ದಿ ಕೊಟ್ಟ ನೈಋತ್ಯ ರೈಲ್ವೆ
ಹುಬ್ಬಳ್ಳಿ, ಅಕ್ಟೋಬರ್ 10; ನೈಋತ್ಯ ರೈಲ್ವೆ ಹುಬ್ಬಳ್ಳಿ ವಲಯ ದಸರಾ ಹಬ್ಬದ ಅಂಗವಾಗಿ ಸಂಚಾರ ನಡೆಸುವ ಜನರ ಅನುಕೂಲಕ್ಕಾಗಿ ಹೆಚ್ಚುವರಿ ಬೋಗಿಗಳನ್ನು ವಿವಿಧ ರೈಲಿಗೆ ಅಳವಡಿಕೆ ಮಾಡಿದೆ.
ದಸರಾ ಸಂದರ್ಭದಲ್ಲಿ ಹೆಚ್ಚು ಜನರು ಪ್ರಯಾಣ ಮಾಡುವುದರಿಂದ ಆಗುವ ಜನರ ದಟ್ಟಣೆ ತಪ್ಪಿಸಲು ಹಲವು ರೈಲುಗಳಿಗೆ ಹೆಚ್ಚುವರಿಯಾಗಿ 2 ಬೋಗಿಗಳನ್ನು ಆಳವಡಿಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ರೈಲು ಸಂಖ್ಯೆ 06582 ಮೈಸೂರು-ಹುಬ್ಬಳ್ಳಿ, ರೈಲು ಸಂಖ್ಯೆ 06535 ಮೈಸೂರು-ಸೊಲ್ಲಾಪುರ, ರೈಲು ಸಂಖ್ಯೆ 06227 ಮೈಸೂರು-ಶಿವಮೊಗ್ಗ, 06241 ಬೆಂಗಳೂರು-ಹುಬ್ಬಳ್ಳಿ ರೈಲಿಗೆ ಅಕ್ಟೋಬರ್ 13 ಮತ್ತು 14ರಂದು ಹೆಚ್ಚುವರಿ ಬೋಗಿ ಇರಲಿದೆ.

ರೈಲು ಸಂಖ್ಯೆ 96581 ಹುಬ್ಬಳ್ಳಿ-ಮೈಸೂರು, ರೈಲು ಸಂಖ್ಯೆ 06242 ಹುಬ್ಬಳ್ಳಿ-ಬೆಂಗಳೂರು ರೈಲಿಗೆ ಅಕ್ಟೋಬರ್ 17ರಂದು ಎರಡು ಹೆಚ್ಚುವರಿ ಬೋಗಿ ಜೋಡಿಸಲಾಗುತ್ತದೆ.
ಅಕ್ಟೋಬರ್ 13 ರಿಂದ 16ರ ತನಕ ರೈಲು ಸಂಖ್ಯೆ 06589 ಬೆಂಗಳೂರು-ಮೀರಜ್ ಮತ್ತು ರೈಲು ಸಂಖ್ಯೆ 06549 ಬೆಂಗಳೂರು-ಬೆಳಗಾವಿ ರೈಲಿಗೆ ಹೆಚ್ಚುವರಿ ಬೋಗಿ ಇರಲಿದೆ.
ಅಕ್ಟೋಬರ್ 14 ರಿಂದ 17ರ ತನಕ ರೈಲು ಸಂಖ್ಯೆ 02079 ಬೆಂಗಳೂರು-ಹುಬ್ಬಳ್ಳಿ ಮತ್ತು ರೈಲು ಸಂಖ್ಯೆ 02080 ಹುಬ್ಬಳ್ಳಿ-ಬೆಂಗಳೂರು ರೈಲಿಗೆ ಅಕ್ಟೋಬರ್ 13 ರಿಂದ 17ರ ತನಕ ಹೆಚ್ಚುವರಿ ಬೋಗಿ ಜೋಡಿಸಲಾಗುತ್ತದೆ ಎಂದು ನೈಋತ್ಯ ರೈಲ್ವೆ ಹೇಳಿದೆ.ಮೈಸೂರು ದಸರಾ ಸಂದರ್ಭದಲ್ಲಿ ಬೆಂಗಳೂರು ನಗರದಿಂದ ಮೈಸೂರಿಗೆ ಹೆಚ್ಚಿನ ಜನರು ಪ್ರಯಾಣ ಮಾಡುತ್ತಾರೆ. ಜನರ ಅನುಕೂಲಕ್ಕಾಗಿ ಬೆಂಗಳೂರು-ಮೈಸೂರು ನಡುವೆ ಸಂಚಾರ ನಡೆಸುವ ರೈಲುಗಳ ಪಟ್ಟಿಯನ್ನು ನೈಋತ್ಯ ರೈಲ್ವೆ ಪ್ರಕಟಿಸಿದೆ.
ರೈಲು ನಂಬರ್, ಯಾವ ನಿಲ್ದಾಣ, ತಲುಪುವ ನಿಲ್ದಾಣ, ಬೆಂಗಳೂರಿನಿಂದ ಹೊರಡುವ ಸಮಯ, ಮೈಸೂರು ತಲುಪುವ ಸಮಯ, ಸಂಚಾರ ನಡೆಸುವ ದಿನಗಳು ಮುಂತಾದ ಮಾಹಿತಿಯನ್ನು ಈ ಪಟ್ಟಿ ಒಳಗೊಂಡಿದೆ.
Discover Spectacular celebrations:
— South Western Railway (@SWRRLY) October 9, 2021
For those wanting to travel from Bengaluru to Mysuru to witness #MysuruDasara2021 , here the list of trains plying between both the cities
# pic.twitter.com/Pb4TfTXYbu
ಮೊದಲ ಬಾರಿ ಆಹಾರ ಉತ್ಪನ್ನ ಸಾಗಾಟ; ನೈಋತ್ಯ ರೈಲ್ವೆ ಹುಬ್ಬಳ್ಳಿ ವಲಯ ಮೊದಲ ಬಾರಿಗೆ ಬಳಕೆಯಾಗದ ಎಸಿ ಕೋಚ್ಗಳ ಮೂಲಕ ಚಾಕೊಲೇಟ್ ಮತ್ತು ಇತರ ಆಹಾರ ಉತ್ಪನ್ನಗಳನ್ನು ಗೋವಾದಿಂದ ದೆಹಲಿಗೆ ಸಾಗಾಟ ಮಾಡಿದೆ.
ಅಕ್ಟೋಬರ್ 8ರಂದು 163 ಟನ್ ಚಾಕೊಲೇಟ್, ನೂಡಲ್ಸ್ಗಳನ್ನು 12 ತೃತೀಯ ಎಸಿ ಮತ್ತು 6 ದ್ವಿತೀಯ ಎಸಿ ಕೋಚ್ಗಳಲ್ಲಿ ಸಾಗಣೆ ಮಾಡಲಾಗಿದೆ. ಗೋವಾದ ವಾಸ್ಕೋ ಡ-ಗಾಮ ನಿಲ್ದಾಣದಿಂದ ದೆಹಲಿಯ ಓಖ್ಲಾಗೆ ರೈಲು ಸಾಗಿದೆ.
ಈ ರೈಲು 2115 ಕಿ. ಮೀ. ಸಂಚಾರ ನಡೆಸಿ ಶನಿವಾರ ದೆಹಲಿ ತಲುಪಿದೆ. ಈ ಆಹಾರ ಸರಕು ಸಾಗಣೆಯಿಂದ ರೈಲ್ವೆಗೆ 12.83 ಲಕ್ಷ ಆದಾಯ ಬರಲಿದೆ. ಇಷ್ಟು ದಿನ ರಸ್ತೆ ಮಾರ್ಗದ ಮೂಲಕ ಈ ಸರಕು ಸಾಗಣೆಯಾಗುತ್ತಿತ್ತು.
ಹುಬ್ಬಳ್ಳಿ ವಿಭಾಗದ ವ್ಯವಹಾರ ಅಭಿವೃದ್ಧಿ ಘಟಕದ ಮಾರ್ಕೆಟಿಂಗ್ ಪ್ರಯತ್ನದ ಫಲವಾಗಿ ರೈಲ್ವೆ ಮೂಲಕ ಸಾಗಣೆಯಾಗಿದೆ. ಹುಬ್ಬಳ್ಳಿ ರೈಲ್ವೆ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ ಮಾಲಖೇಡೆ ಈ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.
2020ರ ಅಕ್ಟೋಬರ್ 20ರ ಬಳಿಕ ಪ್ರತಿ ತಿಂಗಳು ಹುಬ್ಬಳ್ಳಿ ಪಾರ್ಸೆಲ್ ವಿಭಾಗದ ಆದಾಯವು 1 ಕೋಟಿ ರೂ. ಗಡಿ ದಾಟುತ್ತಿದೆ. 2021ರ ಸೆಪ್ಟೆಂಬರ್ನಲ್ಲಿ ಹುಬ್ಬಳ್ಳಿ ಪಾರ್ಸೆಲ್ ವಿಭಾಗದ ಆದಾಯ 1.58 ಕೋಟಿ ಆಗಿದೆ.
ಈ ಆರ್ಥಿಕ ವರ್ಷದಲ್ಲಿ ಸೆಪ್ಟೆಂಬರ್ ತನಕ ಹುಬ್ಬಳ್ಳಿ ಪಾರ್ಸೆಲ್ ವಿಭಾಗ ಒಟ್ಟು 11.17 ಕೋಟಿ ರೂ. ಆದಾಯಗಳಿಸಿದೆ. ರೈಲಿನ ಮೂಲಕ ಸರಕು ಸಾಗಣೆ ಮಾಡುವುದು ಕೈಗಾರಿಕೆಗಳು ಮತ್ತು ವ್ಯಾಪಾರಿಗಳ ಮೆಚ್ಚುಗೆಗೆ ಪಾತ್ರವಾಗಿವೆ.
-
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ












Click it and Unblock the Notifications