ಹುಬ್ಬಳ್ಳಿಯಲ್ಲಿನ್ನು 'ಬಾಡಿಗೆ' ಎನ್‍ಫೀಲ್ಡ್, ಹರ್ಲೆ ಡೇವಿಡ್ಸನ್!
ಇದೇ ಮೊದಲ ಬಾರಿಗೆ ರಾಯಲ್ ಬದ್ರರ್ಸ್ ರೆಂಟಲ್ ಬೈಕ್ ಸಂಸ್ಥೆ ಬಾಡಿಗೆ ಆಧಾರದಲ್ಲಿ ಬೈಕ್ ನೀಡುವ ವ್ಯವಸ್ಥೆಯನ್ನು ಹುಬ್ಬಳ್ಳಿ-ಧಾರವಾಡದಲ್ಲಿ ಆರಂಭಿಸಿದೆ. ಉತ್ತರ ಕರ್ನಾಟಕ ಸೇರಿದಂತೆ ನರೆಯ ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳ ಪ್ರವಾಸಿ ತಾಣಗಳ ವಿಕ್
ಹುಬ್ಬಳ್ಳಿ, ಜೂನ್ 27: ಕೇವಲ ಉಳ್ಳವರಿಗಷ್ಟೇ ಸೀಮಿತವಾಗಿದ್ದ ಬೆಲೆ ಬಾಳುವ ರಾಯಲ್ ಎನ್‍ಫೀಲ್ಡ್ ಬೈಕ್ ಅಥವಾ ಅಮೆರಿಕದ ಮೂಲದ ದುಬಾರಿ ಬೈಕ್ ಆದ ಹರ್ಲೆ ಡೇವಿಡ್ಸನ್ ಬೈಕ್ ಗಳು ಈಗ ಅವಳಿ ನಗರಗಳಲ್ಲಿ ಬಾಡಿಗೆಗೆ ಲಭ್ಯವಿವೆ. ಈಗಾಗಲೇ ದೇಶದ ಹಲವು ನಗರಗಳಲ್ಲಿ ಸಾವಿರಾರು ರಾಯಲ್ ಎನ್‍ಫೀಲ್ಡ್ ಹಾಗೂ ಹಾರ್ಲಿ ಡೆವಿಡ್‍ಸನ್-750 ಬೈಕ್‍ಗಳನ್ನು ಬಾಡಿಗೆಗಾಗಿ ಬಿಟ್ಟಿರುವ 'ರಾಯಲ್ ಬ್ರದರ್ಸ್' ಈಗ ಈ ಸೇವೆಯನ್ನು ಹುಬ್ಬಳ್ಳಿ-ಧಾರವಾಡದಲ್ಲಿಯೂ ಆರಂಭಿಸಿದ್ದಾರೆ.
ಧಾರವಾಡದ ಆದಿತ್ಯ ಮಯೂರ್ ಹೊಟೇಲ್‍ನಲ್ಲಿ ತಾತ್ಕಾಲಿಕ ಕಚೇರಿ ಆರಂಭಿಸಿರುವ ಈ ಸಂಸ್ಥೆ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆಯಲ್ಲಿಯೂ ಶೀಘ್ರವೇ ತನ್ನ ಹೊಸ ಮಳಿಗೆ ಆರಂಭಿಸಲಿದೆ.

ಹೊಸ ಅನುಭವ: ಈವರೆಗೆ ಆಟೋ, ಕಾರು, ವ್ಯಾನ್, ಬಸ್ ಹಾಗೂ ಮತ್ತಿತರೆ ವಾಹನಗಳು ಮಾತ್ರ ಬಾಡಿಗೆಗೆ ದೊರೆಯುತ್ತಿದ್ದವು. ಆದರೆ, ಇದೀಗ ಬೈಕ್‍ಗಳು ಅದರಲ್ಲೂ ರಾಯಲ್ ಎನ್‍ಫೀಲ್ಡ್ ನಂತಹ ಪ್ರತಿಷ್ಠಿತ ದ್ವಿಚಕ್ರ ವಾಹನಗಳನ್ನು ಬಾಡಿಗೆಗೆ ನೀಡುವ ಮೂಲಕ ಈ ಭಾಗದ ರಾಯಲ್ ಎನ್‍ಫೀಲ್ಡ್ ಸವಾರರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಅಷ್ಟೇ ಅಲ್ಲದೆ ರಾಯಲ್ ಬ್ರದರ್ಸ್ ಸ್ಕೂಟರ್‍ನಿಂದ ಹಿಡಿದು ಅಮೆರಿಕಾದ ಹಾರ್ಲಿ ಡೆವಿಡ್‍ಸನ್-750 ನಂತಹ ದುಬಾರಿ ಬೈಕ್‍ಗಳನ್ನು ಬಾಡಿಗೆ ನೀಡಲು ಮುಂದಾಗಿದ್ದಾರೆ.

ಬೆಂಗಳೂರು ಮೂಲದ ಉದ್ಯಮಿಗಳು: ಬೆಂಗಳೂರು ಮೂಲದ ಅಭಿಷೇಕ್, ಮಂಜುನಾಥ, ಹಾಗೂ ಶ್ರೀಕೃಷ್ಣ ಎಂಬುವರು ಪರಿಚಯಿಸಿರುವ ಈ ರೆಂಟಲ್ ಬೈಕ್ ವ್ಯವಸ್ಥೆ ಅವಳಿ ನಗರ ಸೇರಿದಂತೆ ಉತ್ತರ ಕರ್ನಾಟಕದ ಬೈಕ್ ಸವಾರರಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಕೋಟ್ಯಾಂತರ ರೂಪಾಯಿ ಹೂಡಿಕೆ ಮಾಡಿ 'ರಾಯಲ್ ಬದ್ರರ್ಸ್ ಬೈಕ್ ರೆಂಟಲ್' ಸಂಸ್ಥೆಯನ್ನು ಆರಂಭಿಸಿದ್ದಾರೆ.
ಪ್ರವಾಸಿ ತಾಣಗಳ ಭೇಟಿಗೆ ಸಹಕಾರಿ: ಗೋವಾ, ಪಶ್ಚಿಮ ಘಟ್ಟಗಳು, ಹಂಪಿ ಸೇರಿದಂತೆ ಮಹಾರಾಷ್ಟ್ರದ ಕೆಲ ಪ್ರವಾಸಿ ತಾಣಗಳಿಗೆ ಹುಬ್ಬಳ್ಳಿಯಿಂದ ಸುಲಭವಾಗಿ ಬೈಕ್‍ಗಳ ಮೂಲಕ ಸಂಚರಿಸಬಹುದಾಗಿದೆ. ಅಲ್ಲದೆ ಅವಳಿ ನಗರಗಳಲ್ಲಿ ಎಂಜಿನಿಯರಿಂಗ್, ಮೆಡಿಕಲ್ ಸೇರಿದಂತೆ ಹಲವು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಇವರಲ್ಲಿ ಬಹುತೇಕರಿಗೆ ಬೈಕ್ ಕ್ರೇಜ್ ಇದ್ದೇ ಇರುತ್ತದೆ. ಈ ಕಾರಣದಿಂದಲೇ ಹುಬ್ಬಳ್ಳಿ-ಧಾರವಾಡದಲ್ಲಿ ಬೈಕ್ ರೆಂಟಲ್ ಸೇವೆ ಆರಂಭಿಸಿರುವುದಾಗಿ ಸಂಸ್ಥೆಯ ಮೂಲಗಳು ಸ್ಪಷ್ಟಪಡಿಸುತ್ತವೆ.

ನಿಗದಿತ ದರ: ಗಂಟೆಗೆ 10 ರೂಪಾಯಿಂದ ಹಿಡಿದು 130 ರೂಪಾಯಿ ದರದ ವರೆಗೂ ದರ ನಿಗದಿಪಡಿಸಲಾಗಿದ್ದು, ಸಾಮಥ್ರ್ಯ ಹಾಗೂ ಅಗತ್ಯಕ್ಕೆ ಅನುಗುಣವಾಗಿ ಬೈಕ್‍ಗಳನ್ನು ಬಾಡಿಗೆ ರೂಪದಲ್ಲಿ ಪಡೆಯಬಹುದಾಗಿದೆ.
ಅಲ್ಲದೆ ಸಂಸ್ಥೆಯ ವೆಬ್‍ಸೈಟ್ ನಲ್ಲಿ ಲಾಗಿನ್ ಆಗಿ ತಮಗೆ ಬೇಕಾದ ಬೈಕ್‍ಗಳನ್ನು ಮುಂಗಡವಾಗಿ ಕಾಯ್ದಿರಿಸಬಹುದಾಗಿದೆ. ಅದಕ್ಕೂ ಮುನ್ನ ಡ್ರೈವಿಂಗ್ ಲೈಸೆನ್ಸ್ ನ್ನು ವೆಬ್‍ಸೈಟ್‍ನಲ್ಲಿ ಅಪ್‍ಲೋಡ್ ಮಾಡುವುದು ಕಡ್ಡಾಯವಾಗಿದೆ. ಅಷ್ಟೇ ಅಲ್ಲ ವಾರಾಂತ್ಯದಲ್ಲಿ ಬೇರೆ ದರ ನಿಗದಿಪಡಿಸಲಾಗಿದೆ.

ಜಿಪಿಎಸ್ ಅಳವಡಿಕೆ: ಈ ಎಲ್ಲ ಬೈಕ್‍ಗಳು ವಾಣಿಜ್ಯ ಉದ್ದೇಶಕ್ಕಾಗಿ ಎಂದು ಸಾರಿಗೆ ಇಲಾಖೆಯಲ್ಲಿ ನೋಂದಣಿಯಾಗಿವೆ. ಅಲ್ಲದೆ ಬೈಕ್‍ಗಳು ಕಳವು ಅಥವಾ ಅಪಹರಣವಾಗಬಾರದೆಂಬ ಕಾರಣಕ್ಕೆ ಇವುಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಈ ವ್ಯವಸ್ಥೆಯನ್ನು ಬೆಂಗಳೂರಿನ ಕೇಂದ್ರ ಕಚೇರಿಯಿಂದಲೇ ನಿರ್ವಹಿಸುವ ವ್ಯವಸ್ಥೆ ಹೊಂದಲಾಗಿದೆ.
ಎಲ್ಲೆಲ್ಲಿ ಈ ಸೇವೆ ?: ಈಗಾಗಲೇ ರಾಜ್ಯದ ಮೈಸೂರು, ಬೆಂಗಳೂರು, ಉಡುಪಿ-ಮಣಿಪಾಲ್, ಕೊಡಗು, ಚಿಕ್ಕಮಗಳೂರು, ಮಂಗಳೂರು, ಸಕಲೇಶಪುರಗಳಲ್ಲಿ ಬಾಡಿಗೆ ಬೈಕ್‍ಗಳು ಸಂಚರಿಸುತ್ತಿವೆ. ಅಲ್ಲದೆ ಹೊರ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ಕೇರಳ, ತಮಿಳುನಾಡು, ಅಂಡಮಾನ್ ನಿಕೋಬಾರ್, ಪಾಂಡಿಚೇರಿಗಳಲ್ಲಿ ಬಾಡಿಗೆ ಬೈಕ್‍ಗಳ ವ್ಯವಸ್ಥೆಯನ್ನು ರಾಯಲ್ ಬದ್ರರ್ಸ್ ಪರಿಚಯಿಸಿದೆ. ಸ್ಥಳೀಯ ಪ್ರಾಂಚೈಸಿಗಳ ಮೂಲಕ ಹೊಸ ಮಳಿಗೆ ಆರಂಭಿಸುವ ಗುರಿಯನ್ನು ಸಂಸ್ಥೆ ಹೊಂದಿದೆ ಎಂದು ಮಂಜುನಾಥ ತಿಳಿಸುತ್ತಾರೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ












Click it and Unblock the Notifications