RCB: ಹುಬ್ಬಳ್ಳಿ ದಂಪತಿಯ ಆರ್ಸಿಬಿ ಅಭಿಮಾನ; ಆರ್ಸಿಬಿ ಜೆರ್ಸಿಯಲ್ಲಿ ಮಗನ ಹೆಸರು ಅನಾವರಣ
17 ವರ್ಷಗಳಿಂದ ಕಪ್ ಗೆಲ್ಲದೇ ಇದ್ದರೂ ಆರ್ಸಿಬಿ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದೆ. ಉಳಿದ ತಂಡಗಳಿಗೂ ಆರ್ಸಿಬಿ ಫ್ಯಾನ್ಸ್ ಎಷ್ಟು ನಿಷ್ಠಾವಂತರು ಎನ್ನುವುದು ಗೊತ್ತಿದೆ.
ಸತತ ಆರು ಪಂದ್ಯಗಳನ್ನು ಗೆದ್ದು ಪ್ಲೇಆಫ್ ಪ್ರವೇಶಿಸಿದ್ದ ಆರ್ಸಿಬಿ ರಾಜಸ್ಥಾನ ರಾಯಲ್ಸ್ ವಿರುದ್ಧ ಎಲಿಮಿನೇಟರ್ ಪಂದ್ಯದಲ್ಲಿ ಸೋತು ಐಪಿಎಲ್ ಪಂದ್ಯಾವಳಯಿಂದ ಹೊರಬಿದ್ದಿದೆ. ಸೋತರೂ ಕೂಡ ಆರ್ಸಿಬಿ ಈ ಬಾರಿ ಆಡಿದ ರೀತಿ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.

ಹುಬ್ಬಳ್ಳಿಯ ದಂಪತಿಗಳು ಆರ್ಸಿಬಿ ಅಭಿಮಾನಿಗಳಾಗಿದ್ದು, ತಮ್ಮ ವಿಭಿನ್ನವಾಗಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ, ನಾಮಕರಣದ ಸಂದರ್ಭದಲ್ಲಿ ತಮ್ಮ ಮಗುವಿನ ಹೆಸರನ್ನು ಆರ್ ಸಿಬಿ ಜೆರ್ಸಿ ಮೇಲೆ ಅನಾವರಣ ಮಾಡಿದ್ದಾರೆ.
ಹುಬ್ಬಳ್ಳಿಯ ದಂಪತಿಗಳಾದ ವೈಭವ್ ಮತ್ತು ಭಾಗ್ಯಾ ಅವರೇ ಮಗುವಿನ ಹೆಸರನ್ನು ಆರ್ಸಿಬಿ ಜೆರ್ಸಿ ಮೇಲೆ ಅನಾವರಣ ಮಾಡಿದ ದಂಪತಿಗಳಾಗಿದ್ದಾರೆ. ಭುವನ್ ಎಂದು ಮಗುವಿಗೆ ಹೆಸರಿಟ್ಟಿದ್ದು ತಮ್ಮ ನೆಚ್ಚಿನ ತಂಡದ ಜೆರ್ಸಿ ಮೇಲೆ ಹೆಸರು ಅನಾವರಣ ಮಾಡಿ ಖುಷಿ ಪಟ್ಟಿದ್ದಾರೆ.
ಸೋತರು ಬೇಸರವಿಲ್ಲ ಎಂದ ಆರ್ಸಿಬಿ ಫ್ಯಾನ್ಸ್
ರಾಜಸ್ಥಾನ ರಾಯಲ್ಸ್ ವಿರುದ್ಧ ಸೋತರೂ ಆರ್ಸಿಬಿ ಅಭಿಮಾನಿಗಳು ಈ ಬಾರಿ ಹೆಚ್ಚಾಗಿ ಬೇಸರಗೊಂಡಿಲ್ಲ, ಕಾರಣ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದರೂ ಬಳಿಕ ಅವರು ಪ್ಲೇಆಫ್‌ಗೆ ತಲುಪಿದ ರೀತಿ ಇದೆಯಲ್ಲ, ಉಳಿದ ತಂಡಗಳು ಕೂಡ ದಂಗಾಗಿದ್ದವು.
8 ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಮಾತ್ರ ಗೆದ್ದಿದ್ದ ಆರ್ಸಿಬಿ ಬಳಿಕ ಸತತವಾಗಿ 6 ಪಂದ್ಯಗಳಲ್ಲಿ ಗೆದ್ದು ಪ್ಲೇಆಫ್‌ಗೆ ಅರ್ಹತೆ ಪಡೆದಿತ್ತು. ಆದರೆ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿದೆ. ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಅಮೋಘ ಗೆಲುವು ಸಾಧಿಸಿದ್ದು, ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದ್ದು, ಕಪ್ ಮುಂದಿನ ವರ್ಷ ಗೆದ್ದರೂ ಪರ್ವಾಗಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications