ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್ ಆಗಿ ರಾಮ ಬಡಿಗೇರ ಹಾಗೂ ಉಪಮಹಾಪೌರರಾಗಿ ದುರ್ಗಮ್ಮ ಬಿಜವಾಡ ಆಯ್ಕೆ
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾಗಿ 30ನೇ ವಾರ್ಡ್ ಸದಸ್ಯರಾದ ರಾಮಪ್ಪಿಗೇರ ಆಯ್ಕೆ ಆಗಿದ್ದಾರೆ. ಪಾಲಿಕೆ 69ನೇ ವಾರ್ಡ್ ಸದಸ್ಯರಾದ ದುರ್ಗಮ್ಮ ಬಿಜವಾಡ ಉಪ ಮೇಯರ್ ಆಗಿ ಆಯ್ಕೆ ಆಗಿದ್ದಾರೆ.
ಮಾಹಪೌರರ ಆಯ್ಕೆಯ ಫಲಿತಾಂಶವನ್ನು ಚುನಾವಣಾ ಅಧ್ಯಕ್ಷರಾಗಿದ್ದ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಎಸ್.ಬಿ.ಶೆಟ್ಟೆಣ್ಣವರ ಅವರು ಪ್ರಕಟಿಸಿದರು. ಮಹಾಪೌರ ಮತ್ತು ಉಪ ಮಹಾಪೌರ ಚುನಾವಣೆಯಲ್ಲಿ ಸದಸ್ಯರು ಕೈ ಎತ್ತುವ ಮೂಲಕ ತಮ್ಮ ಮತ ಚಲಾಯಿಸಿದರು.

ಮಹಾಪೌರ ಸ್ಥಾನಕ್ಕೆದ್ದ ಮಹಾನಗರ ಪಾಲಿಕೆ 33ನೇ ವಾರ್ಡ್ ಸದಸ್ಯರಾದ ಇಮಾಮ್ ಹುಸೇನ ಎಲಿಗಾರ ಅವರು 36 ಮತಗಳನ್ನು ಮತ್ತು ಮಹಾನಗರ ಪಾಲಿಕೆ 77 ನೇ ವಾರ್ಡ್ ಸದಸ್ಯರಾದ ಹುಸೇನಬಿ ನಾಲತವಾಡ ಅವರು 3 ಮತಗಳನ್ನು ಪಡೆದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ 23 ನೇ ಅವಧಿಗೆ ಉಪಮಹಾಪೌರರಾಗಿ ಪಾಲಿಕೆ 69 ನೇ ವಾರ್ಡ್ ಸದಸ್ಯರಾದ ದುರ್ಗಮ್ಮ ಬಿಜವಾಡ ಅವರು ಅತಿ ಹೆಚ್ಚು (47) ಮತಗಳನ್ನು ಪಡೆಯುವ ಮೂಲಕ ಆಯ್ಕೆಯಾಗಿದ್ದಾರೆ ಎಂದು ಅವರು ಪ್ರಕಟಿಸಿದ್ದಾರೆ. ಉಪಮಹಾಪೌರ ಸ್ಥಾನದ ಅಕಾಂಕ್ಷಿ ಆಗಿದ್ದ 50ನೇ ವಾರ್ಡ್ ಸದಸ್ಯರಾದ ಮಂಗಳಮ್ಮ ಹಿರೇಮನಿ ಅವರು 36 ಮತಗಳನ್ನು ಪಡೆದಿದ್ದಾರೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರ ಮತ್ತು ಉಪಮಹಾಪೌರ ಚುನಾವಣೆಯ ಪಾಲಿಕೆ ಸದಸ್ಯರು, ಲೋಕಸಭಾ ಸದಸ್ಯರು, ಶಾಸಕರು ಮತ್ತು ವಿಧಾನ ಪರಿಷತ್ತಿನ ಸದಸ್ಯರು ಸೇರಿ ಒಟ್ಟು 90 ಜನ ಮತದಾರರು ಇದ್ದರು. ಇಂದಿನ ಮಹಾಪೌರ ಮತ್ತು ಉಪಮಹಾಪೌರ ಚುನಾವಣೆಯಲ್ಲಿ 86 ಜನರು ಭಾಗಿಯಾಗಿದ್ದರು. ನಾಲ್ಕು ಜನ ಸದಸ್ಯರು ಗೈರು ಹಾಜರಿದ್ದರು.
ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾದ ಎಸ್.ಎಸ್.ಬಿರಾದಾರ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಾದ ಡಾ.ಈಶ್ವರ ಉಳ್ಳಾಗಡ್ಡಿ ಅವರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
82 ಸದಸ್ಯರ ಬಲವನ್ನು ಹೊಂದಿರುವ ಮಹಾನಗರ ಪಾಲಿಕೆಯಲ್ಲಿ 39 ಬಿಜೆಪಿ, 33 ಕಾಂಗ್ರೆಸ್, 3 ಎಐಎಂಐಎಂ, 6 ಪಕ್ಷೇತರ, ಒಬ್ಬ ಜೆಡಿಎಸ್ ಸದಸ್ಯರ ಇದ್ದಾರೆ.












Click it and Unblock the Notifications