ಕಾರ್ಪೊರೇಟ್ ಕೆಲಸದ ಬಗ್ಗೆ ಸದಾ ದೂರುವವರಿಗೆ ಖಡಕ್‌ ಎಚ್ಚರಿಕೆ ನೀಡಿದ ಯುವಕ: ಈ ವೈರಲ್ ವಿಡಿಯೋದಲ್ಲಿ ಏನಿದೆ?

ಇಂದಿನ ದಿನಗಳಲ್ಲಿ ಕಾರ್ಪೊರೇಟ್ ಉದ್ಯೋಗ ಎಂದರೆ ಒತ್ತಡ, ಟಾರ್ಗೆಟ್ ಮತ್ತು ಬಾಸ್‌ನ ಬೈಗುಳ ಎಂಬ ಭಾವನೆ ಅನೇಕರಲ್ಲಿದೆ. ಪ್ರತಿದಿನ ಬೆಳಿಗ್ಗೆ ಎದ್ದು ಆಫೀಸ್‌ಗೆ ಹೋಗಲು ಬೇಸರ ಪಡುವವರ ಸಂಖ್ಯೆ ಕಡಿಮೆಯೇನಿಲ್ಲ. ಸಾಮಾಜಿಕ ಜಾಲತಾಣಗಳಲ್ಲಂತೂ ಕಾರ್ಪೊರೇಟ್ ಜೀವನವನ್ನು ಅಣಕಿಸುವ ಮೀಮ್‌ಗಳು ಮತ್ತು ವಿಡಿಯೋಗಳು ಪ್ರತಿದಿನ ವೈರಲ್ ಆಗುತ್ತಲೇ ಇರುತ್ತವೆ. ಆದರೆ, ಸದಾ ತಮ್ಮ ಕೆಲಸದ ಬಗ್ಗೆ ದೂರುವ ಉದ್ಯೋಗಿಗಳಿಗೆ ಯುವಕನೊಬ್ಬ ಅರಿವು ಮೂಡಿಸುವ ಕೆಲಸ ಮಾಡಿದ್ದಾನೆ. ಅನ್ಮೋಲ್ ವಾರಿಕೂ ಎಂಬುವವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ವೈರಲ್‌ ವಿಡಿಯೋದಲ್ಲಿ ಏನಿದೆ?

ತಮ್ಮ ವಿಡಿಯೋದಲ್ಲಿ ಅನ್ಮೋಲ್ ವಾರಿಕೂ ಅವರು, ಕಾರ್ಪೊರೇಟ್ ಉದ್ಯೋಗವನ್ನು ಸದಾ ಟೀಕಿಸುವ ಜನರ ಮನಸ್ಥಿತಿಯನ್ನು ಖಡಕ್ ಆಗಿ ವಿಮರ್ಶಿಸಿದ್ದಾರೆ. "ಶುಕ್ರವಾರ ರಾತ್ರಿ 9 ಗಂಟೆ. ನನ್ನ ಆಫೀಸ್ ಲ್ಯಾಪ್‌ಟಾಪ್‌ನಲ್ಲಿ 20 ನಿಮಿಷಗಳ ಕಾಲ ಕೆಲಸ ಮಾಡಬೇಕಿತ್ತು. ಅದನ್ನು ಮುಗಿಸುತ್ತಿರುವಾಗ ನನ್ನ ಮನಸ್ಸಿಗೆ ಬಂದ ಕೆಲವು ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು. ಈ ವಿಡಿಯೋ ನೋಡಿದ ಬಳಿಕ ಅನೇಕರು ನನ್ನನ್ನು ನಿಂದಿಸಬಹುದು ಅಥವಾ ಬಾಸ್‌ನ ಚಮಚಾ ಎಂದು ಕರೆಯಬಹುದು. ಆದರೆ ನನಗೆ ಅದರ ಬಗ್ಗೆ ಚಿಂತೆಯಿಲ್ಲ. ಏಕೆಂದರೆ ಇದು ಯಾರೂ ಮಾತನಾಡಲು ಇಷ್ಟಪಡದ ಕಟು ಸತ್ಯ," ಎಂದು ಅವರು ವಿಡಿಯೋವನ್ನು ಆರಂಭಿಸಿದ್ದಾರೆ.

Corporate Job

"ನಿಮ್ಮ ಕಾರ್ಪೊರೇಟ್ ಕೆಲಸದ ಬಗ್ಗೆ ದೂರುವುದನ್ನು ಮತ್ತು ಗೋಳಾಡುವುದನ್ನು ಮೊದಲು ನಿಲ್ಲಿಸಿ. ನೀವು ಅಷ್ಟೊಂದು ಕಷ್ಟಪಟ್ಟು ಕೆಲಸ ಮಾಡುವವರಾಗಿದ್ದರೆ, ಅಷ್ಟೊಂದು ಪ್ರತಿಭಾವಂತರಾಗಿದ್ದರೆ, ನಿಮಗೆ ಅಷ್ಟೊಂದು ಆಸಕ್ತಿ ಇದ್ದಿದ್ದರೆ ನೀವೇಕೆ ಇಲ್ಲಿ ಸಿಕ್ಕಿಹಾಕಿಕೊಂಡಿದ್ದೀರಿ? ನಿಮ್ಮ ಆಸಕ್ತಿಯನ್ನೇ ನಿಮ್ಮ ವೃತ್ತಿಯನ್ನಾಗಿ ಏಕೆ ಬದಲಾಯಿಸಿಕೊಳ್ಳಲಿಲ್ಲ? ನೀವೇಕೆ ನಿಮ್ಮದೇ ಆದ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲಿಲ್ಲ? ಉದ್ಯಮಶೀಲತೆಯತ್ತ ಏಕೆ ಹೆಜ್ಜೆ ಹಾಕಲಿಲ್ಲ?" ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.

ಮುಂದುವರಿದು ಮಾತನಾಡಿದ ಅವರು, 'ಸಾಮಾನ್ಯ' ಅಥವಾ 'ಮಧ್ಯಮ ವರ್ಗದವರಂತೆ' ಇರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದಾರೆ. "ನೀವು ಇಲ್ಲೇ ಸಿಕ್ಕಿಹಾಕಿಕೊಳ್ಳಲು ಒಂದು ಕಾರಣವಿದೆ. ಅದೇನೆಂದರೆ ನೀವು ನನ್ನಂತೆಯೇ ಒಬ್ಬ ಸಾಮಾನ್ಯ ವ್ಯಕ್ತಿ. ಎಲ್ಲರೂ ಸಚಿನ್ ತೆಂಡೂಲ್ಕರ್ ಅಥವಾ ವಿರಾಟ್ ಕೊಹ್ಲಿ ಆಗಲು ಸಾಧ್ಯವಿಲ್ಲ. ಬಹಳಷ್ಟು ಜನರು ಸಂಪೂರ್ಣವಾಗಿ ಸಾಮಾನ್ಯರಾಗಿಯೇ ಉಳಿಯುತ್ತಾರೆ ಮತ್ತು ಅದರಲ್ಲಿ ಯಾವುದೇ ತಪ್ಪಿಲ್ಲ" ಎಂದು ಅವರು ವಾಸ್ತವವನ್ನು ಬಿಚ್ಚಿಟ್ಟಿದ್ದಾರೆ.

Bengaluru: ಬಡತನ ಮೆಟ್ಟಿ ನಿಂತು 3 ಚಿನ್ನದ ಪದಕ ಗೆದ್ದ ಆಟೋ ಡ್ರೈವರ್ ಮಗಳು; ಸ್ಪಂದನಾ ಸಾಧನೆಗೆ ಸಲಾಂ ಎಂದ ನೆಟ್ಟಿಗರು
Bengaluru: ಬಡತನ ಮೆಟ್ಟಿ ನಿಂತು 3 ಚಿನ್ನದ ಪದಕ ಗೆದ್ದ ಆಟೋ ಡ್ರೈವರ್ ಮಗಳು; ಸ್ಪಂದನಾ ಸಾಧನೆಗೆ ಸಲಾಂ ಎಂದ ನೆಟ್ಟಿಗರು

ಸಂತೋಷ ಎಂಬುದು ನಮ್ಮ ಆಯ್ಕೆ ಎಂಬುದನ್ನು ಒತ್ತಿ ಹೇಳಿರುವ ಅವರು, ತಾವು 'ಟಾಕ್ಸಿಕ್' ಕೆಲಸದ ಸಂಸ್ಕೃತಿಯನ್ನು ಬೆಂಬಲಿಸುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. "ಸಂತೋಷವಾಗಿರುವುದು ನಿಮ್ಮ ಆಯ್ಕೆಯಾಗಿದೆ. ಆದರೆ ಪ್ರತಿದಿನ 8 ಗಂಟೆಗಳ ಕಾಲ ನೀವು ಮಾಡುವ ಕೆಲಸದ ಬಗ್ಗೆ ದೂರುತ್ತಲೇ ಇದ್ದರೆ, ನೀವು ಎಂದಿಗೂ ಸಂತೋಷವಾಗಿರಲು ಸಾಧ್ಯವಿಲ್ಲ. ನಾನು ಟಾಕ್ಸಿಕ್ ಕೆಲಸದ ವಾತಾವರಣವನ್ನು ಪ್ರೋತ್ಸಾಹಿಸುತ್ತಿಲ್ಲ. ಒಂದು ವೇಳೆ ನಿಮ್ಮ ಕಚೇರಿಯ ವಾತಾವರಣ ನಿಜವಾಗಿಯೂ ಟಾಕ್ಸಿಕ್ ಆಗಿದ್ದರೆ, ದಯವಿಟ್ಟು ಕೆಲಸ ಬಿಟ್ಟುಬಿಡಿ. ಆದರೆ ನಿಮ್ಮ ಕೆಲಸ ಟಾಕ್ಸಿಕ್ ಆಗಿಲ್ಲದಿದ್ದರೆ, ದೂರುವುದನ್ನು ನಿಲ್ಲಿಸಿ, ಅದನ್ನು ಆನಂದಿಸಲು ಪ್ರಾರಂಭಿಸಿ. ಆಗ ನಿಮ್ಮ ಜೀವನ ಬದಲಾಗುತ್ತದೆ" ಎಂದು ಸಲಹೆ ನೀಡಿದ್ದಾರೆ.

ಈ ವಿಡಿಯೋಗೆ ಅನ್ಮೋಲ್ ಅವರು ನೀಡಿದ ಶೀರ್ಷಿಕೆ ಕೂಡ ಗಮನ ಸೆಳೆದಿದೆ. "ನಾನು ಉದ್ದವಾದ ಕ್ಯಾಪ್ಷನ್ ಬರೆಯಬೇಕೆಂದುಕೊಂಡಿದ್ದೆ. ಆದರೆ ಈ ವಿಡಿಯೋ ಸಾಕು ಅನಿಸುತ್ತಿದೆ. ಪ್ರತಿದಿನ 8 ಗಂಟೆಗಳ ಕಾಲ ಮಾಡುವ ಕೆಲಸದ ಬಗ್ಗೆ ದೂರುತ್ತಾ ಕೂರುವುದರಲ್ಲಿ ಯಾವುದೇ ಅರ್ಥವಿಲ್ಲ. ದೂರುವುದನ್ನು ನಿಲ್ಲಿಸಿ, ನಿಮ್ಮನ್ನು ನೀವು ಒಪ್ಪಿಕೊಂಡು ನಗುನಗುತ್ತಾ ಕೆಲಸ ಮಾಡಿ, ಇಲ್ಲವೇ ಕೆಲಸ ಬದಲಾಯಿಸಿ. ಇದು ತುಂಬಾ ಸರಳ" ಎಂದು ಅವರು ಬರೆದುಕೊಂಡಿದ್ದಾರೆ.

ನೆಟ್ಟಿಗರಿಂದ ಪರ-ವಿರೋಧ ಚರ್ಚೆ

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರಿಂದ ಪರ-ವಿರೋಧ ಚರ್ಚೆ ಆರಂಭವಾಗಿದೆ.ಈ ವಿಡಿಯೋಗೆ ಪ್ರತಿಕ್ರಿಯಿಸಿದ ಒಬ್ಬ ಬಳಕೆದಾರರು, "ಇದು ಕಠಿಣ ಎನಿಸಿದರೂ, ಇಂದಿನ ಪರಿಸ್ಥಿತಿಗೆ ಇದು ಅಗತ್ಯವಾಗಿದೆ" ಎಂದು ಬರೆದಿದ್ದಾರೆ. ಮತ್ತೊಬ್ಬರು, "ಕಾರ್ಪೊರೇಟ್ ಉದ್ಯೋಗಗಳು ಯಾವಾಗಲೂ ಕೆಟ್ಟದಾಗಿರುವುದಿಲ್ಲ, ಜನರು ಅದನ್ನು ಇತರರೊಂದಿಗೆ ಹೆಚ್ಚಾಗಿ ಹೋಲಿಕೆ ಮಾಡಿಕೊಳ್ಳುತ್ತಾರೆ" ಎಂದಿದ್ದಾರೆ.

Bengaluru Rent: ಬೆಂಗಳೂರಿಗೆ ಬಂದು ತಪ್ಪು ಮಾಡಿದೆವು; ದೆಹಲಿ ಚೆನ್ನಾಗಿತ್ತು, ಬಾಡಿಗೆ ಮನೆಗೆ 52,000 ರೂ. ನಾರ್ಥಿ ಪೋಸ್ಟ್‌
Bengaluru Rent: ಬೆಂಗಳೂರಿಗೆ ಬಂದು ತಪ್ಪು ಮಾಡಿದೆವು; ದೆಹಲಿ ಚೆನ್ನಾಗಿತ್ತು, ಬಾಡಿಗೆ ಮನೆಗೆ 52,000 ರೂ. ನಾರ್ಥಿ ಪೋಸ್ಟ್‌

ಆದರೆ, ಇನ್ನೊಬ್ಬ ಬಳಕೆದಾರರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದು, "ಇದು ಕೇಳಲು ಪ್ರಾಯೋಗಿಕವಾಗಿ ಎನಿಸುತ್ತದೆ. ಆದರೆ, ಬೇರೆ ಕೆಲಸಕ್ಕೆ ಬದಲಾಗುವ ಅವಕಾಶ ಅಥವಾ ಸವಲತ್ತು ಎಲ್ಲರಿಗೂ ಇರುವುದಿಲ್ಲ" ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+