ನನ್ನ ದೇಹಕ್ಕೆ ನಾನು ಟ್ಯಾಟೂ ಹಾಕ್ಕೊಂಡ್ರೆ ನಿಮ್ಗೇನ್ ಪ್ರಾಬ್ಲಂ - ಸಾನ್ವಿ ಸುದೀಪ್ ಬೆಂಕಿ
ನ್ನಿನ ಮೇಲೆ ಗಣೇಶ ಟ್ಯಾಟೂ ವಿವಾದಕ್ಕೆ ಎಬ್ಬಿಸಿದ್ದ ಸಾನ್ವಿ ಸುದೀಪ್ ಟ್ರೋಲಿಗರ ಬಗ್ಗೆ ಬೆಂಕಿಯಂತೆ ಮಾತಾಡಿದ್ದಾರೆ. ನನ್ನ ದೇಹದ ಮೇಲೆ ನಾನ್ ಟ್ಯಾಟೂ ಹಾಕ್ಕೊಂಡ್ರೆ ನಿಮ್ಗೇನ್ ಪ್ರಾಬ್ಲೆಂ ಅಂತ ಟ್ರೋಲಿಗರನ್ನು ಜಾಡಿಸಿದ್ದಾರೆ.
ಸಾನ್ವಿ ಸುದೀಪ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಸುಪ್ರಿಯಾ ರಾಧಾಕೃಷ್ಣನ್ ಒಬ್ಬಳೇ ಮಗಳು. ತಾನಾಯ್ತು ತನ್ನ ಬದುಕಾಯ್ತು ಅಂತ ಇದ್ದ ಹುಡುಗಿ ಕಳೆದೊಂದು ವರ್ಷದಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆ ಸ್ಟಾರ್ ಮಗಳು ಎಂಬ ಪಟ್ಟ ಈ ಹುಡುಗಿಗೆ ಖುಷಿಗಿಂತ ಹೆಚ್ಚಾಗಿ ಟಾರ್ಚರ್ ಕೊಟ್ಟ ಹಾಗಿದೆ. ಎಲ್ಲಿ ಹೇಗೆ ವರ್ತಿಸಬೇಕು ಅಂತ ಗೊತ್ತಿಲ್ಲದ ನಮ್ಮ ಜನ ಎಷ್ಟೋ ಸಲ ಟೇಕನ್ ಫಾರ್ ಗ್ರ್ಯಾಂಟೆಡ್ ಎಂಬ ಹಾಗೆ ವರ್ತಿಸುತ್ತಾರೆ. ಅವರು ನಟ, ನಟಿಯ ಮಕ್ಕಳಾಗಿಬಿಟ್ಟರಂತೂ ಪ್ರತೀ ನಡೆಯನ್ನೂ ಜಡ್ಜ್‌ಮೆಂಟಲ್ ಆಗಿಯೇ ನೋಡ್ತಾರೆ. ಸೋಷಿಯಲ್ ಮೀಡಿಯಾ ಅನ್ನೋ ಜನರ ಈ ಕಲುಷಿತ ಮನಸ್ಸಿಗೆ ಇಂಧನ ಸುರಿಯೋ ಹಾಗೇ ಇದೆ.

ಜಡ್ಜ್‌ಮೆಂಟಲ್ ಆಗೋದ್ಯಾಕೆ?
ಜನರ ಈ ತೀರ್ಪು ಕೊಡುವ ಮನಸ್ಥಿತಿಯ ಬಗ್ಗೆ ಸಾನ್ವಿ ಸುದೀಪ್ ಹಿಂದಿನಿಂದಲೇ ನೋವು, ಸಿಟ್ಟು ತೋಡಿಕೊಳ್ಳುತ್ತಿದ್ದರು. ಸಂದರ್ಶನದಲ್ಲಿ ಜನ ತನ್ನ ಬಾಡಿ ಶೇಮಿಂಗ್ ಮಾಡುತ್ತಿರುವುದರ ಬಗ್ಗೆ ಬಹಳ ಬೇಸರದಿಂದ ಮಾತನಾಡಿದ್ದರು. ಬಾಲ್ಯದಲ್ಲಿ ಅಪ್ಪ ಸುದೀಪ್ ಜೊತೆ ಮಾಲ್‌ಗೆ ಹೋದಾಗ ಅಲ್ಲಿ ಜನ ಏಕಾಏಕಿ ಅವರನ್ನು ಮುತ್ತಿಕೊಳ್ಳುತ್ತಾರೆ. ಆ ಜನರ ತಳ್ಳಾಟದಲ್ಲಿ ಅಪ್ಪನನ್ನು ಬಿಟ್ಟು ಆಚೆ ಹೋದ ತಾನು ಹೇಗೆ ಒಂಟಿಯಾಗಿ ಭಯ ಅನುಭವಿಸಿದೆ ಅನ್ನೋದನ್ನೂ ತೋಡಿಕೊಂಡಿದ್ದರು. ಜತೆಗೆ ತನ್ನ ಪಾಡಿಗೆ ತಾನು ತನಗೆ ಬೇಕಾದ ಡ್ರೆಸ್ ಹಾಕ್ಕೊಂಡು ಮೇಕಪ್ ಮಾಡದೇ ತನ್ನಂತೆ ತಾನಿದ್ದಾಗ ಜನ ತನ್ನ ದೇಹದ ಬಗ್ಗೆ, ಸೌಂದರ್ಯದ ಬಗ್ಗೆ ಹೇಗೆಲ್ಲ ಮಾತನಾಡಿದ್ದರು ಎಂಬುದನ್ನೂ ವಿಷಾದದಿಂದ ಹೇಳಿಕೊಂಡಿದ್ದರು.
ಮಸ್ತ್ ಮಲೈಕಾ ಖದರ್:
ಆದರೆ ಸುದೀಪ್ ನಟನೆಯ ' ಮಾರ್ಕ್ ' ಸಿನಿಮಾದ ಮಸ್ತ್ ಮಲೈಕಾ ಹಾಡು ಹಾಡಿದ್ದು ಸಾನ್ವಿ ಅವರನ್ನು ಸಾರ್ವಜನಿಕವಾಗಿ ಇನ್ನೂ ಹೆಚ್ಚು ಗುರುತಿಸಿಕೊಳ್ಳುವ ಹಾಗೆ ಮಾಡಿತು. ಐದು ಕೋಟಿ ಜನ ಈ ಹಾಡನ್ನು ಕೇಳಿ ಶಹಬ್ಬಾಸ್ ಅಂದಿದ್ದು ಸಾನ್ವಿಗೆ ಆರಂಭದಲ್ಲೇ ಸಿಕ್ಕ ದೊಡ್ಡ ಬ್ರೇಕ್ ಅನ್ನಬಹುದು. ಆಕೆಯ ಹಾಡಿನ ಬಗ್ಗೆ ಎಲ್ಲ ಕಡೆ ಒಳ್ಳೆ ಮಾತು ಕೇಳಿಬಂತು.
ಇದಾಗಿದ್ದೇ ಸಾನ್ವಿ ಸಖತ್ ಸೌಂಡ್ ಮೈ ಮೇಲೆ ಗಣೇಶನ ಟ್ಯಾಟ್ಯೂ ಹಾಕಿಸಿಕೊಂಡು. ತನ್ನ ಬೆನ್ನ ಮೇಲೆ ಸೊಗಸಾಗಿ ಗಣೇಶನ ಟ್ಯಾಟೂ ಹಾಕಿಸಿಕೊಂಡಿದ್ದಕ್ಕೆ ಜನ ಬಾಯಿಗೆ ಬಂದ ಹಾಗೆ ಮಾತನಾಡಿದ್ರು. ಸುದೀಪ್ ಅವರನ್ನೂ ಎಳೆದು ತಂದು ಮಾತಾನಾಡಿದ್ರು. ಸಾನ್ವಿ ಹಾಕ್ಕೊಂಡಿರೋ ಗಣೇಶನ ಟ್ಯಾಟೂ ಧಾರ್ಮಿಕ ಭಾವನೆಗೆ ಮಾಡುವ ಅವಮಾನ ಎಂದೆಲ್ಲ ಹೇಳಿಕೊಂಡರು.
ರೊಚ್ಚಿಗೆದ್ದ ಸುದೀಪ್ ಪುತ್ರಿ
ಆಗ ಕಮಕ್ ಕಿಮಕ್ ಅನ್ನದೆ ಸುಮ್ಮನಿದ್ದ ಸಾನ್ವಿ, ಇದೀಗ ಏಕಾಏಕಿ ರೊಚ್ಚಿಗೆದ್ದಿದ್ದಾರೆ. ವ್ಯಂಗ್ಯ, ನೋವು, ವಿಷಾದದಿಂದ ಕಾಮೆಂಟ್ ಮಾಡಿದ್ದಾರೆ. ನನ್ನ ಮೈಮೇಲೆ ನಾನು ಟ್ಯಾಟೂ ಹಾಕ್ಕೊಳ್ಳೋದಕ್ಕೆ ನಿಮ್ ಪರ್ಮಿಶನ್ ತಗೋಬೇಕಾ, ನನ್ನ ಲೈಫ್ ನಲ್ಲಿ ನಾನು ಹೇಗಿರ್ಬೇಕು ಅಂತ ನಿಮ್ಮಿಂದ ಪಾಠ ಹೇಳಿಸ್ಕೋಬೇಕಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ನಮ್ಮ ಅಪ್ಪನ ಬರ್ತ್ ಡೇ ಗಳನ್ನು, ಆಪ್ತರ ಅಗಲಿಕೆಯನ್ನು ನಮಗೆ ಅನುಭವಿಸೋದಕ್ಕೆ ಆಗ್ತಿಲ್ಲ. ಅದರಲ್ಲೂ ನೀವು ಎಂಟರ್‌ಟೇನ್‌ಮೆಂಟ್ ಹುಡುಕ್ತೀರಿ. ನಮ್ಮ ಖಾಸಗಿ ಬದುಕಿನ ಕ್ಷಣಗಳನ್ನು ನಿಮ್ಮ ಮನರಂಜನೆಯ ಸರಕಾಗಿ ಬಳಸುವ ಮನಸ್ಥಿತಿಗೆ ಏನನ್ನಬೇಕು ಎಂದು ಬೇಸರ ಹಂಚಿಕೊಂಡಿದ್ದಾರೆ. ರಾತ್ರಿಯಷ್ಟೇ ಸಾನ್ವಿ ಹಾಕಿದ ಸ್ಟೇಟಸ್ ನಲ್ಲಿ ಕೆಲವರ ಕಾಮೆಂಟ್‌ಗಳನ್ನು ಹಾಕಿ ಜಾಡಿಸಿದ್ದಾರೆ. ಅಂಕಲ್ ಮೊದಲು ಸರಿಯಾಗಿ ಇಂಗ್ಲೀಷ್ ಬರೆಯಲು ಕಲಿಯಿರಿ ಅಂದಿದ್ದಾರೆ.
ಸಾನ್ವಿ ಮಾತಿಗೆ ಇನ್ನೇನು ಪ್ರತಿಕ್ರಿಯೆ ವ್ಯಕ್ತವಾಗುತ್ತೋ ಗೊತ್ತಿಲ್ಲ. ಆದರೆ ಸಾನ್ವಿ ಅವರ ಈ ಸ್ಟೇಟಸ್ ಅವರೊಳಗೆ ಎಂಥ ನೋವಿದೆ ಅನ್ನೋದನ್ನು ಸಾರಿ ಹೇಳಿದೆ.
ಬರಹ: ಭವಾನಿ ಭಟ್














Click it and Unblock the Notifications