ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"ಮಾತೃಪೂರ್ಣ" ಯೋಜನೆಯಡಿ ನೀಡುತಿದ್ದ ಮೊಟ್ಟೆ ಸ್ಥಗಿತಕ್ಕೆ ಆಕ್ರೋಶ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ನವಂಬರ್ 30 : ಅಂಗನವಾಡಿಗಳಲ್ಲಿ ಶಿಶು ಹಾಗೂ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವ ಸರ್ಕಾರದ ಯೋಜನೆಯಲ್ಲಿ ಮಹತ್ವಪೂರ್ಣ 'ಮಾತೃಪೂರ್ಣ' ಯೋಜನೆಯಡಿ ನೀಡಲಾಗುತಿದ್ದ ಮೊಟ್ಟೆ ವಿತರಣೆಯನ್ನು ಸ್ಥಗಿತಗೊಳಿಸಲಾಗಿದೆ.

ಪೂರೈಕೆ ಕೊರತೆ, ಮೊಟ್ಟೆ ದರದಲ್ಲಿ ಭಾರೀ ಏರಿಕೆಪೂರೈಕೆ ಕೊರತೆ, ಮೊಟ್ಟೆ ದರದಲ್ಲಿ ಭಾರೀ ಏರಿಕೆ

ಬೆಲೆ ಏರಿಕೆಯಿಂದ ಈಗ ಧಾರವಾಡ ಜಿಲ್ಲೆಯ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಮೊಟ್ಟೆ ವಿತರಣೆ ಸ್ಥಗಿತಗೊಳಿಸಲಾಗಿದೆ. ಈಗ ಒಂದು ಮೊಟ್ಟೆ 5 ರೂಪಾಯಿಂದ 6.50 ಯಿಂದ 7 ರೂಪಾಯಿಗೆ ಏರಿಕೆಯಾಗಿದೆ. ಇದರಿಂದ ಕೇಲ ಅಂಗನವಾಡಿ ಕೇಂದ್ರಗಳಲ್ಲಿ ಮೊಟ್ಟೆ ವಿತರಣೆ ಸ್ಥಗಿತಗೊಳಿಸಿದ್ದರೆ ಇನ್ನು ಕೇಲ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತೆಯರಿಗೆ 5 ರೂಪಾಯಿಗಿಂತ ಹೆಚ್ಚಿಗೆ ಹಣ ತಾವೇ ಸಂದಾಯ ಮಾಡಿ ಮಕ್ಕಳಿಗೆ ನೀಡಬೇಕೆಂದು ಅಲಿಖಿತ ಆದೇಶ ಸಹ ಹೊರಡಿಸಿದೆ. ಇದರಿಂದಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ ಏನು ಮಾಡಬೇಕೆಂದು ತಿಳಿಯುತಿಲ್ಲ.

Price raise hits on eggs Distribution

ಸರ್ಕಾರ ತಾವೇ ಜಾರಿಗೆ ತಂದ ಯೋಜನೆಗಳ ಬಗ್ಗೆ ಅಷ್ಟೊಂದು ಕಾಳಜಿವಹಿಸತಿಲ್ಲ ಎಂದು ಅಂಗನವಾಡಿ ಕಾರ್ಯಕರ್ತೆಯರು ಅಸಮಧಾನ ವ್ಯಕ್ತಪಡಿಸುತಿದ್ದಾರೆ . ತಮ್ಮ ಸಂಬಳಸಲ್ಲಿಯೇ ಹಣ ನೀಡಿ ಮೊಟ್ಟೆ ಖರೀದಿಸಿ ಮಕ್ಕಳಿಗೆ ನೀಡಿ ಎಂದು ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ, ಆದರೆ ನಮಗೆ ಇರುವ ಅಲ್ಪ ಸ್ವಲ್ಪ ಸಂಬಳದಲ್ಲಿ ಹೇಗೆ ಹಣ ನೀಡಿ ಮೊಟ್ಟೆ ತರಬೇಕು ಎನ್ನುತ್ತಾರೆ ಅಂಗನವಾಡಿ ಶಿಕ್ಷಕಿಯರು..

ಕಾರ್ಯಕ್ರಮದ ಉದ್ದೇಶಕ್ಕೆ ಎಳ್ಳು ನೀರು; ಮಕ್ಕಳಿಗೆ ಅಂಗನವಾಡಿ ಕೇಂದ್ರದಲ್ಲಿ ಹೆಚ್ಚು ಪೌಷ್ಠಿಕತೆ ಅಂಶಗಳನ್ನು ಒಳಗೊಂಡ ಮಧ್ಯಾಹ್ನದ ಪೌಷ್ಠಿಕ ಊಟ ಒದಗಿಸುವ ಜೊತೆ ಮೊಟ್ಟೆ ವಿತರಣೆ ಮಾಡುವ ಮೂಲಕ ಅವರ ಪೌಷ್ಠಿಕಾಂಶದ ಪ್ರಮಾಣವನ್ನು ಹೆಚ್ಚಿಸಿ, ಕಡಿಮೆ ತೂಕದ ಮಕ್ಕಳ ಜನನ ಶಿಶು ಮರಣ ಪ್ರಮಾಣ ಮತ್ತು ಮಾತೃತ್ವ ಮರಣ ಪ್ರಮಾಣಗಳನ್ನು ಮತ್ತು ಕಡಿಮೆ ತೂಕದ ಮಕ್ಕಳ ಜನನ ಪ್ರಮಾಣವನ್ನು ಕಡಿಮೆ ಮಾಡುವುದಾಗಿತ್ತು.

ಆದರೆ ಸರ್ಕಾರ ಇಂತರ ಪರಿಣಾಮ ಯೋಜನೆಗಳನ್ನು ಜಾರಿಗೆ ತರುವಾಗ ಇರುವ ಆಶಕ್ತಿ ಅದನ್ನು ಸರಿಯಾಗಿ ಅನುಷ್ಠಾನಗೊಳಿಸುವಾಗ ಇರುವುದಿಲ್ಲ ಎಂಬುದಕ್ಕೆ ಇದೇ ತಾಜಾ ಉದಾಹರಣೆ.

English summary
The price raise in Market has been effected on distribution of eggs in the Anganawadis in Dharwad district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X