"ಹಿಂದೂಗಳು 12 ಮಕ್ಕಳನ್ನು ಮಾಡಿಕೊಳ್ಳಿ"
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಪ್ರಮೋದ್ ಮುತಾಲಿಕ್ ಮತ್ತೆ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ನ್ಯಾಯಾಧೀಶರಿಗೆ ಸಂಬಂಧಿಸಿದಂತೆ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮುಸ್ಲಿಮರು ನಿಮ್ಮ ಮನೆಯ ಹೆಣ್ಣು ಮಕ್ಕಳ ವಿಷಯದಲ್ಲೂ ಇದೇ ರೀತಿ ಮಾಡಿದರೆ ಹೇಗೆ ಎಂದು ಅವರು ಕೇಳಿದ್ದಾರೆ. ಮುಂದುವರಿದು ವ್ಯಾನಿಟಿ ಬ್ಯಾಗ್‌ನಲ್ಲಿ ತ್ರಿಶೂಲ ಇಟ್ಕೊಳಿ. ಯಾವನಾದ್ರು ಬಂದ್ರೆ ಚುಚ್ಚಿರಿ ಎಂದು ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ. ಮುಂದುವರಿದು ದೇಶದಲ್ಲಿ ಪೊಲೀಸ್, ಕೋರ್ಟ್ ಏನು ಮಾಡುತ್ತಿಲ್ಲ. ಇಲ್ಲಾ ನಮ್ಮ ರಕ್ಷಣೆ ನಾವೇ ಮಾಡಿಕೊಳ್ಳಬೇಕು. ನೇಹಾಗೆ 27 ಬಾರಿ ಚುಚ್ಚಿದ್ದಾರೆ ನಾವು ಒಂದೇ ಬಾರಿ ಚುಚ್ಚಿದರೆ ಸಾಕು. ಎಲ್ಲಿ ಒದೆಯಬೇಕು ಅಲ್ಲಿ ಒದ್ದು ಪಾಠ ಕಲಿಸಿ. ಮನೆಯಲ್ಲಿ ಒಂದು ತಲ್ವಾರ್ ಇರಿಸಿಕೊಳ್ಳಿ. ಆಯುಧ ಪೂಜೆ ನಮ್ಮ ಸಂಪ್ರದಾಯ ಪುಸ್ತಕ, ಪೆನ್ನು ನಮ್ಮ ಆಯುಧಗಳಲ್ಲ ಎಂದು ಹೇಳಿದ್ದಾರೆ.
ಹುಬ್ಬಳ್ಳಿಯ ನೇಹಾ ಸಾವಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಶ್ರೀರಾಮಸೇನೆಯಿಂದ ಶುಕ್ರವಾರ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಸ್ವರಕ್ಷಣೆಗಾಗಿ ಮಹಿಳೆಯರಿಗೆ ತ್ರಿಶುಲ ದೀಕ್ಷೆ ಮತ್ತು ಲವ್ ಜಿಹಾದ್ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರಲ್ಲಿ ನೇಹಾ ಶ್ರದ್ಧಾಂಜಲಿ ಸಲ್ಲಿಕೆಗಾಗಿ ಪೂರ್ಣಾಹುತಿ ಹೋಮ, ಹವನ ನಡೆಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿರುವ ಅವರು, ತಲ್ವಾರ್, ಚಾಕುಗಳು ಆಯುಧಗಳು ಅವುಗಳನ್ನ ಇಟ್ಟು ಪೂಜೆ ಮಾಡಬೇಕು. ದೇವ-ದೇವತೆಗಳ ಕೈಯಲ್ಲಿದೆ ಆಯುಧಗಳಿವೆ. ಮುಂದಿನ ಆಯುಧ ಪೂಜೆಗೆ ಶಸ್ತ್ರಗಳನ್ನಿಟ್ಟು ಪೂಜೆ ಮಾಡಿ. ಪ್ಲಾಸ್ಟಿಕ್ ಇಡಬೇಡಿ, ಹರಿತವಾದದ್ದನೆ ಇಡಿ. ಇದಕ್ಕೆ ಯಾವುದೇ ಪೊಲೀಸರು ಏನು ಮಾಡಲ್ಲ. ಈ ತ್ರಿಶೂಲ ಆರು ಇಂಚು ಇಲ್ಲಾ ಮೂರು ಇಂಚು ಇದೆ . ಚುಚ್ಚಿದ್ರೆ ಅ* ಅನ್ನೋ ಶಬ್ದ ಬರಬೇಕು. ಯಾವನು ಕೇಳ್ತಾನೋ ಅವನಿಗೆ ಮೊದಲು ಚುಚ್ಚಿ. ಪೊಲೀಸರು ಆಯುಧ ಪೂಜೆ ದಿನ ಬಂದೂಕಿಗೆ ಪೂಜೆ ಮಾಡ್ತಾರೆ. ನೇಹಾಳನ್ನ ಕೊಂದವನಿಗೆ ಗಲ್ಲು ಶಿಕ್ಷೆ ಕೊಟ್ಟಾಗ ಶಾಂತಿ ಸಿಗುತ್ತೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರೇ ಮೂರು ತಿಂಗಳಲ್ಲಿ ಶಿಕ್ಷೆ ಕೊಡ್ತೇನೆ ಅಂತ ಒಂದು ವರ್ಷ ಆಯ್ತು. ಮಾನ್ಯ ನಿದ್ದರಾಮಯ್ಯ ಅವರೇ ಯಾತಕ್ಕೆ ಸುಮ್ನಿದ್ದೀರಿ
ಕೋರ್ಟ್, ಪೊಲೀಸ್ ಎಲ್ಲರಿಗೂ ಹೇಳ್ತಾ ಇದ್ದೇವೆ. ನೇಹಾಳ ಕೊಲೆ ಆರೋಪಿಗೆ ಜಾಮೀನು ಕೊಟ್ರೆ ಕಲ್ಲು ಹೊಡೆದು ಕೊ*. ಐದು ವರ್ಷದ ಮಗುವನ್ನ ಕೊಂದವನಿಗೆ ಗುಂಡು ಹೊಡೆದ ಪಿಎಸ್ಐಗೆ ಸಾವಿರ ನಮನ. ಜೈಲು, ಕೋರ್ಟ್ ಎಲ್ಲಾ ಸಾಕು ಈಗ ನಮಗೆ ಎಂದು ಮುತಾಲಿಕ್ ಹೇಳಿದ್ದಾರೆ.
ಹುಬ್ಬಳ್ಳಿ ಶಿವಕೃಷ್ಣ ಮಂದಿರದಲ್ಲಿ ಈ ಕಾರ್ಯಕ್ರಮ ನಡೆಯಿತು. ಹೋಮದ ಬಳಿಕ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್‌ರಿಂದ ದಿಕ್ಸೂಚಿ ಭಾಷಣ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು, ವಿವಿಧ ಮಹಿಳಾ ಸಂಘಟನೆ ಸದಸ್ಯರು ಭಾಗಿಯಾಗಿದ್ದರು.
ದಿವಂಗತ ನೇಹಾ ಹಿರೇಮಠ್‌ಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶ್ರೀರಾಮಸೇನೆಯಿಂದ ಗೌರವ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ನೇತೃತ್ವದಲ್ಲಿ ಕಾರ್ಯಕ್ರಮ
ಮೌನಾಚರಣೆ ನೆರವೇರಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ನೂರಾರು ಯುವತಿಯರು, ಮಹಿಳೆಯರು ಹಾಗೂ
ಮಾತಾ ಆಶ್ರಮದ ತೇಜೋಮಯಿ ಮಾತಾ ಭಾಗಿಯಾಗಿದ್ದರು.
ಡಾ.ಬಿಆರ್ ಅಂಬೇಡ್ಕರ್ ಅವರ ಮಾತು ಕೇಳಿದ್ದರೆ ಇಂದು ಲವ್ ಜಿಹಾದ್, ಕೊಲೆ, ಪಾಕಿಸ್ತಾನ್ ಜಿಂದಾಬಾದ್ ಎನ್ನುವ ನಮಕ್ ಹರಾಮ್ ನ* ಮಕ್ಕಳು ಇಲ್ಲಿ ಇರುತ್ತಿರಲಿಲ್ಲ. ನೇಹಾ ಹಿರೇಮಠ್ ಏನು ಅಪರಾಧ ಮಾಡಿದ್ಲು. ಪ್ರೀತಿ ಮಾಡಿರಬಹುದು, ಮದುವೆ ಆಗೋದಿಲ್ಲ ಅಂತ ಹೇಳಿರಬಹುದು. ಅಷ್ಟು ಹೇಳಿದ್ದಕ್ಕೆ ಕೊಂದೇ ಬಿಡೋದಾ. ಇಡೀ ದೇಶವನ್ನ ಪಾಕಿಸ್ತಾನ್ ಮಾಡಲು ಹೊರಟಿದ್ದಾರೆ. ನಮ್ಮ ದೇಶವನ್ನ ಅ*ನ ಕೈಗೆ ಕೊಡೋಕೆ ಹೊರಟ್ಟಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.
ಮುಂದುವರಿದು ನಮ್ಮ ಜಾಗವನ್ನು ಕಬಳಿಸುತ್ತಿದ್ದಾರೆ. 9 ಲಕ್ಷ ಎಕರೆ ಜಾಗವನ್ನು ವಕ್ಫ ಬೋರ್ಡ್‌ಗೆ ಹೋಗಿದೆ. ಅಂದರೆ 5 ಪಾಕಿಸ್ತಾನ್, 10 ಬಾಂಗ್ಲಾ ದೇಶ ಆಯ್ತು. ಮಕ್ಕಾ-ಮದಿನಾದಿಂದ ತಗೊಂಡು ಬಂದ್ರಾ? ನಮ್ಮದು ಇದೆಲ್ಲ. ಜನಸಂಖ್ಯೆ, ಜಮೀನು ಜಾಸ್ತಿ ಮಾಡಿ ಇಸ್ಲಾಂ ರಾಷ್ಟ್ರ ಮಾಡೋಕೆ ಹೊರಟ್ಟಿದ್ದಾರೆ. ಜನಸಂಖ್ಯೆ ಮಾಡಲು 5-5 ಮದುವೆ ಆಗ್ತಾ ಇದ್ದಾರೆ. ರಾಜ್ಯದಲ್ಲಿ ಮೂರನೇ ಹೆಣ್ಣು ಮಗು ಹುಟ್ಟಿದರೆ ಅದರ ಆರೋಗ್ಯ, ಶಿಕ್ಷಣ ಎಲ್ಲವನ್ನೂ ಶ್ರೀರಾಮಸೇನೆಯಿಂದ ಕೊಡಲಾಗುತ್ತದೆ.
ನಿಮಗೆ ಮಗುವಿನ ಚಿಂತೆ ಆದರೆ ನಮಗೆ ದೇಶದ ಚಿಂತೆಯಾಗಿದೆ. ನೀವು ಡಜನ್ ಗಟ್ಟಲೆ ಮಕ್ಕಳನ್ನು ಮಾಡಿಕೊಳ್ಳಿ ನಾವು ಸಾಕುತ್ತೇವೆ.
ನಮ್ಮ ಮೇಲಿನ 4 ಋಣವನ್ನು ತೀರಿಸುವ ಕರ್ತವ್ಯ ನಮ್ಮದು. ತಂದೆ-ತಾಯಿ, ಶಿಕ್ಷಣ ಕೊಟ್ಟ ಗುರುಗಳು, ಸಮಾಜ, ದೇಶ ಮಾತೃ-ಪಿತೃ ದೇವೋಭವ ಅನ್ನೋದನ್ನ ನಾವು ಉಳಿಸಬೇಕು. ದೇಶದ ಋಣ ತೀರಿಸೋದು ಬಹಳ ಮುಖ್ಯ. ಪಾಕಿಸ್ತಾನ್, ಬಾಂಗ್ಲಾ ನಮ್ಮ ಮುಂದೆ ಉದಾಹರಣೆ ಇದೆ.
1947ಕ್ಕಿಂಯ ಮುಂಚೆ ಇರಲಿಲ್ಲ, ನಮ್ಮ ನಾಯಕರ ದೌರ್ಬಲ್ಯದಿಂದ ನಿರ್ಮಾಣ ಆಯ್ತು. ಅಲ್ಲಿ ಮೊದಲು ದೇವಸ್ಥಾನ, ಮಠ ಎಲ್ಲವೂ ಇತ್ತು. ಯಾಕೆಂದರೆ ಭಾರತ ಇತ್ತು. ಅಲ್ಲಿಯ ಹಿಂದೂಗಳ ಬಗ್ಗೆ ಯೋಚನೆ ಮಾಡಲೇ ಇಲ್ಲ. ಸುಮಾರು 20 ಲಕ್ಷ ಜನರ ಕಗ್ಗೊ* ಆಯ್ತು.
ನೀವು ಪಾರ್ಲಿಮೆಂಟ್‌ನಲ್ಲಿ ಕೂತು ಸಹಿ ಮಾಡುವಾಗ ಅಲ್ಲಿನ ಹಿಂದೂಗಳ ಬಗ್ಗೆ ಯೋಚನೆ ಮಾಡಲಿಲ್ಲ. ಅಂಬೇಡ್ಕರ್ ಅವಾಗಲೇ ಪಾಕಿಸ್ತಾನ್ ವಿಭಜನೆ ಬಗ್ಗೆ ಒಪ್ಪುವುದಿಲ್ಲ ಎಂದಿದ್ದರು ಎಂದು ಮುತಾಲಿಕ್ ಹೇಳಿದ್ದಾರೆ.
ಪಾಕಿಸ್ತಾನ್ ಮಾಡುವುದಾದರೆ ಅಲ್ಲಿನ ಹಿಂದುಗಳನ್ನು ಕರೆಸಿಕೊಳ್ಳಿ. ಇಲ್ಲವೇ ಮುಸ್ಲಿಂರನ್ನು ಅಲ್ಲಿಗೆ ಕಳುಹಿಸಿ ಬಿಡಿ ಎಂದಿದ್ದರು. ಯಾಕಂದರೆ ಮುಸ್ಲಿಮರ ಬುದ್ಧಿ ಗೊತ್ತಿತ್ತು. ನಾಯಕರಿಗೆ ಖುರ್ಚಿ ಬೇಕಾಗಿತ್ತು ಇದರ ಬಗ್ಗೆ ಯೋಚನೆ ಮಾಡಲೇ ಇಲ್ಲ. ಆಗ ಅಲ್ಲಿ 12 ಕೋಟಿ ಹಿಂದೂಗಳಿದ್ದರು. ಈಗ 1 ಕೋಟಿನೂ ಇಲ್ಲ. ಅಂಬೇಡ್ಕರ್ ಮಾತು ಕೇಳಿದ್ದರೆ ಹಿಂದೂಗಳು ಉಳಿಯುತ್ತಿದ್ದರು. ಇಲ್ಲಿನ ಮುಸ್ಲಿಮರು ಪಾಕಿಸ್ತಾನ್ ಬೇಕು ಅಂತ ಜಿನ್ನಾಗೆ ಮತ ಹಾಕಿದ್ದರು. ಆದರೆ ಎಲ್ಲರೂ ಹೋಗದೆ ನಾವು ಹಿಂದೂಗಳ ಜೊತೆ ಒಟ್ಟಾಗಿರ್ತಿವಿ ಅಂತ ಹೇಳಿದ್ದರು. ಈಗ ಯಾವ ಪರಿಸ್ಥಿತಿಗೆ ಬಂದಿದೆ ನೋಡಿ.
ನಮ್ಮ ಸಹಾಯವಾಣಿ ಮೂಲಕ ಲವ್ ಜಿಹಾದ್‌ಗೆ ಒಳಗಾದವರ ನೋವನ್ನು ಕೇಳುತ್ತಿದ್ದೇವೆ. ಇದನ್ನ ನಿರ್ಮೂಲನೆ ಮಾಡೋಕೆ ನಮ್ಮ ಕಾರ್ಯಕರ್ತರು ಬಹಳ ಕಷ್ಟ ಪಡ್ತಾರೆ ಇದ್ದಾರೆ. ಪ್ರೀತಿಗೆ ನಮ್ಮ ವಿರೋಧ ಇಲ್ಲ ಅಂತಲೂ ಅವರು ಹೇಳಿದ್ದಾರೆ.
ಕಾಮ ಅನ್ನೋದೇ ಇದಕ್ಕೆಲ್ಲ ಕಾರಣ: ಮಾತಾ ತೇಜೋಮಯಿ
ಇಂದಿನ ಹಿಂದೂ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳಿಗೆ ಕಾಮವೇ ಕಾರಣ ಎಂದು ನಗರದ ಮಾತಾ ಆಶ್ರದಮ ತೇಜೋಮಯಿ ಅಮ್ಮ ಹೇಳಿದರು.
ನಗರದಲ್ಲಿಂದು ಶ್ರೀರಾಮ ಸೇನೆ ವತಿಯಿಂದ ಹೆಣ್ಣು ಮಕ್ಕಳಿಗೆ ತ್ರಿಸೂಲ ದೀಕ್ಷಾ ಕಾರ್ಯಕ್ರಮ ಅವರು ಮಾತನಾಡಿದರು. ಮೊಘಲರ ಸಾಮ್ರಾಜ್ಯವನ್ನ ನಾವು ಮತ್ತೆ ವೆಲ್ಕಮ್ ಮಾಡ್ಕೊಳ್ತಾ ಇದ್ದೀವಾ. ಪ್ರತಿಯೊಬ್ಬ ಸ್ತ್ರೀಯರಲ್ಲಿ ಹರಿಯುತ್ತಿರೋ ರಕ್ತ ಯಾರದು ಎಂದು ಪ್ರಶ್ನೆ ಮಾಡಿದರು. ಸಮಾಜ ಸೀತೆ ಸಾವಿತ್ರಿಯನ್ನು ಮರೆಯುತ್ತೋ ಅವಾಗ ಭಾರತ ಅಲ್ಲಾಡುತ್ತೆ ಅಂತ ಸ್ವಾಮಿ ವಿವೇಕಾನಂದ ಹೇಳ್ತಾರೆ. ಆದರೆ ಈಗ ನನಗೆ ಅಲ್ಲಾಡುತ್ತೆ ಎಂದು ಅನಿಸುತ್ತಿದೆ ಎಂದಿದ್ದಾರೆ.
ಧೀರ ಮಹಿಳೆಯರಿಗೆ ಭಾರತದಲ್ಲಿ ಕಡಿಮೆ ಇಲ್ಲ. ಇಂದು ಹೆಣ್ಣು ಮಕ್ಕಳಿಗೆ ಇಷ್ಟದರೂ ಶಿಕ್ಷಣ ಕೊಡಿಸಿ. ಆದರೆ ಚಾರಿತ್ರೆಯ ಬಗ್ಗೆ ಹೇಳದೆ ಹೋದರೆ, ಇಂತಹ ಘಟನೆಗಳು ನಿಲ್ಲೋದಿಲ್ಲ. ಹಿಂದೂ ಧರ್ಮ ಅಲ್ಲಾಡಿದಾಗ ಇಡಿ ಜಗತ್ತು ಅಲ್ಲಾಡುತ್ತೆ ಅಂತ ವಿವೇಕಾನಂದರು ಹೇಳ್ತಾರೆ
ಯಾಕೆ ಇಷ್ಟು ಲವ್ ಜಿಹಾದ್ ಕೇಸ್ ಆಗ್ತಾ ಇವೆ ಎಂದು ಪ್ರಶ್ನೆ ಮಾಡಿದ್ದಾರೆ. ನಮ್ಮ ಬೇರನ್ನ ನಾವು ಗಟ್ಟಿ ಮಾಡ್ಕೊಳ್ಳಬೇಕು ಅವರು ಮಾಡೋದು ರಾಕ್ಷಸಿಯ ಘಟನೆ. ಇತ್ತೀಚಿಗೆ ಹೆಣ್ಣು ಮಕ್ಕಳು ಬಳೆ, ಕುಂಕುಮ ಹಾಕಿಕೊಳ್ಳಲು ಆಗ್ತಿಲ್ಲ. ಧರ್ಮ ಸಮ್ಮತವಾದ ಶಿಕ್ಷಣ ನಿಮ್ಮ ಮಕ್ಕಳಿಗೆ ಕೊಡಿ ಪುಸ್ತಕದಲ್ಲಿ ಕೇವಲ ನಮ್ಮನ್ನ ಕೊಳ್ಳೆ ಹೊಡೆಯೋದೆ ಹೇಳ್ತಾರೆ. ನಮ್ಮ ಶಿವಾಜಿ, ಸಾಂಬಾಜಿ ಬಗ್ಗೆ ಯಾಕೆ ಹೇಳಲ್ಲ. ತಾಯಂದಿರು ಮೊಬೈಲ್ ಹಿಡ್ಕೊಂಡು ಕೂತ್ರೆ ಮಕ್ಕಳಿಗೆ ಯಾವ ಸಂಸ್ಕಾರ ಸಿಗುತ್ತೆ. ಪ್ರಮೋದ್ ಮುತಾಲಿಕ್ ಅವರನ್ನ ನೋಡಿದ್ರೆ ಶಿವಾಜಿಯನ್ನ ನೋಡಿದಂತೆ ಆಗುತ್ತೆ ಎಂದು ಅವರು ಹೇಳಿದ್ದಾರೆ.
-
Nora Fatehi: ಕನ್ನಡ ಹಾಡಿನಿಂದ ವಿವಾದಕ್ಕೆ ಸಿಲುಕಿರುವ ಬಾಲಿವುಡ್ನ ಡ್ಯಾನ್ಸ್ ಕ್ವೀನ್ ನೋರಾ ಫತೇಹಿ ಅಸಲಿ ಕಥೆ ಇದು -
Prem: ಸರ್ಸೆ ಸೆರಗ ಹಾಡನ್ನ ಎಲ್ರೂ ತಪ್ಪಾಗಿ ಅರ್ಥ ಮಾಡ್ಕೊಂಡಿದ್ದಾರೆ, ನನ್ನ ಉದ್ದೇಶ ಅದಾಗಿರಲಿಲ್ಲ: ಪ್ರೇಮ್ -
ಸಿನಿಮಾಗಳಲ್ಲಿ ಅಶ್ಲೀಲ ಸಾಹಿತ್ಯಕ್ಕೆ ಕಡಿವಾಣ ಹಾಕಿ: ಪ್ರೇಮ್ ವಿವಾದದ ಬೆನ್ನಲ್ಲೇ ಫಿಲ್ಮ್ ಚೇಂಬರ್ಗೆ ಮಹಿಳಾ ಆಯೋಗ ಪತ್ರ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral












Click it and Unblock the Notifications