'ಖರ್ಗೆ' ರಾಜಕೀಯ ತೆವಲು, ಚಟಕ್ಕೆ ಮಾತನಾಡುತ್ತಾರೆ: ಪ್ರಹ್ಲಾದ್ ಜೋಶಿ ಗರಂ
ಹುಬ್ಬಳ್ಳಿ, ಏಪ್ರಿಲ್ 12: ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಧಾರವಾಡ ಬಿಜೆಪಿ ಅಭ್ಯರ್ಥಿ ಮತ್ತು ಕೇಂದ್ರ ಸಚಿವರ ಪ್ರಹ್ಲಾದ್ ಜೋಶಿಯವರು ಗರಂ ಆಗಿದ್ದಾರೆ. ಪ್ರಧಾನಿ ಮೋದಿ ವಿರುದ್ಧ ರಾಜಕೀಯ ತೆವಲಿಗೆ ಮಾತನಾಡುತ್ತಾರೆ ಎಂದು ಅವರು ವಾಗ್ದಾಳಿ ನಡೆಸಿದರು.
ನಗರದಲ್ಲಿ ಶುಕ್ರವಾರ ಮಾತನಾಡಿದ ಅವರು, ಕಾಂಗ್ರೆಸ್‌ನ ಪ್ರಿಯಾಂಕ್ ಖರ್ಗೆಯವರು ಪ್ರಧಾನ ಮೋದಿ ವಿರುದ್ಧ ರಾಜಕೀಯ ತೆವಲಿಗೆ, ಚಟಕ್ಕೆ ಮಾತಾಡುತ್ತಿದ್ದಾರೆ. ನಿಮ್ಮ ತಂದೆಯವರ ಕಾಲದಲ್ಲಿ ಕಾಂಗ್ರೆಸ್ ಏನಾಗಿದೆ ನೋಡಿ. ಮಲ್ಲಿಕಾರ್ಜುನ್ ಖರ್ಗೆಯವರು ಅಧ್ಯಕ್ಷರಾಗೋಕೆ ಏನೆಲ್ಲ ಮಾಡಿದ್ದಾರೆ ಎಂದು ನೋಡಿ ಎಂದು ಅವರು ತಿರುಗೇಟು ಕೊಟ್ಟರು.

'ರಾಗಾ' ಹೋದ ಕಡೆ ಬಿಜೆಪಿಗೆ ಜಾಸ್ತಿ ಸೀಟು
ನೀವು (ಕಾಂಗ್ರೆಸ್) ಸ್ಪರ್ಧೆ ಮಾಡಿರುವುದು ಕೇವಲ 230 ಸೀಟ್ ಗಳಲ್ಲಿ ಮಾತ್ರ. ನಿಮ್ಮ ಸ್ಥಿತಿ ಹೀಗಿದ್ದರೂ ನೀವು ಹೆಚ್ಚು ಸ್ಥಾನ ಗಳಿಸಿದ ಬಿಜೆಪಿಯ ಪ್ರಧಾನಿ ಮೋದಿಯವರ ಕುರಿತು ಮಾತನಾಡುತ್ತೀರಿ. ನೀವು ಯಾವೆಲ್ಲ ರಾಹುಲ್ ಗಾಂಧಿ ಅವರಿಂದ ಪ್ರಚಾರ ಮಾಡಿಸುತ್ತೀರೋ ಆವಾಗೆಲ್ಲ ಬಿಜೆಪಿ ಜಾಸ್ತಿ ಸೀಟುಗಳು ಬಂದಿವೆ ಎಂದು ಕಾಂಗ್ರೆಸ್‌ಗೆ ತಿವಿದರು.
2019ರ ಇದೇ ಲೋಕಸಭಾ ಚುನಾವಣೆಯಲ್ಲಿ 303 ಸೀಟುಗಳು ಬಂದಿವೆ. ಈ ಬಾರಿ ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿಗೆ 375 ಸೀಟ್ ಗಳು ಬುರಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ರಾಹುಲ್ ಗಾಂಧಿ ಎಂಬ ಪ್ರೋಡಕ್ಸ್ ಸರಿ ಇಲ್ಲ
ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಪರೋಕ್ಷವಾಗಿ ಟೀಕಿಸಿದ ಪ್ರಹ್ಲಾದ್ ಜೋಶಿಯವರು, ರಾಹುಲ್ ಗಾಂಧಿ ಅನ್ನೋ ಪ್ರೋಡಕ್ಟ್ ಸರಿ ಇಲ್ಲ ಎಂದು ವ್ಯಂಗ್ಯವಾಡಿದರು.
ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ ಕುರಿತ ಪ್ರಶ್ನೆಗೆ ಅವರು ಉತ್ತರಿಸಲಿಲ್ಲ. ಅವರ ಮಾತುಗಳು ನಮಗೆ ಆಶೀರ್ವಾದವೆಂದು ಪುನರುಚ್ಚರಿಸಿದರು. ನೀವು ಏನೇ ಕೇಳಿದರೂ ನಾನು ಸ್ವಾಮೀಜಿಯವರು ಕುರಿತು ಏನು ಮಾತನಾಡಲ್ಲ. ಇನ್ನೂ ವಚಾನನಂದ ಸ್ವಾಮೀಜಿ ಅಸಮಾಧಾನ ವಿಚಾರವನ್ನು ನಮ್ಮ ಪಕ್ಷದ ನಾಯಕರು ಸರಿ ಮಾಡುತ್ತಾರೆ ಎಂದು ಅವರು ಕೆಲವು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.

ಪೆನ್ ಡ್ರೈವ್ ಹೇಳಿಕೆಗೆ ಜೋಶಿ ಪ್ರತಿಕ್ರಿಯೆ
ಕಾಂಗ್ರೆಸ್ ಹಿರಿಯ ನಾಯ ಬಿ.ಕೆ ಹರಿಪ್ರಸಾದ್ ಪೆನ್ ಡ್ರೈವ್ ಬಗ್ಗೆ ಹೇಳಿಕೆ ವಿಚಾರಕ್ಕೆ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಇದರಿಂದ ಗೊತ್ತಾಗುತ್ತದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಮಧ್ಯೆ ತೀವ್ರ ಕಚ್ಚಾಟ ಇದ್ದೆ ಇದೆ ಎಂದರು.
ಸಿಎಂ, ಡಿಸಿಎಂ ಕಚ್ಚಾಟ ಇರುವ ಹಿನ್ನೆಲೆಯಲ್ಲಿ ಆಗಾಗ ಕೆಲವು ನಾಯಕರು ಹೀಗೆ ಅಸಮಾಧಾನ ಹೊರ ಹಾಕುತ್ತಿರುತ್ತಾರೆ. ಕಾಂಗ್ರೆಸ್ ನಲ್ಲಿ ಯಾವಾಗ ಏನು ಆಗುತ್ತದೆ ಎಂಬುದು ಗೊತ್ತಿಲ್ಲ ಎಂದು ಭವಿಷ್ಯ ನುಡಿದರು.
ಎರಡನೇ ಹಂತದಲ್ಲಿ ಈ ಭಾಗದಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಧಾರವಡ ಕ್ಷೇತ್ರದಿಂದ ನಾನು ಇದೇ ಏಪ್ರಿಲ್ 15 ರಂದು ನಾನು ನಾಮಪತ್ರ ಸಲ್ಲಿಸಲಿದ್ದೇನೆ. ಈ ವೇಳೆ ನನ್ನ ಜೊತೆಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸೇರಿದಂತೆ ಪಕ್ಷದ ಹಲವು ಹಿರಿಯ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.












Click it and Unblock the Notifications