ಬಿವೈ ವಿಜಯೇಂದ್ರ ವಿರುದ್ಧ ರೂ.150 ಕೋಟಿ ಆಮಿಷ: ಪ್ರಹ್ಲಾದ್ ಜೋಶಿ ಹೇಳಿದ್ದೇನು?

ಹುಬ್ಬಳ್ಳಿ, ಡಿಸೆಂಬರ್ 15: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೇಜಾವ್ದಾರಿಯಿಂದ ಮಾತನಾಡುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ವಿರುದ್ಧ ಹಣ ಆಮೀಷ ಆರೋಪಗಳು ಅಟ್ಟರ್ ನಾನ್‌ಸೆನ್ಸ್. ನಮ್ಮ ಅವಧಿಯಲ್ಲೂ ಕೆಲ ನೋಟಿಸ್ ಹೋಗಿರಬಹುದು ಅದನ್ನು ಬಹಿರಂಗಪಡಿಸಿ. ನಮ್ಮ ಮಂತ್ರಿಗಳು ಇದ್ದರೂ ಹೊರಬರಲಿ ಎಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ಸಿಎಂ ಸಿದ್ದರಾಮಯ್ಯನವರ ಹೇಳಿಕೆಗೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು. ವಕ್ಫ್ ವಿಚಾರದಲ್ಲಿ ಮೌನ ವಹಿಸಲು ಅನ್ಪರ್ ಮಾಣಿಪ್ಪಾಡಿ ಅವರಿಗೆ ಬಿವೈ ವಿಜಯೇಂದ್ರ ಅವರು ರೂ.150 ಕೋಟಿ ಆಮಿಷ ಒಡ್ಡಿದ್ದಾರೆ ಎಂಬದು ಅಟ್ಟರ್ ನಾನ್‌ಸೆನ್ಸ್ ಎಂದು ಅವರು ಸಿಎಂ ವಿರುದ್ಧ ಗುಡುಗಿದರು.

Pralhad Joshi Responds to CM Siddaramaiah s Rs150 Crore Allegation Against BY Vijayendra

ಕೇವಲ 150 ಕೋಟಿ ಅಲ್ಲ,1500 ಕೋಟಿ ಎಂದು ಹೇಳಬೇಕಿತ್ತು. ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ.ವಿಜಯೇಂದ್ರ ನಮ್ಮ ಮನೆಗೆ ಬಂದಿದ್ದ ಎಂದು ಅನ್ವರ್ ಮಣಪ್ಪಾಡಿ ಹೇಳಿಲ್ಲ. ಕಾಂಗ್ರೆಸ್ ಸರ್ಕಾರ ಮಾಡಿರುವ ಅಪಚಾರ ಮುಚ್ಚಿಕೊಳ್ಳಲು ಈ ಆರೋಪ ಮಾಡುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.

ಸರ್ಕಾರದ ವಿರುದ್ಧ ಮಾತನಾಡಿದರೆ ಕೋವಿಡ್ ವಿಚಾರವಾಗಿ ಬೆದರಿಸುವ ತಂತ್ರ ಅನುಸರಿಸುತ್ತಿದ್ದಾರೆ. ವಿಪಕ್ಷದವರು ಹೆದರಿಲ್ಲ ಅಂದ ತಕ್ಷಣ FIR ದಾಖಲಿಸುತ್ತಿದ್ದಾರೆ. ಯಾರದ್ದೋ ಹೆಸರು ಹೇಳುತ್ತಿದ್ದಾರೆ. ಕೆಲವು ವಿಚಾರಗಳಲ್ಲಿ ಸುಖಾ ಸುಮ್ಮನೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಿವೈ ವಿಜಯೇಂದ್ರ, ಸುಧಾಕರ್, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಹೆಸರು ಹೇಳುತ್ತಿದ್ದಾರೆ.

ನೀವು ಏನೇ ಮಾಡಿದರೂ ಬಿಜೆಪಿಯು ಶಿಘ್ರವೇ ವಕ್ಪ್ ತಿದ್ದುಪಡಿ ಮಾಡಿ ಜನರಿಗೆ ನ್ಯಾಯ ಕೊಡಿಸುತ್ತದೆ ಎಂದು ರಾಜ್ಯ ಸರ್ಕಾರದ ಆಡಳಿತ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಇನ್ನೂ ಬೆಳಗಾವಿ ಅಧಿವೇಶನ ವೇಳೆ 2ಎ ಮೀಸಲಾತಿಗಾಗಿ ಪಂಚಮಸಾಲಿ ಸಮಾಜದರು ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳು ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ. ಈ ಸಂಬಂಧ ಶಾಸಕ ಹಾಗೂ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ್ ಬೆಲ್ಲದ್ ಬೆಲ್ಲದ್, ಸ್ವಾಮೀಜಿಗಳು ಕರೆ ಮಾಡಿದ್ದರು.

ಶಾಂತಿಯುತ ಹೋರಾಟಗಾರರ ಮೇಲೆ ಹಲ್ಲೆ

ಪಂಚಮಸಾಲಿ ಸಮಾಜದ ಪ್ರತಿಭಟನಾಕಾರರು ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದರು ಎಂಬ ಮಾಹಿತಿ ನನಗೆ ಸಿಕ್ಕಿದೆ.

ಮಿನಿಮಮ್ ಬಲ ಪ್ರಯೋಗ ಮಾಡಬಹುದಿತ್ತು, ಆದ್ರೆ ಸರ್ಕಾರ ಮಾಕ್ಸಿಮಮ್ ಬಲ ಪ್ರಯೋಗ ಮಾಡಿದ ರಾಜ್ಯ ಸರ್ಕಾರ ವೈರಿಗಳ ರೀತಿ ಅವರನ್ನು ನಡೆಸಿಕೊಂಡಿದೆ ಎಂದು ಅವರು ಪಂಚಮಸಾಲಿ ಮುಖಂಡರ ಮೇಲಿನ ಪೊಲೀಸ್ ಲಾಠಿ ಚಾರ್ಜ್ ವಿರುದ್ಧ ಕಿಡಿ ಕಾರಿದರು.

ಪಂಚಮಸಾಲಿ ಹೋರಾಟಗಾರರ ವಿಚಾರದಲ್ಲಿ ರಾಜ್ಯ ಸರ್ಕಾರ ನಡೆಸಿಕೊಂಡ ಹೋರಾಟವನ್ನು ತೀವ್ರವಾಗಿ ನಾನು ಖಂಡಿಸುತ್ತೇನೆ. ಅಲ್ಲಿ ಹೋರಾಟ ಮಾಡಿದವರು ಗೂಂಡಾಗಳು ಅಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೋರಾಟಗಾರರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಗುಡುಗಿದರು.

ಸಿಎಂ ಸಿದ್ದರಾಮಯ್ಯ ಅವರು ಮಣಪ್ಪಾಡಿ ಅವರು ಸ್ವತಃ ವಿಜಯೇಂದ್ರ ಅವರ ವಿರುದ್ಧ ಬಹುಕೋಟಿ ಹಣದ ಆಮಿಷದ ಆರೋಪಿಸಿದ್ದಾರೆ. ಈ ಬಗ್ಗೆ ತನಿಖೆಗೆ ವಹಿಸಬೇಕು ಎಂದು ಬಿಜೆಪಿ ವಿರುದ್ಧ ಕೆಲವು ಆರೋಪ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+