Muda Scandal: ಮೈಕೆಲ್ ಕುನ್ಹ ಕರೆಸಿದ ಸರ್ಕಾರದಿಂದ ತರಾತುರಿಯಲ್ಲಿ ವರದಿ ತಯಾರಿಗೆ ಯತ್ನ: ಪ್ರಹ್ಲಾದ್ ಜೋಶಿ

ಬೆಂಗಳೂರು, ಸೆಪ್ಟಂಬರ್ 01: ರಾಜ್ಯ ಸರ್ಕಾರದ ವಿರುದ್ಧ ಪಾದಯಾತ್ರೆ ನಡೆಸಿದ ಬಿಜೆಪಿ ಮುಡಾ ಹಗರಣ, ವಾಲ್ಮೀಕಿ ಸೇರಿದಂತೆ ಭ್ರಷ್ಟಾಚಾರದ ವಿರುದ್ಧ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದಕ್ಕೆ ತಕ್ಕ ಉತ್ತರ ನೀಡಲು ರಾಜ್ಯ ಸರ್ಕಾರ ಬಿಜೆಪಿ ಕಾಲ ಹಗರಣಗಳನ್ನು ಬಯಲಿಗೆ ಎಳೆಯಲು ಮುಂದಾಗಿದ್ದು, ನ್ಯಾಯಾಧೀಶ ಮೈಕೆಲ್ ಕುನ್ಹ ಅವರಿಂದ ಕೋವಿಡ್ ಹಗರಣದ ವರದಿಯನ್ನು ಸ್ವೀಕರಿಸಿದೆ. ಇದಕ್ಕೆ ತಿರುಗೇಟು ಕೊಟ್ಟ ಕೇಂದ್ರ ಸಚಿವ ಪ್ರಹ್ಲಾದ್ ಜೋಸಿಯವರು ಇದು ತರಾತುರಿಯಲ್ಲಿ ಮಾಡಿದ ವರದಿ ಎಂದು ದೂರಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕೋವಿಡ್ ಸಮಯದಲ್ಲಿ ಆದ ಭ್ರಷ್ಟಾಚಾರ ಕುರಿತು ಆವಾಗಲೇ ಕ್ರಮ ಕೈಗೊಳ್ಳಬೇಕಾಗಿತ್ತು. ಈಗ ಏಕಾಏಕಿ ನ್ಯಾ. ಮೈಕಲ್ ಕುನ್ಹ ಅವರನ್ನು ಕರೆಸಿ ತರಾತುರಿಯಲ್ಲಿ ವರದಿ ಮಾಡಲಾಗುತ್ತದೆ. ಬಿಜೆಪಿಯವರದ್ದು ಈಗ ಬಿಚ್ಚಿ ಇಡುತ್ತೇವೆ ಎಂದು ಹೊರಟಿರುವ ಸರ್ಕಾರ ಬಿಚ್ಚಡಲಿ. ಯಾರು ಬೇಡಾ ಎನ್ನುತ್ತಾರೆ. ಪರಸ್ಪರ ಬಿಚ್ಚಿಡುವ ಹೆದರಿಕೆಯಿಂದ ಬಿಜೆಪಿ ಬಾಯಿ ಬಂದ್ ಮಾಡಲು ಸಾಧ್ಯವಿಲ್ಲ ಎಂದು ತಿರುಗೇಟು ಕೊಟ್ಟರು.

Pralhad Joshi Reacted about MUDA Scandal and Maikal Kunha Report of Covid Scam

ಮುಖ್ಯಮಂತ್ರಿ ಸಿದ್ದರಾಮಯ್ಯ ಟಗರು ಇದ್ದಂತೆ ಎಂಬ ಸಚಿವ ಜಮೀರ್ ಅಹ್ಮದ್ ಹೇಳಿಕೆ ವಿಚಾರ, ಸಿಎಂ ಟಗರು, ಹುಲಿ ಇದ್ದ ಹಾಗೇ ಯಾರು ಏನು ಮಾಡಲು ಆಗಲ್ಲ ಎಂದಿದ್ದಾರೆ. ಹಾಗಾದಾರೆ ಸಿಎಂ ಅವರು ಮನೆಯಲ್ಲಿ ಸುಮ್ಮನೆ ಕುಳಿತು ಬಿಡಲಿ. ಅವರು ಸಿಂಹನೋ, ಟಗರೋ, ಹುಲಿಯೋ ಎಂದು ನಾವು ಯಾರು ಹೇಳಿಲ್ಲ. ನೀವೇ ಹೆಳುತ್ತಿದ್ದೀರಿ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಸಿಎಂ ರಾಜೀನಾಮೆ ಬಗ್ಗೆಯಷ್ಟೇ ಮಾತನಾಡಿದೆ

ಹಗರಣ, ಭ್ರಷ್ಟಾಚಾರ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ನಾವು ಆಗ್ರಹಿಸಿದ್ದಾರೆ. ಆದರೆ ಅವರು ಕಾನೂನು ಕದ ತಟ್ಟಿದ್ದಾರೆ. ನ್ಯಾಯಾಲಯ ಇನ್ನೂ ಏನು ಹೇಳಿಲ್ಲ. ಇದಕ್ಕೂ ಮುನ್ನವೇ ರಾಜ್ಯಪಾಲರಿಗೆ ಹೆದರಿಸುವುದು, ಧಮುಕಿ ಹಾಕುವುಕು ಮಾಡಲಾಯಿತು. ಇದು ಯಾವ ಪ್ರವೃತ್ತಿ? ನಾವು ಕೇಳಿದ ಅನೇಕ ಪ್ರಶ್ನೆಗಳಿಗೆ ಕಾಂಗ್ರೆಸ್ ನಾಯಕರು ಉತ್ತರ ಕೊಟ್ಟಿಲ್ಲ.

ತಮಗೆ ಅನುಕೂಲದ ಅನ್ನಿಸದ ಪ್ರಶ್ನೆಗಳಿಗೆ ಉತ್ತರಿಸಲು ಕಾಂಗ್ರೆಸ್ ಮನಸ್ಸು ಮಾಡಲ್ಲ. ನಮ್ಮ ಪ್ರಶ್ನೆಗಳಿಗೆ ಉತ್ತರ ಕೊಡದೇ ಆರೋಪ ಮಾಡಿಕೊಂಡು ಹೋಗುವುದು ಸಿದ್ದರಾಮಯ್ಯನವರ ಸ್ಟೈಲ್. 20217 ಮತ್ತು 2018ರಲ್ಲಿ ಎಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆ ಎಂಬ ಕಲ್ಪನೆ ಸಹ ಇರಲಿಲ್ಲ. ಎಲ್ಲಿ ಬಿಜೆಪಿಯ ಅವರು ಅಧಿಕಾರಕ್ಕೆ ಬರುತ್ತಾರೋ ಎಂಬ ಕಾರಣಕ್ಕೆ ಕುಮಾರಸ್ವಾಮಿಯವರನ್ನು ಇವರು ಮುಖ್ಯಮಂತ್ರಿ ಆಗಿ ಮಾಡಿದರು ಎಂದು ಕಾಂಗ್ರೆಸ್ ನಡೆ ಪ್ರಶ್ನಿಸಿದರು.

ಕಾಂಗ್ರೆಸ್ಸಿಗರು ವಿಷಯಾಂತರ ಮಾಡುತ್ತಾರೆ

ಸಿದ್ದರಾಮಯ್ಯ ಅವರಾಗಲಿ, ಡಿಕೆ ಶಿವಕುಮಾರ್ ಅವರಾಗಲಿ ಒಂದೇ ಒಂದು ಪ್ರಶ್ನೆಗೂ ಉತ್ತರ ಕೊಡುವುದಿಲ್ಲ. ಉತ್ತರಿಸಿದ ವಿಷಯಾಂತರ ಮಾಡುವ ಉದ್ದೇಶದಿಂದ ಏನೇನು ಹೇಳುತ್ತಿದ್ದಾರೆ. ಬೇಜಾಬ್ದಾರಿಯಿಂದ ಮಾತನಾಡುತ್ತಿದ್ದಾರೆ. ಇಂತವರ ವಿರುದ್ಧ ಬಿಜೆಪಿ 21ನೇ ಶತಮಾನದಲ್ಲಿದೊಡ್ಡ ಸಾಧನೆ ಮಾಡಲು ಮುಂದಾಗಿದೆ. ರಾಜ್ಯದಲ್ಲಿ ರಾಜಕೀಯ ಭ್ರಷ್ಟಾಚಾರವನ್ನು ಬೇರು ಸಮೇತವಾಗಿ ಕಿತ್ತು ಎಸೆಯಬೇಕಾಗಿದೆ ಎಂದರು.

ಮುಡಾ ಪ್ರಕರಣದಲ್ಲಿ ಹುರುಳಿಲ್ಲ ಎನ್ನುವವರು ನೀವು ಕೋರ್ಟ್‌ಗೆ ಏಕೆ ಹೋಗಬೇಕು. ಭಯದಿಂದ ಬಾಲ ಸುಟ್ಟ ಬೆಕ್ಕಿನಂತಾಗಿದ್ದು ಏಕೆ. ದಿನ ಬೆಳಗಾದರೆ ರಾಜ್ಯಪಾಲರನ್ನು ಭೇಟಿ ಮಾಡುವುದು ಏಕೆ? ಹೇಗಿದ್ದರು ಪ್ರಕರಣ ನ್ಯಾಯಾಲಯದಲ್ಲಿದೆ. ಕೋರ್ಟ್ ಏನು ತೀರ್ಪುಕೊಡುತ್ತದೋ ನೋಡೋಣ ಬಿಡಿ ಎಂದು ಕಾಂಗ್ರೆಸ್ಸಿಗರ ಕಾಲೆಳೆದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+