ಹುಬ್ಬಳ್ಳಿ-ಧಾರವಾಡದಲ್ಲಿ ಟ್ರಾಫಿಕ್ ನಿಯಂತ್ರಣಕ್ಕಾಗಿ 'ಬಸ್‌ದಿನ'

Written By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಜುಲೈ 15: ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಸಾರ್ವಜನಿಕ ಸಾರಿಗೆ ಬಳಕೆ ಕುರಿತು ಜಾಗೃತಿ ಮೂಡಿಸಲು ಇಲ್ಲಿನ ಎನ್‌ಡಬ್ಲೂಕೆಆರ್ ಟಿಸಿ(ಕರ್ನಾಟಕ ರಾಜ್ಯ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ) ಮುಂದಾಗಿದ್ದು, ಪ್ರತಿ ತಿಂಗಳು 20 ರಂದು 'ಬಸ್ ದಿನ' ಎಂದು ಆಚರಿಸಲು ನಿರ್ಧರಿಸಿದೆ.
ಈಗಾಗಲೇ ಬಿಎಂಟಿಸಿಯಲ್ಲಿ ಜಾರಿಯಲ್ಲಿರುವ ಈ ಆಚರಣೆಯನ್ನು ಎನ್‌ಡಬ್ಲೂ ಕೆಆರ್ ಟಿಸಿ ವ್ಯಾಪ್ತಿಯಲ್ಲಿ ಆಚರಿಸುವ ಮೂಲಕ ಸಾರ್ವಜನಿಕ ಸಾರಿಗೆ ಬಳಸುವಂತೆ ಪ್ರೇರೆಪಿಸುವ ಉದ್ದೇಶ ಹೊಂದಲಾಗಿದ್ದು, ಈ ಆಚರಣೆಯನ್ನು ಯಶಸ್ವಿಗೊಳಿಸು ಸಂಸ್ಥೆಯ ಚೇರಮನ್ ಸದಾನಂದ ಡಂಗನವರ ಶ್ರಮ ವಹಿಸುತ್ತಿದ್ದಾರೆ.

ನವೆಂಬರ್‌ಗೆ ಹುಬ್ಬಳ್ಳಿ- ಚಿತ್ರದುರ್ಗ ಷಟ್ಪಥ ರಸ್ತೆ ಕಾಮಗಾರಿ ಆರಂಭ

ಏನಿದು ಬಸ್ ದಿನ?
ಅವಳಿ ನಗರಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದೆ. ವಾಹನಗಳ ಹೆಚ್ಚಳವೇ ಇದಕ್ಕೆ ಕಾರಣವಾಗಿದ್ದು, ಇದನ್ನು ತಡೆಯಲು ಜನರು ಸಾರ್ವಜನಿಕ ಸಾರಿಗೆ ಮೊರೆ ಹೋಗುವುದು ಇಂದಿನ ಪರ್ಯಾಯ. ಸಾರ್ವಜನಿಕರಲ್ಲಿ ಈ ಬಗ್ಗೆ ಅರಿವು ಮೂಡಿಸಲು ಹಾಗೂ ತಿಂಗಳಿಗೊಮ್ಮೆಯಾದರೂ ಸಾರ್ವಜನಿಕ ಸಾರಿಗೆಯಾದ ಬಸ್‌ನಲ್ಲಿ ಪ್ರಯಾಣಿಸುವುದನ್ನು ಪ್ರೇರೆಪಿಸುವುದು ಈ ದಿನದ ಉದ್ದೇಶದ.
ದಿನ ನಿತ್ಯ ತಮ್ಮ ಕೆಲಸ, ಕಚೇರಿಗಳಿಗಾಗಿ ಉಪಯೋಗಿಸುವ ಸ್ವಂತ ಕಾರು, ಬೈಕ್ ಗಳನ್ನು ಉಪಯೋಗಿಸುವುದನ್ನು ಬಿಟ್ಟು ಸಾರ್ವಜನಿಕ ಸಾರಿಗೆಯಾದ ಬಸ್‌ಗಳನ್ನು ಬಳಕೆ ಮಾಡಬೇಕು ಎಂಬುದು ಇದರ ಉದ್ದೇಶ.

NWKRTC has decided to start 'Bus Day' in Hubballi and Dharwad twin city

ಭರದ ಪ್ರಚಾರ
ಬಸ್ ದಿನವನ್ನು ಯಶಸ್ವಿಗೊಳಿಸಲು ಚೇರಮನ್ ಸದಾನಂದ ಡಂಗನವರ ಕರಪತ್ರಗಳನ್ನು ಹಿಡಿದು ಬೀದಿ ಬೀದಿಗಳಲ್ಲಿ ಅಡ್ಡಾಡುತ್ತಿದ್ದಾರೆ. ಕಚೇರಿಗಳಿಗೆ ತೆರಳಿ ಈ ಬಗ್ಗೆ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಈಗಾಗಲೇ ಸಾಹಿತಿಗಳಾದ ಚನ್ನವೀರ ಕಣವಿ, ಗಿರಡ್ಡಿ ಗೋವಿಂದರಾಜ, ಚೇಂಬರ್ ಆಪ್ ಕಾಮರ್ಸ್ ಪದಾಧಿಕಾರಿಗಳು, ಜಿಲ್ಲಾಧಿಕಾರಿ, ಎಸ್ಪಿ, ಪೊಲೀಸ್ ಕಮಿಷನರ್, ಸರ್ಕಾರಿ ನೌಕರರು, ವ್ಯಾಪಾರಸ್ಥರನ್ನು ಭೇಟಿ ಮಾಡಿ ಬಸ್ ದಿನವನ್ನು ಯಶಸ್ವಿಗೊಳಿಸಲು ಮನವಿ ಮಾಡುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
To encourage public transport and to prevent traffic in Hubballi and Dharwad twin cities, NWKRTC has decided to start 'Bus Day' on 20th of every month. BMTC in Bengaluru has already started 'Bus Day' concept in the capital of the state.
Please Wait while comments are loading...