NWKRTC: ಕರ್ತವ್ಯನಿರತ ಬಸ್ ಕಂಡಕ್ಟರ್ ಮೇಲೆ ಮೂವರಿಂದ ಹಲ್ಲೆ: ಪ್ರಕರಣ ದಾಖಲು, ನಡೆದಿದ್ದೇನು?
ಹುಬ್ಬಳ್ಳಿ, ಏಪ್ರಿಲ್ 27: ಕರ್ತವ್ಯ ನಿರತ ಸಾರಿಗೆ ಬಸ್ ನಿರ್ವಾಹಕನ ಮೇಲೆ ಹಲ್ಲೆ ಮಾಡಿ ಸಾರ್ವಜನಿಕ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಶುಕ್ರವಾರ ನವಲಗುಂದ ತಾಲೂಕಿನ ಯಮನೂರಿನಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ವಿರುದ್ಧ ನವಲಗುಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ಕಲಘಟಗಿ ಘಟಕಕ್ಕೆ ಸೇರಿದ ಕೆಎ 63 ಎಫ್ 0190 ಸಂಖ್ಯೆಯ ಬಸ್ಸು ಬಾಗಲಕೋಟೆಯಿಂದ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿತ್ತು. ಆದರೆ ಬಸ್ಸಿನಲ್ಲಿ 84 ಪ್ರಯಾಣಿಕರಿದ್ದರು. ಯಮನೂರು ಬಸ್ ನಿಲ್ದಾಣದಲ್ಲಿ ನಿಂತಾಗ 10 ಪ್ರಯಾಣಿಕರು ಇಳಿದಿದ್ದಾರೆ.

ಬಸ್ಸಲ್ಲಿ ಜಾಗ ಇಲ್ಲದ್ದಕ್ಕೆ ಕಂಡಕ್ಟರ್ ಮನವಿ
15 ರಿಂದ 20 ಜನರು ಹತ್ತಲು ನಿಂತಿದ್ದರು. ಅವರಲ್ಲಿ ಕೆಲವರು ಹತ್ತಿದ್ದು, ಇನ್ನುಳಿದವರಿಗೆ ಬಸ್ಸಿನಲ್ಲಿ ಜಾಗ ಇಲ್ಲದ್ದರಿಂದ ನಿರ್ವಾಹಕರಾದ ಸಂಗಪ್ಪ ಚಿರಚನಕಲ್ಲ ರವರು "ಬಸ್ಸಿನಲ್ಲಿ ಜಾಗ ಇಲ್ಲ, ಇನ್ನೊಂದು ಬಸ್ಸಿನಲ್ಲಿ ಬನ್ನಿ" ಎಂದು ಹೇಳಿದ್ದಾರೆ.
ಆಗ ಅವರಲ್ಲಿದ್ದ ಮೂರು ಜನರು ನಿರ್ವಾಹಕರಿಗೆ "ಬಸ್ಸು ಏನು ನಿಮ್ಮ ಅಪ್ಪಂದಾ? ಅವಾಚ್ಯವಾಗಿ ನಿರ್ವಾಹಕನನ್ನು ನಿಂದಿಸಿದ್ದಾರೆ. ಆಗ ನಿರ್ವಾಹಕರು ಸರಿಯಾಗಿ ಮಾತನಾಡಿ ಎಂದು ತಿಳಿ ಹೇಳಿದ್ದಾರೆ. ಆದರೆ ಇಷ್ಟಕ್ಕೆ ಸುಮ್ಮನಾಗದ ಆ ಮೂವರು ಕೂಡಿಕೊಂಡು ನಿರ್ವಾಹಕರಿಗೆ 'ಬೋ....ಮಗನೆ' ಎಂದು ಹಲವು ಇತ್ಯಾದಿ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ.

ಕಂಡಕ್ಟರ್ ಮೇಲೆ ಮನಬಂದಂತೆ ಹಲ್ಲೆ
ಅಲ್ಲದೇ ಕರ್ತವ್ಯನಿರತ ನಿರ್ವಾಹಕನ ಸಮವಸ್ತ್ರ ಹಿಡಿದು ಎಳೆದಾಡಿ, ಬಸ್ಸಿನಿಂದ ಕೆಳಗಿಳಿಸಿ ಹೊಟ್ಟೆ, ತಲೆ, ಕೈ ಗಳಿಗೆ ಹೊಡೆದು ಹಲ್ಲೆ ಮಾಡಿದ್ದಾರೆ. ಜೀವ ಬೆದರಿಕೆ ಹಾಕಿದ ಘಟನೆ ಜರುಗಿದೆ.
ನಿರ್ವಾಹಕರ ಬಳಿ ಇದ್ದ ವೇಬಿಲ್, ಫೋನ್ ಪೇ ಕ್ಯೂ. ಆರ್. ಸ್ಕ್ಯಾನರ್ ಹಾಗೂ ಟಿಕೆಟ್ ಆದಾಯದ ಮೊತ್ತ ರೂ. 11,656 ನಗದು ಹಣವನ್ನು ತೆಗೆದು ಬಿಸಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ. ಸಾರ್ವಜನಿಕ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದಾರೆ. ಹಲ್ಲೆ ತಡೆಯಲು ಹೋದ ಇತರೆ ಪ್ರಯಾಣಿಕರಿಗೂ ಸಹ ಧಮ್ಕಿ ಹಾಕಿ ಹೆದರಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆಸ್ಪತ್ರೆಗೆ ಭೇಟಿ ನೀಡಿ ಧೈರ್ಯ ತುಂಬಿದ ಅಧಿಕಾರಿಗಳು
ಹಲ್ಲೆಯಿಂದ ಗಾಯಗೊಂಡಿರುವ ನಿರ್ವಾಹಕರಾದ ಸಂಗಪ್ಪ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ, ಸಹಾಯಕ ಕಾರ್ಮಿಕ ಕಲ್ಯಾಣ ಅಧಿಕಾರಿ ಆರ್.ಎಂ. ರಾಜೇಂದ್ರ ಹಾಗೂ ಸಹಾಯಕ ಸಂಚಾರ ವ್ಯವಸ್ಥಾಪಕ(ಪ್ರ) ಐ.ಜಿ. ಮಾಗಾಮಿ ರವರು ಆಸ್ಪತ್ರೆಗೆ ಭೇಟಿ ನೀಡಿ ನಿರ್ವಾಹಕರಿಗೆ ಧೈರ್ಯ ತುಂಬಿದ್ದಾರೆ.
ಇಬ್ಬರು ಮಹಿಳೆ ಸೇರಿ ಮೂವರ ವಿರುದ್ಧ ದೂರು
ಘಟನೆಗೆ ಸಂಬಂಧಿಸಿದಂತೆ, ಹಲ್ಲೆ ಮಾಡಿದ ಶಿವಾನಂದ ಪಡೆಸೂರ ಹಾಗೂ ಇನ್ನಿಬ್ಬರು ಮಹಿಳೆಯರು ಸೇರಿದಂತೆ ಮೂವರ ಮೇಲೆ ನವಲಗುಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಪ್ರಸ್ತುತ ಪಿಕ್ ಸೀಸನ್ ಅವಧಿಯಾಗಿದ್ದು ಬಸ್ಸಿನಲ್ಲಿ ಜನಸಂದಣಿ ಹೆಚ್ಚಾಗಿರುವುದರಿಂದ ಸಾರ್ವಜನಿಕರು ಸಾರಿಗೆ ಸಿಬ್ಬಂದಿಯೊಂದಿಗೆ ಸಹಕರಿಸುವಂತೆ ವಿಭಾಗೀಯ ನಿಯಂತ್ರಣಾಧಿಕಾರಿ ಮನವಿ ಮಾಡಿದ್ದಾರೆ. ಸಾರ್ವಜನಿಕರು ಇಂತಹ ಘಟನೆಗಳು ಆಗದಂತೆ ಜವಾಬ್ದಾರಿ ಮೆರೆಯಬೇಕು ಎಂದು ಕೋರಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ












Click it and Unblock the Notifications