ಹು-ಧಾ ಪೊಲೀಸರ ಪಾಡು; ರಜವೂ ಇಲ್ಲ, ಭತ್ಯೆಯೂ ಕೊಡಲ್ಲ

Written By: Basavaraj
Subscribe to Oneindia Kannada

ಹುಬ್ಬಳ್ಳಿ:'ದೇವರು ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ' ಎಂಬ ಗಾದೆ ಮಾತನ್ನು ಕೇಳಿರಬಹುದು. ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ನ ವಿಷಯದಲ್ಲಿ ಇದು ಅಕ್ಷರಶಃ ನಿಜವಾಗಿದೆ. ಹೌದು, ಪೊಲೀಸರ ಪ್ರತಿಭಟನೆಗೆ ಮಣಿದ ರಾಜ್ಯ ಸರಕಾರ ಕೆಲವೊಂದು ಬೇಡಿಕೆಗಳನ್ನು ಈಡೇರಿಸಿತು.

ಲಂಚ ಆರೋಪ ಸುಳ್ಳು, ತನಿಖೆಗೆ ಸಿದ್ಧ-ರೂಪಾಗೆ ಸತ್ಯನಾರಾಯಣ ತಿರುಗೇಟು

ವಾರದ ರಜೆ ಹಾಗೂ ವಿಶೇಷ ಭತ್ಯೆ ಸೇರಿದಂತೆ ಹಲವು ಬೇಡಿಕೆಗಳಿಗೆ ಸ್ಪಂದಿಸಿದ ಗೃಹ ಇಲಾಖೆ ಆದೇಶ ಹೊರಡಿಸಿದೆ.

No weekly off, no allowances to Hubballi- Dharwad constables yet

ಗೃಹ ಇಲಾಖೆ ಇಷ್ಟೆಲ್ಲಾ ನೀಡಿದರೂ ಇವುಗಳನ್ನು ಅನುಭವಿಸುವ ಭಾಗ್ಯ ಮಾತ್ರ ಹುಬ್ಬಳ್ಳಿ-ಧಾರವಾಡ ಕಮಿಷನರೇಟ್ ನಲ್ಲಿ ಕೆಲಸ ಮಾಡುವ ಪೊಲೀಸರಿಗೆ ಇಲ್ಲದಾಗಿದೆ. ಜೀವನದ ಬಹುತೇಕ ಸಮಯವನ್ನು ಕರ್ತವ್ಯದಲ್ಲಿಯೇ ಕಳೆಯುವ ಪೊಲೀಸರಿಗೆ ಸರಕಾರ ನೀಡಿದ ಕನಿಷ್ಠ ಸೌಲಭ್ಯಗಳನ್ನು ಒದಗಿಸುವ ಸೌಜನ್ಯವೂ ಇಲ್ಲಿ ಇಲ್ಲ.

ಗದಗ, ಹಾವೇರಿ, ಕಾರವಾರ ಸೇರಿ ಬಹುತೇಕ ಜಿಲ್ಲೆಗಳಲ್ಲಿ ಪೊಲೀಸ್ ಕಾನ್‌ ಸ್ಟೇಬಲ್ ಗಳಿಗೆ ವಾರದ ರಜಾ ಕೊಡಲಾಗುತ್ತಿದೆ. ಆದರೆ ಈ ವ್ಯವಸ್ಥೆ ಹುಬ್ಬಳ್ಳಿ-ಧಾರವಾಡದಲ್ಲಿ ಕೆಲಸ ಮಾಡುವ ಪೊಲೀಸರಿಗೆ ಇಲ್ಲ. ವಾರದ ರಜಾ ಕೊಡದಿದ್ದರೆ ಹೋಗಲಿ, ಇದಕ್ಕೆ ಪರ್ಯಾಯವಾಗಿ ಭತ್ಯೆಯನಾದರೂ ಕೊಡಬೇಕಲ್ಲವೆ ಎಂಬುದು ಸಿಬ್ಬಂದಿ ಪ್ರಶ್ನೆ.

ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈರ 200 ಕಿ.ಮೀ ಸೈಕಲ್ ಯಾತ್ರೆ

ರಜಾ ಅವಧಿಯಲ್ಲಿ ಕೆಲಸ ಮಾಡಿದರೆ ಇನ್ನೂರು ರುಪಾಯಿ ಭತ್ಯೆ ಕೊಡಬೇಕು. ಆದರೆ ಎಂಟು ತಿಂಗಳಿಂದ ಹುಬ್ಬಳ್ಳಿ-ಧಾರವಾಡಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಲಾಖೆಯ ಸಿಬ್ಬಂದಿಗೆ ಭತ್ಯೆ ಭಾಗ್ಯ ಕೂಡ ಇಲ್ಲ.

ಈ ಕುರಿತು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಪಾಂಡುರಂಗ ರಾಣೆ ಅವರನ್ನು ಪ್ರಶ್ನಿಸಿದರೆ, ಇಲಾಖೆಯು 24X7 ಕೆಲಸ ಮಾಡಬೇಕು. ಅಲ್ಲದೆ ಅವಳಿ ನಗರಗಳು ಅತ್ಯಂತ ಸೂಕ್ಷ್ಮ ಪ್ರದೇಶಗಳು ಆದ್ದರಿಂದ ಹೆಚ್ಚಿನ ನಿಗಾ ಇಡಬೇಕಾಗುತ್ತದೆ. ಕಮಿಷನರೇಟ್ ಗೆ ಶೀಘ್ರದಲ್ಲಿಯೇ ನಾನೂರು ಸಿಬ್ಬಂದಿ ಹೊಸದಾಗಿ ಕರ್ತವ್ಯಕ್ಕೆ ಹಾಜರಾಗಲಿದ್ದು, ಆಗ ಬೇಡಿಕೆ ಈಡೇರಿಸಲಾಗುವುದು ಎನ್ನುತ್ತಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Police constables in Hubballi-Dharwad police commissionerate yet to get weekly off and special allowances. The state government and home department has ordered to give them one day live in a week, but commissionerate didn’t implement this facility to them.
Please Wait while comments are loading...