BJP State President: ರಾಜ್ಯಾಧ್ಯಕ್ಷ ಅಭ್ಯರ್ಥಿ ಘೋಷಣೆ ಅಪ್ಡೇಟ್ ಕೊಟ್ಟ ಮಾಜಿ ಸಚಿವ
ಬೆಂಗಳೂರು, ಫೆಬ್ರವರಿ 01: ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಹುದ್ದೆಗೆ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಒಂದಷ್ಟು ಭಿನ್ನಾಭಿಪ್ರಾಯಗಳು, ಕಸರತ್ತು ಇರುವಂತೆ ಕರ್ನಾಟಕ ಬಿಜೆಪಿಯಲ್ಲೂ ಅಂತದ್ದೇ ವಾತಾವರಣ ಇದೆ. ಬಿಜೆಪಿಯಲ್ಲಿ ಭಿನ್ನಮತ, ಗದ್ದಲ ಇರುವ ನಿಜ ಎಂದು ಮಾಜಿ ಕೈಗಾರಿಕೆ ಸಚಿವ ಮತ್ತು ಪಕ್ಷದ ನಾಯಕ ಮುರಗೇಶ್ ನಿರಾಣಿ ತಿಳಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಚುನಾವಣೆ ಅಭ್ಯರ್ಥಿ ಕುರಿತು ಅವರು ಮಾಹಿತಿ ನೀಡಿದ್ದಾರೆ.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿ, ಬಿಜೆಪಿಯಲ್ಲಿ ಗದ್ದಲ ಇರೋದು ಸತ್ಯ. ಈ ಭಿನ್ನಮತಕ್ಕೆ ಶೀಘ್ರವೇ ತೆರೆ ಬೀಳುತ್ತೆದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಎರಡೂ ಬಣಗಳ ನಡುವೆ ನಡೆದಿರೋ ಭಿನ್ನಮತ ಹೈಕಮಾಂಡ್ ಗಮನಕ್ಕೆ ತರಲಾಗಿದೆ. ಹೈಕಮಾಂಡ್ ಎಲ್ಲವನ್ನು ಗಮನಿಸುತ್ತಿದೆ. ದೊಡ್ಡ ಪಕ್ಷ ಆಗಿರುವ ಕಾರಣ ಬಿಜೆಪಿಯಲ್ಲಿ ಒಂದಷ್ಟು ಭಿನ್ನಾಭಿಪ್ರಾಯ ಸಹಜ ಎಂದು ಅವರು ಹೇಳಿದರು.

ವರಿಷ್ಠರು ಒಬ್ಬೊಬ್ಬರನ್ನು ಕರೆದು ಮಾತನಾಡಿದ್ದಾರೆ. ಎಲ್ಲ ಮುಖಂಡರನ್ನು ಕರೆದು ಮಾತನಾಡಿಸಲಾಗುತ್ತಿದೆ. ಇನ್ನೊಂದು ವಾರದಲ್ಲಿ ಎಲ್ಲ ಭಿನ್ನನಾಭಿಪ್ರಾಯಕ್ಕೂ ತೆರೆ ಬೀಳುತ್ತದೆ. ಬಿಜೆಪಿ ರಾಜ್ಯಾಧ್ಯಕ್ಷರ ಅಭ್ಯರ್ಥಿಯನ್ನು ಹೈಕಮಾಂಡ್ ನಿರ್ಧರಿಸುತ್ತದೆ.
ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲ ಬದ್ಧ ಎಂದು ಮುರಗೇಶ್ ನಿರಾಣಿಯವರು ತಿಳಿಸಿದರು.
ಇನ್ನು ಇಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಿದ್ದಾರೆ. ಈ ಬಜೆಟ್ ಆಶಾದಾಯಕವಾಗಿದೆ ಎಂದರು.
ಚುನಾವಣೆ ಮೂಲಕ ರಾಜ್ಯಾಧ್ಯಕ್ಷ ಆಯ್ಕೆ
ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಆಯ್ಕೆಯನ್ನು ಚುನಾವಣೆ ಮೂಲಕ ನಡೆಸಲಾಗುವುದು ಎಂದು ಹೈಕಮಾಂಡ್ ಹೇಳುತ್ತಿದ್ದಂತೆ ಬಿಜೆಪಿಯಲ್ಲಿನ ಬಣಗಳು ಮುನ್ನೆಲೆಗೆ ಬಂದಿವೆ. ಬಿವೈ ವಿಜಯೇಂದ್ರ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣದ ಸದಸ್ಯರು ಬಹಿರಂಗವಾಗಿ ಮಾತನಾಡಿದ್ದಾರೆ.
ಯತ್ನಾಳ್ ಅವರ ಬಣದಿಂದಲೂ ಒಬ್ಬ ಅಭ್ಯರ್ಥಿ ರಾಜ್ಯಾಧ್ಯಕ್ಷ ಚುನಾವಣೆ ಎದುರಿಸಲಿದ್ದಾರೆ. ಇಷ್ಟೆಲ್ಲ ಬೆಳವಣಿಗೆ ನಡೆದರೂ ಸಹಿತ ಇನ್ನೂ ರಾಜ್ಯಾಧ್ಯಕ್ಷ ಸ್ಥಾನದಲ್ಲಿಯೇ ಇರುವ ಬಿ.ವೈ.ವಿಜಯೇಂದ್ರ ಅವರ ನಡೆ ಬಗ್ಗೆಯು ಕೆಲವು ಮಾತನಾಡುತ್ತಾರೆ. ಹಠಮಾರಿ ಎಂದೆಲ್ಲ ಹೇಳುತ್ತಿದ್ದಾರೆ. ಇತ್ತ ಯತ್ನಾಳ್ ಅವರು ವಿಜಯೇಂದ್ರ ಅವರ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇದ್ದು, ಶೀಘ್ರವೇ ಬಿಜೆಪಿ ಬಣ ರಾಜಕೀಯ, ಭಿನ್ನಾಭಿಪ್ರಾಯಕ್ಕೆ ತೆರೆ ಬೀಳುವ ಸಾಧ್ಯತೆ ಇದೆ.












Click it and Unblock the Notifications