ಸಿದ್ದರಾಮಯ್ಯಗೆ ಮುಖ್ಯಮಂತ್ರಿಯಾಗಿ ಇದು ಕೊನೆಯ ದಸರಾ: ಮಹೇಶ್ ಟೆಂಗಿನಕಾಯಿ
ಹುಬ್ಬಳ್ಳಿ, ಅಕ್ಟೋಬರ್ 02: ಮುಡಾ ಹಗರಣ ಪ್ರಕರಣದಲ್ಲಿ ಸಿಎಂ ವಿರುದ್ಧ ತನಿಖೆಗೆ ಆದೇಶಿಸುತ್ತಿದ್ದಂತೆ ಒಂದಷ್ಟು ಬೆಳವಣಿಗೆಗಳು, ರಾಜಕೀಯ ಆರೋಪ, ಪ್ರತ್ಯಾರೋಪಗಳು ನಡೆದಿವೆ. ಈ ಕುರಿತು ಮಾತನಾಡಿರುವ ಬಿಜೆಪಿ ಶಾಸಕ ಮಹೇಶ್ ಟೆಂಗಿನ ಕಾಯಿ ಅವರು, ಮುಖ್ಯಮಂತ್ರಿಗಳು ಬುಡಕ್ಕೆ ಬರುತ್ತಿದ್ದಂತೆ ಮುಡಾ 14 ಸೈಟ್ ವಾಪಾಸ್ ಕೊಡಲಾಗಿದೆ ಎಂದು ಅವರು ದೂರಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಒಂದು ಕಡೆ ತನಿಖೆ ಆರಂಭವಾಗುತ್ತಿದೆ. ಇನ್ನೊಂದು ಕಡೆ ಪ್ರಕರಣ ಏಕಾಏಕಿ ಮುಖ್ಯಮಂತ್ರಿಗಳ ಬುಡಕ್ಕೆ ಬರುತ್ತದೆ ಎಂದು ಗೊತ್ತಾದಾಗ ಸೈಟ್ ವಾಪಸ್ ಕೊಡಲಾಗಿದೆ. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿಯವರು ಮುಡಾ ಆಯುಕ್ತ ನಿವೇಶನ ಮರಳಿ ನೀಡಿದ್ದರ ಕುರಿತು ಅವರು ಪ್ರತಿಕ್ರಿಯಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಮುಡಾ ಆಯುಕ್ತರಿಗೆ ಪತ್ರ ಬರೆದಿದ್ದಾರೆ. 14 ಸೈಟ್‌ಗಳನ್ನು ಹಿಂತಿರುಗಿಸಿದ್ದಾರೆ. ತಕ್ಷಣ ಮುಖ್ಯಮಂತ್ರಿಗಳ ಪುತ್ರ ವಾಪಾಸ್ ಮಾಡಿದ ಸೈಟ್ ಪತ್ರ ಸಹ ಅಧಿಕಾರಿಗಳಿಗೆ ಕೊಟ್ಟಿದ್ದಾರೆ. ಸರ್ಕಾರ ಕೆಲವೊಂದು ವಿಷಯಗಳಲ್ಲಿ ಎಷ್ಟು ಮುಂದಿರುತ್ತದೆ ಎಂದು ಇದರಿಂದ ತಿಳಿಯುತ್ತದೆ ಎಂದು ಕಿಡಿ ಕಾರಿದರು.
ಮುಖ್ಯಮಂತ್ರಿಯಾಗಿ ಸಿಎಂ ಸಿದ್ದರಾಮಯ್ಯ ಕೊನೆ ದಸರಾ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದಾರೆ. ಹೀಗಾಗಿ ಈ ಬಾರಿ ಮೈಸೂರು ದಸರಾ ಬಹುಶಃ ಅವರ ಕೊನೆಯ ದಸರಾ ಆಗುವುದರಲ್ಲಿ ಯಾವುದೇ ಸಂದೇಹ ಇಲ್ಲ. ಮುಖ್ಯಮಂತ್ರಿ ಆಗಿ ಅವರು ಕೊನೆ ದಸರಾ ಆಚರಣೆ ಮಾಡುತ್ತಾರೆ ಎಂದು ಕುಟುಕಿದರು.
ಇಡಿ ವಿಚಾರಣೆಯಿಂದ ಸತ್ಯ ಹೊರಬರಲಿ
ಸೈಟ್ ರದ್ದು ಮಾಡಿ ಲೇಟರ್ ಕೊಟ್ಟ ತಕ್ಷಣವೇ ಸೈಟ್ ರದ್ದು ಮಾಡಿ ವಾಪಾಸ್ ತೆಗೆದುಕೊಳ್ಳಲಾಗಿದೆ. ಸರ್ಕಾರದ ಪಾತ್ರ ಕುರಿತು ಅವರು ಶಂಕೆ ಹೊರ ಹಾಕಿದರು. ಪ್ರಕರಣ ಸಂಬಂಧ ಇಡಿ ವಿಚಾರಣೆಗೆ ಮುಂದಾಗಿದ್ದು, ಸತ್ಯಾಸತ್ಯತೆ ಏನೆಂಬುದು ತಿಳಿಯಬೇಕಿದೆ.

ಸಿಎಂ ತಮ್ಮ ಮೇಲೆ ಮುಡಾ ಆರೋಪ ಬಂದ ಕೂಡಲೇ ಸೈಟ್ ವಾಪಾಸ್ ಕೊಡಬೇಕಾಗಿತ್ತು. ಇಷ್ಟು ತಡವಾಗಿ ವಾಪಾಸ್ ಕೊಟ್ಟಿದ್ದು ಯಾಕೆ? ಎಂದು ಅವರು ಖಂಡಿಸಿದರು. ಇನ್ನು ಇಡಿ ತನಿಖೆ ಸಂಪೂರ್ಣ ಸಹಕಾರ ಕೊಡಬೇಕು. ಈಗಲಾದರೂ ಮುಖ್ಯಮಂತ್ರಿಗಳು ರಾಜೀನಾಮೆ ಕೊಟ್ಟು ತನಿಖೆಗೆ ಸಹಕರಿಸಬೇಕು. ನೀವು ಅಧಿಕಾರದಲ್ಲಿದ್ದರೆ ಪಾರದರ್ಶಕ ತನಿಖೆ ಅಸಾಧ್ಯ ಎಂದರು.
ಸಿಎಂ ಪತ್ನಿ ಅವರ ಬಗ್ಗೆ ಮಾತನಾಡಲ್ಲ
ಸಮಾಜವಾದಿ ಹಿನ್ನೆಲೆಯಿಂದ ಬಂದವರು, ಯಾವುದೇ ಭ್ರಷ್ಟಾಚಾರ ಮಾಡಿಲ್ಲ ಎನ್ನುವವರು ತಮ್ಮ ಕೈಕೆಳಗಿನ ಅಧಿಕಾರಿಗಳ ಬದಲಾಗಿ ಇಡಿ, ಲೋಕಾಯುಕ್ತ ಪೊಲೀಸರ ತನಿಖೆ ಎದುಸಬೇಕಾಗಿತ್ತದೆ. ನನಗಂತೂ ಸೈಟ್ ಮರಳಿ ನೀಡಿರುವುದು ಅಶ್ಚರ್ಯವೇ ಸರಿ. ಆದರೆ ಒಂದಂತೂ ಸತ್ಯ ನಾನು ಸೈಟ್ ವಾಪಾಸ್ ನೀಡಲು ಮುಡಾ ಆಯುಕ್ತರಿಗೆ ಪತ್ರ ಬರೆದ ಸಿಎಂ ಪತ್ನಿ ಪಾರ್ವತಿಯವರ ಬಗ್ಗೆ ಮಾತನಾಡಲ್ಲ ಎಂದು ತಿಳಿಸಿದರು.
ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ಎಂದೂ ಹೊರಗೆ ಬಂದಿಲ್ಲ. ಸಾರ್ವಜನಿಕ, ರಾಜಕಾರಣ ಜೀವನದಲ್ಲಿ ಕಾಣಸಿಕೊಂಡವರಲ್ಲ. ಅವರ ಬಗ್ಗೆ ಯಾವುದೇ ಮಾತನಾಡಲಲ್. ಮಹಾನ್ ತಾಯಿ ಗೃಹಸ್ಥರಾಗಿ ತಮ್ಮ ಕೆಲಸ ಮಾಡಿದ್ದಾರೆ ಎಂದರು.
ಮುಡಾ ಸೈಟ್ ವಾಪಾಸ್ ಕೊಟ್ಟ ತಕ್ಷಣ ಅದನ್ನು ಮರಳಿ ಪಡೆದ ಬಗ್ಗೆ ಮುಡಾ ಅಧಿಕಾರಿಗಳು ತ್ವರಿತವಾಗಿ ಖಚಿತಪಡಿಸಿದ್ದಕ್ಕೆ ಶಾಸಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಸೈಟ್ ಕೊಡುವುದು ತೆಗೆದುಕೊಳ್ಳುವುದಕ್ಕೆ ಎಷ್ಟು ಸಮಯ ಬೇಕು? ಆದರೆ ಈ ವಿಷಯದಲ್ಲಿ ಮಡಾ ಆಯುಕ್ತರು ಸೈಟ್ ಪಡೆಯುತ್ತಿದ್ದಂತೆ. ನಿವೇಶನ ಮರಳಿ ಕೊಡಲಾಗಿದೆ ಎಂದು ತಿಳಿಸಿದ್ದಾರೆ. ಅದೇಷ್ಟು ಮುಂದುವರಿದಿದ್ದಾರೆ ಅಧಿಕಾರಿಗಳು ಎಂದು ಲೇವಡಿ ಮಾಡಿದರು.












Click it and Unblock the Notifications