ಧಾರವಾಡದಾದ್ಯಂತ 265 ಅಪ್ರಾಪ್ತ ವಯಸ್ಕ ಗರ್ಭಿಣಿಯರು!

Written By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಧಾರವಾಡ, ಜುಲೈ 15: ಸಾಮಾನ್ಯವಾಗಿ ಹೆಣ್ಣಿಗೆ 18 ವರ್ಷ ತುಂಬುವುದರೊಳಗೆ ಮದುವೆಯಾಗಿರುವ ಉದಾಹರಣೆಗಳನ್ನು ಕೇಳಿರಬಹುದು. ಆದರೆ, 18 ವರ್ಷದ ಒಳಗೆ ತಾಯಿಯಾಗುವುದನ್ನ ಎಲ್ಲಾದರೂ ಕೇಳಿದ್ದೀರಾ? ಹೌದು, ಧಾರವಾಡ ಜಿಲ್ಲೆಯಾದ್ಯಂತ 18 ವರ್ಷದೊಳಗೆ ಬರೊಬ್ಬರಿ 265 ಅಪ್ರಾಪ್ತ ಹೆಣ್ಣುಮಕ್ಕಳು ಸರ್ಕಾರ ಜಾರಿ ಮಾಡಿರುವ ಕಠಿಣ ಕಾನೂನುಗಳ ನಡುವೆಯೂ ಗರ್ಭಿಣಿಯಾಗಿರುವ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಅದರಲ್ಲೂ ಮುಖ್ಯವಾಗಿ ಧಾರವಾಡ ತಾಲೂಕೊಂದರಲ್ಲಿಯೇ 166 ಹೆಣ್ಣುಮಕ್ಕಳು ಸರ್ಕಾರ ನಿಗದಿಪಡಿಸಿದ ವಯೋಮಾನಕ್ಕಿಂತ ಮೊದಲೇ ಗರ್ಭಿಣಿಯರಾಗುವ ಮೂಲಕ ಸರ್ಕಾರದ ಕಾನೂನುಗಳನ್ನೆ ಮೊದಲಿಸುವಂತೆ ಮಾಡಿದ್ದಾರೆ. 2015-16ರಲ್ಲಿ ಈ ಸಂಖ್ಯೆ 185 ಇದ್ದು, ಪ್ರಸಕ್ತ ವರ್ಷ ಮತ್ತಷ್ಟು ಹೆಚ್ಚಿದೆ.

ಹು-ಧಾ ಪೊಲೀಸರ ಪಾಡು; ರಜವೂ ಇಲ್ಲ, ಭತ್ಯೆಯೂ ಕೊಡಲ್ಲ

ಗರ್ಭಿಣಿಯ ವಯಸ್ಸು 18 ಕ್ಕಿಂತ ಕಡಿಮೆ ಇದ್ದರೆ ಮದುವೆ ಮಾಡಿದ ಕುಟುಂಬ ಸದಸ್ಯರ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆ ಅಡಿ ಹಾಗೂ ಪತಿಯ ವಿರುದ್ಧ ಪೋಕ್ಸೊ(ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ತಡೆ) ಕಾಯ್ದೆ ಅಡಿ ಪ್ರಕರಣ ದಾಖಲಿಸುವುದು ಸರ್ಕಾರದ ಕಾನೂನು. ಇಷ್ಟೊಂದು ಕಠಿಣ ಕಾನೂನುಗಳ ಮಧ್ಯೆಯೂ ಬಾಲ್ಯ ವಿವಾಹ ಹಾಗೂ 18 ವರ್ಷದೊಳಗೆ ಗರ್ಭಿಣಿಯರಾಗುವುದು ಅದರಲ್ಲಿ ಜಿಲ್ಲೆಯೊಂದರಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಹೆಚ್ಚಿಸಿರುವುದು ಆತಂಕಕ್ಕೆ ಕಾರಣವಾಗಿದೆ.

More than 265 Minors became pregnant in Dharwad district

ಈ ಮಧ್ಯೆ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ವಿವಿಧ ಇಲಾಖೆಗಳ 30 ಕ್ಕೂ ಹೆಚ್ಚು ಇಲಾಖೆಗಳ ಅಧಿಕಾರಿಗಳಿಗೆ ಬಾಲ್ಯ ವಿವಾಹ ತಡೆಯುವ ಅಧಿಕಾರ ನೀಡಲಾಗಿದೆ. ಈ ಅಧಿಕಾರದಿಂದಲೇ ಕಳೆದ ನಾಲ್ಕು ವರ್ಷಗಳಲ್ಲಿ ಜಿಲ್ಲೆಯಾದ್ಯಂತ ನಡೆಯುತ್ತಿದ್ದ 82 ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ. ಆದರೂ ಮೇಲಿನ ಅಂಕಿ-ಅಂಶಗಳು ಆತಂಕ ಸೃಷ್ಟಿಸಿರುವುದಂತೂ ಗ್ಯಾರಂಟಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
More that 265 minors became pregnant in Dharwad district. This is shocking news of increasing in child marriage in the district. According to government rules if any womam become pregnant before 18 years, case will be filed against her husband under POCSO Act.
Please Wait while comments are loading...