ಧಾರವಾಡ ಜಿಲ್ಲಾ ಕಾಂಗ್ರೆಸ್ ವಕ್ತಾರ ವಿರುದ್ಧ ಮಾನನಷ್ಟ ಮೊಕದ್ದಮೆ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಜನವರಿ, 11 : ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಹಾಗೂ ಧಾರವಾಡ ಜಿಲ್ಲಾ ಕಾಂಗ್ರೆಸ್ ವಕ್ತಾರ ವೇದವ್ಯಾಸ ಕೌಲಗಿ ವಿರುದ್ಧ ಧಾರವಾಡದ 2ನೇ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಮಾನ ಹಾನಿ ಪ್ರಕರಣ ಮಂಗಳವಾರ ದಾಖಲಾಗಿದೆ.

ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವರ ಸಹೋದರ ಪ್ರದೀಪ ಶೆಟ್ಟರ್ ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ. ಪ್ರದೀಪ್ ಶೆಟ್ಟರ್ ಕ್ರಿಕೆಟ್ ಬೆಟ್ಟಿಂಗ್ ಕಿಂಗ್ ಪಿನ್ ಎಂದು ಕೌಲಗಿ ಅವರು ಪತ್ರಿಕಾ ಹೇಳಿಕೆ ನೀಡಿದ್ದರು.

ಇದರಿಂದ ಪ್ರದೀಪ ಶೆಟ್ಟರ್ ಮಂಗಳವಾರ ವಕೀಲರೊಂದಿಗೆ ನ್ಯಾಯಾಲಯಕ್ಕೆ ಆಗಮಿಸಿ ತಮ್ಮ ವಿರುದ್ಧ ಉದ್ದೇಶಪೂರ್ವಕವಾಗಿ ಅವಮಾನಿಸುವ ಮತ್ತು ರಾಜಕೀಯ ಪ್ರೇರಿತವಾಗಿ ಕೌಲಗಿ ಹೇಳಿಕೆ ನೀಡಿದ್ದಾರೆ ಎಂದು ದೂರು ದಾಖಲಿಸಿದರು.

MLC Pradeep Shettar files defamation case agains Dharwad congress spokeperson Vedavyasa kaulagi

ಹುಬ್ಬಳ್ಳಿಯಲ್ಲಿ ಹಿಂದೆ ಕ್ರಿಕೆಟ್ ಬೆಟ್ಟಿಂಗ್ ಕಿಂಗ್ ಪಿನ್ ರಾಗಿದ್ದ ಪ್ರದೀಶ ಶೆಟ್ಟರ್ ಅಧಿವೇಶನದಲ್ಲಿ ಕ್ಲಬ್ ವಿಚಾರ ಪ್ರಸ್ತಾಪಿಸಿರುವ ಶೆಟ್ಟರ್ ಪ್ರಸ್ತಾಪ ಭೂತದ ಬಾಯಲ್ಲಿ ಭಗವದ್ಗೀತೆಯಂತಿದೆ ಎಂದು ಕೌಲಗಿ ಹೇಳಿಕೆ ನೀಡಿದ್ದರು.

ವಿಧಾನ ಮಂಡಲದಲ್ಲಿ ಪ್ರಸ್ತಾಪಿಸಿದ ವಿಷಯವನ್ನು ಟೀಕಿಸಿಸುವುದು ಅವಮಾನಗೊಳಿಸುವುದು ಅಪರಾಧವಾಗಿದೆ. ದುರುದ್ದೇಶಪೂರ್ವಕ ಮತ್ತು ಆಧಾರ ರಹಿತರಾಗಿ ಕೌಲಗಿ ಹೇಳಿಕೆ ನೀಡಿರುವುದು ತಮಗೆ ಬೇಸರ ತರಿಸಿದೆ. ಆದ್ದರಿಂದ ಕಾನೂನು ಹೋರಾಟ ಮಾಡುತ್ತಿದ್ದೇನೆ ಎಂದು

ನೋಟೀಸ್ ಬಂದಿಲ್ಲ: ಮಾನಹಾನಿ ಕೇಸ್ ದಾಖಲಾಗಿರುವ ಕುರಿತು ವೇದವ್ಯಾಸ ಕೌಲಗಿ ಒನ್ ಇಂಡಿಯಾದೊಂದಿಗೆ ಮಾತನಾಡಿ, ಪಕ್ಷದ ಹಿರಿಯರಿಗೆ ಮತ್ತು ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಈ ವಿಷಯ ತಿಳಿಸುತ್ತೇನೆ. ಮಾನ ಹಾನಿ ಪ್ರಕರಣದ ಕುರಿತು ನನಗೆ ಯಾವುದೇ ಮಾಹಿತಿ ಮತ್ತು ನೋಟೀಸ್ ಬಂದಿಲ್ಲ ಸ್ಪಷ್ಟಪಡಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BJP MLC Pradeep Shettar file defamation in Dharwad 2nd JMFC Court against Hubballi Dharwad district congress spokeperson Vedavyasa kaulagi on Tuesday.
Please Wait while comments are loading...