ರೈಲಿನಲ್ಲಿ ಸಂಚರಿಸಿ ಪ್ರಯಾಣಿಕರ ಕಷ್ಟ ಆಲಿಸಿದ ಸಚಿವ ಸುರೇಶ್ ಅಂಗಡಿ
ಹುಬಳ್ಳಿ, ಜೂನ್ 04: ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಹೊಸದಾಗಿ ಅಧಿಕಾರ ಸ್ವೀಕರಿಸಿರುವ ಬಿಜೆಪಿ ಸಚಿವ ಸುರೇಶ್ ಅಂಗಡಿ ಅವರು ಇಂದು ರೈಲಿನ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸಿ ಪ್ರಯಾಣಿಕರ ಕಷ್ಟ ಸುಖ ಆಲಿಸಿದರು.
ನಿನ್ನೆ ರಾಣಿಚೆನ್ನಮ್ಮ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸಿದ ಸಚಿವ ಸುರೇಶ್ ಅಂಗಡಿ, ರೈಲಿನಲ್ಲಿ ಸಂಚರಿಸಿ ಪ್ರಯಾಣಿಕರ ಜೊತೆ ಮಾತನಾಡಿದರು. ಅವರ ಸಮಸ್ಯೆಯನ್ನು ಆಲಿಸಿದರು.
ಹುಬ್ಬಳ್ಳಿಯಿಂದ ಬೆಂಗಳೂರಿಗೆ ರೈಲಿನಲ್ಲಿಯೇ ಪ್ರಯಾಣಿಸಿದ ಸಚಿವರು, ರೈಲಿನಲ್ಲಿ ಬಹುತೇಕ ಭೋಗಿಗಳಲ್ಲಿ ಓಡಾಡಿ, ಜನರೊಂದಿಗೆ ಸಂವಾದ ನಡೆಸಿದರು.
ರೈಲ್ವೆ ಅಧಿಕಾರಿಗಳೊಂದಿಗೂ ಮಾತನಾಡಿದ ಸಚಿವರು, ನಿಲ್ದಾಣ ಕಾಮಗಾರಿ ಇನ್ನಿತರ ವಿಷಯಗಳ ಬಗ್ಗೆ ಮಾಹಿತಿ ಪಡೆದರು.

ಸನ್ಮಾನ ಸ್ವೀಕರಿಸಿದ್ದ ಸಚಿವರು
ಇದಕ್ಕೂ ಮುನ್ನಾ ಹುಬ್ಬಳ್ಳಿ-ಧಾರವಾಡ ಬಿಜೆಪಿ ಸದಸ್ಯರು, ಮುಖಂಡರಿಂದ ಸನ್ಮಾನವನ್ನು ಸಚಿವರು ಸ್ವೀಕರಿಸಿದರು. ಸುರೇಶ್ ಅಂಗಡಿ ಅವರು ಮೊದಲ ಬಾರಿಗೆ ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಮೊದಲ ಬಾರಿಗೆ ಸಂಸದಾರಿಗುವ ಅಂಗಡಿ
ಸುರೇಶ್ ಅಂಗಡಿ ಅವರು ಇದೇ ಮೊದಲ ಬಾರಿಗೆ ಸಚಿವರಾಗಿ ಆಯ್ಕೆ ಆಗಿದ್ದಾರೆ. ಈ ಮೊದಲು ಇದೇ ಖಾತೆಯನ್ನು ಕರ್ನಾಟಕದವರೇ ಆದ ಕೆ.ಎಚ್.ಮುನಿಯಪ್ಪ ಅವರು ನಿಭಾಯಿಸಿದ್ದರು.

ಪಿಯೂಶ್ ಗೋಯಲ್ ಅವರು ಮಂತ್ರಿ ಆಗಿದ್ದಾರೆ
ಪಿಯೂಶ್ ಗೋಯಲ್ ಅವರು ರೈಲ್ವೆ ಮಂತ್ರಿಯಾಗಿದ್ದು, ಅವರ ಸಹಯೋಗದಲ್ಲಿ ಸುರೇಶ್ ಅಂಗಡಿ ಅವರು ಕೆಲಸ ಮಾಡಬೇಕಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆ ಆಗಿರುವ ಸುರೇಶ್ ಅಂಗಡಿ ಅವರಿಗೆ ಆಡಳಿತದ ಅನುಭವ ಇದೆ.

ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗೆ ಪಾತ್ರ
ಸಚಿವರಾಗಿ ಆಯ್ಕೆ ಆದ ಕೆಲವೇ ದಿನಗಳಲ್ಲಿ ಸುರೇಶ್ ಅಂಗಡಿ ಅವರು ಕೆಲಸ ಪ್ರಾರಂಭ ಮಾಡಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ಹಲವರು ಹೊಗಳಿ ಪ್ರತಿಕ್ರಿಯಿಸಿದ್ದಾರೆ. ಸುರೇಶ್ ಅಂಗಡಿ ಅವರು ಇತ್ತೀಚೆಗೆ ಸಾರ್ವಜನಿಕರಿಗೆ ಮನವಿ ಒಂದನ್ನು ಮಾಡಿದ್ದರು. ಅವರನ್ನು ನೋಡಲು ಹೋದವರು ಹೂಗುಚ್ಛದ ಬದಲಿಗೆ ನೋಟ್ ಪುಸ್ತಕ ನೀಡುವಂತೆ ಕೇಳಿದ್ದರು, ಇದೂ ಸಹ ಪ್ರಶಂಸೆಗೆ ಪಾತ್ರವಾಗಿತ್ತು.












Click it and Unblock the Notifications