ಯೋಗದಲ್ಲಿ ವಿಶ್ವ ದಾಖಲೆ ಬರೆದ ಹಳ್ಳಿ ಹುಡುಗ

By: ಬಸವರಾಜ್ ಮರಳಿ ಹಳ್ಳಿ
Subscribe to Oneindia Kannada

ಹುಬ್ಬಳ್ಳಿ, ಜೂನ್ 21: ಭಾರತ ಯೋಗದಲ್ಲಿ ವಿಶ್ವಕ್ಕೆ ಗುರು. ಈ ಕಾರಣದಿಂದಲೇ ಪ್ರಧಾನಿ ನರೇಂದ್ರ ಮೋದಿ ಅವರ ಕರೆಯ ಮೇರೆಗೆ ಕಳೆದ ಎರಡು ವರ್ಷಗಳಿಂದ ಜೂನ್ ೨೧ರಂದು ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ.

ಕೇವಲ ಭಾರತದಲ್ಲಿ ಅಷ್ಟೇ ಅಲ್ಲ ವಿದೇಶಿಯರಿಗೂ ಯೋಗ ಹೇಳಿಕೊಡುವ ಮೂಲಕ ತಾಲೂಕಿನ ಮಲ್ಲಿಗವಾಡ ಗ್ರಾಮದ ಶಿವರಾಜ ಈಶ್ವರಪ್ಪ ಅಣ್ಣಿಗೇರಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಸದ್ಯಕ್ಕೆ ವಿಯೆಟ್ನಾಂನಲ್ಲಿ ಯೋಗ ಶಿಕ್ಷಕರಾಗಿರುವ ಶಿವರಾಜ್, ಕಳೆದ ವರ್ಷ ದೇಶದ ೧೪ ಜನರ ತಂಡದೊಂದಿಗೆ ೬೦ ಗಂಟೆ, ೬ ನಿಮಿಷ ಹಾಗೂ ೬ ಸೆಕೆಂಡ್‌ಗಳ ಕಾಲ ನಿರಂತರವಾಗಿ ೭,೭೭೭ ಸುತ್ತು ಸೂರ್ಯ ನಮಸ್ಕಾರ ಮಾಡುವ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ.

ಕೇವಲ ಅರ್ಧಗಂಟೆ ಯೋಗ ಮಾಡಲು ಕಷ್ಟಪಡುವ ಇಂದಿನ ದಿನಗಳಲ್ಲಿ ನಿರಂತರವಾಗಿ ೬೦ ಗಂಟೆಗಳ ಕಾಲ ಯೋಗ ಮಾಡುವುದು ಸುಲಭದ ಮಾತಲ್ಲ. ಆದರೆ, ಶಿವರಾಜ್ ಮತ್ತು ಅವರ ತಂಡ ಈ ಸಾಧನೆ ಮಾಡಿ ವಿಶ್ವವನ್ನು ಬೆರಗುಗೊಳಿಸಿದೆ.

ಸ್ವಾಮೀಜಿ ಮಾರ್ಗದರ್ಶನ

ಸ್ವಾಮೀಜಿ ಮಾರ್ಗದರ್ಶನ

ಕುಗ್ರಾಮದಲ್ಲಿ ಬೆಳೆದರೂ ವಿಶ್ವಮಟ್ಟದಲ್ಲಿ ಸಾಧನೆ ಮಾಡಿರುವ ಶಿವರಾಜ್ ಅವರ ಸಾಧನೆಗೆ ಇಡಿ ಗ್ರಾಮವೇ ಹೆಮ್ಮೆ ಪಡುತ್ತಿದೆ.
ಬಾಲ್ಯದಲ್ಲಿಯೇ ಯೋಗದ ಕುರಿತು ಅಪಾರ ಆಸಕ್ತಿ ಹೊಂದಿದ್ದ ಈತ ಕುಂದಗೋಳದ ಶಿವಾನಂದ ಮಠದ ಸಂಸ್ಥೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ ನಂತರ ಬಸವರಾಜ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಯೋಗ ಸಾಧನೆಗೆ ಮುಂದಾದರು.
ನಂತರ ಯೋಗ ಮಾರ್ಗದರ್ಶ ತರಬೇತಿ ಪಡೆದ ಇವರ ಚಾಕಚಕ್ಯತೆ ನೋಡಿದ ಕೊಡಗಿನ ಸಂತೋಷ ಚೆರಿಯಮನೆ ಅವರು ವಿಯೆಟ್ನಾಂಗೆ ಕರೆದೊಯ್ದು ತಮ್ಮ ಓಂ ಯೋಗ ಮತ್ತು ವೆಲ್ನೆಸ್ ಹಬ್ಬ ನಲ್ಲಿ ಶಿಕ್ಷಕರಾಗಿ ಸೇರಿಸಿಕೊಂಡರು.

ಸುದೀರ್ಘ ಸೂರ್ಯ ನಮಸ್ಕಾರ

ಸುದೀರ್ಘ ಸೂರ್ಯ ನಮಸ್ಕಾರ

ಕಳೆದ ವರ್ಷ ವಿಯೆಟ್ನಾಂನಲ್ಲಿ ನಡೆದ ಸ್ಪರ್ಧೆಯಲ್ಲಿ ರಾಜ್ಯದ ಶಿವರಾಜ ಸೇರಿ ಎಂಟು ಯೋಗ ಪಟುಗಳು ಸುದೀರ್ಘ ಸೂರ್ಯ ನಮಸ್ಕಾರದ ಸಾಧನೆ ಮಾಡಿದ್ದಾರೆ. ಒಂದು ಸುತ್ತು ಸೂರ್ಯ ನಮಸ್ಕಾರ ಎಂದರೆ ಹತ್ತು ಯೋಗ ಆಸನಗಳು, ಅಂದರೆ ೭೭,೭೭೭ ಬಾರಿ ಯೋಗಪಟುಗಳು ರಿಲೇ ಮಾದರಿಯಲ್ಲಿ ಆಸನಗಳನ್ನು ಮಾಡಿ ಮುಗಿಸಿದ್ದಾರೆ. ದ ವರ್ಲ್ಡ ರೆಕಾರ್ಡ್ಸ ಯೂನಿಯನ್' ಸಂಸ್ಥೆಯವರು ದಾಲೆಯ ಸುಧೀರ್ಘ ಸೂರ್ಯ ನಮಸ್ಕಾರದ ದೃಶ್ಯಗಳನ್ನು ಚಿತ್ರಿಕರಿಸಿ ದಾಖಲೆ ಎಂದು ಮಾನ್ಯ ಮಾಡಿದ್ದಾರೆ.

ಸಂಬಂಧಿಕರು ಹೇಳೋದು ಹೀಗೆ

ಸಂಬಂಧಿಕರು ಹೇಳೋದು ಹೀಗೆ

''ಸದ್ಯ ವಿಯೆಟ್ನಾಂನಲ್ಲಿ ಯೋಗ ಶಿಕ್ಷಕರಾಗಿರುವ ಶಿವರಾಜ ಒಂದು ತಿಂಗಳ ರಜೆಗಾಗಿ ಹುಬ್ಬಳ್ಳಿಗೆ ಬಂದಿದ್ದಾರೆ. ಬಾಲ್ಯದಿಂದಲೂ ಯೋಗ ಸಾಧನೆಗೆ ಅಪಾರ ಶ್ರಮ ಹಾಕಿದ ಶಿವರಾಜನಿಗೆ ಯೋಗದಲ್ಲಿ ವಿಶ್ವಮಟ್ಟದಲ್ಲಿ ದಾಖಲೆ ಮಾಡುವ ಆಸೆ ಇತ್ತು. ಈಗ ಅದನ್ನ ಸಾಧಿಸಿದ್ದಾನೆ'' ಎನ್ನುತ್ತಾರೆ ಶಿವರಾಜ ಅವರ ಭಾವ ಮಾಲತೇಶ ಬೆಟಗೇರಿ.

ನಿತ್ಯ ಒಂದು ಗಂಟೆ ಮೀಸಲು

ನಿತ್ಯ ಒಂದು ಗಂಟೆ ಮೀಸಲು

ಭಾರತೀಯ ಯೋಗ ಪದ್ಧತಿ ಹಾಗೂ ಯೋಗಪಟುಗಳಿಗೆ ವಿಶ್ವದ ಎಲ್ಲಡೆ ಮಾನ್ಯತೆ ಇದೆ. ಆದರೆ, ಭಾರತದಲ್ಲಿಯೇ ಇದನ್ನು ಅಳವಡಿಸಿಕೊಂಡವರು ತುಂಬಾ ಕಡಿಮೆ. ವಿಶ್ವದ ಬಹುತೇಕ ದೇಶದ ಜನರು ಯೋಗಕ್ಕಾಗಿ ಪ್ರತಿದಿನ ಒಂದು ಗಂಟೆ ಮೀಸಲಿಡುತ್ತಾರೆ
ಎನ್ನುತ್ತಾರೆ ಶಿವರಾಜ ಅಣ್ಣಿಗೇರಿ.

ಖುಷಿ ತಂದ ಸಾಧನೆ

ಖುಷಿ ತಂದ ಸಾಧನೆ

ಯೋಗದಲ್ಲಿ ಈ ಮಟ್ಟಕ್ಕೆ ಸಾಧನೆ ಮಾಡಿರುವುದು ಸಹಜವಾಗಿಯೇ ಖುಷಿ ತಂದಿದೆ. ನನ್ನ ಸಾಧನೆಗೆ ಕುಟುಂಬದ ಸದಸ್ಯರು ಸೇರಿದಂತೆ ಸಂಸ್ಥೆಯ ಮುಖ್ಯಸ್ಥರಾದ ಸಂತೋಷ ಚೆರಿಯಮನೆ ಅವರ ಸಹಕಾರವನ್ನು ಸ್ಮರಿಸಲೇ ಬೇಕು. ಭಾರತೀಯರೇ ಕಂಡುಕೊಂಡ ಯೋಗ ಎಲ್ಲೆಡೆ ಮನ್ನಣೆ ಪಡೆಯುತ್ತಿದೆ. ಅದೇ ರೀತಿ ನಮ್ಮ ದೇಶದಲ್ಲೂ ಯೋಗ ಸಾಧನೆಗೆ ಜನರು ಒತ್ತು ಕೊಡಬೇಕು ಎಂದು ಶಿವರಾಜ್ ಸಲಹೆ ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hubballi's Malligawada village's Yoga Guru Shivaraja Eeshwarappa who is working as a yoga teacher in Vietnam. Last year he performed yoga up to 60 hours thus gaining the attention of the world.
Please Wait while comments are loading...