Manmohan Singh: ಉತ್ತರ ಕರ್ನಾಟಕದಲ್ಲಿದ್ದಾರೆ ಮನಮೋಹನ್ ಸಿಂಗ್ ಸಂಬಂಧಿಕರು..
ಹುಬ್ಬಳ್ಳಿ, ಡಿಸೆಂಬರ್ 27: ದೇಶ ಕಂಡ ಅಪರೂಪದ ನಾಯಕ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ವಯೋಸಹಜ ಕಾಯಿಲೆಯಿಂದ ಗುರುವಾರ ರಾತ್ರಿ ನಿಧನರಾದರು. ಅಗಲಿದ ಮಾಜಿ ಪ್ರಧಾನಿಗೆ ಅನೇಕ ರಾಜಕೀಯ ಗಣ್ಯರು ಅಂತಿಮ ನಮನ ಸಲ್ಲಿಸಿದ್ದಾರೆ. ಅಭಿವೃದ್ಧಿ ಕಾರ್ಯಗಳಿಗೆ ಬೆಂಗಳೂರಿನಲ್ಲಿ ಚಾಲನೆ ನೀಡಿದ್ದರು. ಅವರ ಕೊಡುಗೆ ಕರ್ನಾಟಕಕ್ಕೂ ಇದೆ. ಇದೀಗ ಮನಮೋಹನ್ ಸಿಂಗ್ ಅವರ ಸಂಬಂಧಿಕರು ಉತ್ತರ ಕರ್ನಾಟಕದವರು ಎಂಬ ಮಾಹಿತಿ ಗೊತ್ತಾಗಿದೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನ ಸುದ್ದಿ ತಿಳಿದು, ಅವರು ಕುಟುಂಬಸ್ಥರು ಮಾತ್ರವಲ್ಲದೇ, ಅವರ ಆಪ್ತರು, ಕಾಂಗ್ರೆಸ್ ನಾಯಕರು ಸೇರಿದಂತೆ ದೇಶದ ಅನೇಕರು ಕಂಬನಿ ಮಿಡಿದಿದ್ದಾರೆ. ಆರ್ಥಿಕ ಸುಧಾರಣೆಗೆ ಹೆಸರಾಗಿದ್ದ ಮನಮೋಹನ್ ಸಿಂಗ್ ಸಂಬಂಧಿಕರು ಹುಬ್ಬಳ್ಳಿಯಲ್ಲಿ ವಾಸವಿದ್ದಾರೆ. ಮಾಜಿ ಪ್ರಧಾನಿಯ ನಿಧನದ ಸುದ್ದಿ ತಿಳಿದು ಅವರ ಕುಟುಂಬಕ್ಕೆ ಭರಸಿಡಿಲು ಬಡಿದಂತಾಗಿದೆ. ಹುಬ್ಬಳ್ಳಿ ಸಂಬಂಧಿಕರ ಮನೆಯಲ್ಲಿ ನೀರವ ಮೌನ ಆವರಿಸಿದೆ.

ಹುಬ್ಬಳ್ಳಿಯಲ್ಲಿ ಮನಮೋಹನ ಸಿಂಗ್ ಪತ್ನಿ ಅವರ ಸಂಬಂಧಿಕರು ವಾಸವಿದ್ದಾರೆ. ಇಲ್ಲಿನ ವಿದ್ಯಾನಗರದಲ್ಲಿ ಮನಮೋಹನ್ ಸಿಂಗ್ ಪತ್ನಿಯ ಸಹೋದರಿ ಹರ್ಪ್ರೀತ್ ಕೌರ್ ಕುಟುಂಬದವರು ವಾಸವಿದ್ದಾರೆ. ಹುಬ್ಬಳ್ಳಿಯ ಹರ್ನಾಮ್ ಸಿಂಗ್ ಕೊಹ್ಲಿ ಎಂಬುವರ ಜೊತೆ ಹರ್ಪ್ರೀತ್ ಕೌರ್ ವಿವಾಹವಾಗಿದ್ದರು. ಈ ಕಾರಣದಿಂದ ಮನಮೋಹನ್ ಸಿಂಗ್ ಅವರಿಗೂ ಉತ್ತರ ಕರ್ನಾಟಕಕ್ಕೂ ವರ್ಷಗಳಿಂದಲೂ ನಂಟಿದೆ.
ಮಾಜಿ ಪ್ರಧಾನಿ ಸಂಬಂಧಿಕರ ಕಾರ್ಯವೇನು?
ಮಾಜಿ ಪ್ರಧಾನಿ ಸಂಬಂಧಿಕರಾಗಿರುವ ಹರ್ನಾಮ್ ಸಿಂಗ್ ಕೊಹ್ಲಿ ಅವರು ನಗರದಲ್ಲಿ ಆಟೋಮೊಬೈಲ್ ಶಾಪ್ ನಡೆಸುತ್ತಿದ್ದಾರೆ. ಸದ್ಯ ಹರ್ಪ್ರೀತ್ ಕುಟುಂಬಸ್ಥರಿಗೆ ಸಂಬಂಧಿಸಿದ ದಾಬಾವೊಂದು ಹುಬ್ಬಳ್ಳಿಯ ಹೊರವಲಯದಲ್ಲಿದೆ. ಮನಮೋಹನ ಸಿಂಗ್ ಪತ್ನಿಯ ಸಹೋದರಿ ಹರ್ಪ್ರೀತ್ ಕೌರ್ 14 ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಈಗ ಕೌರ್ ಪತಿ ಹರ್ನಾಮ್ ಸಿಂಗ್ ಕೊಹ್ಲಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯ ಈ ಕುಟುಂಬಸ್ಥರಿಗೆ ಮನಮೋಹನ್ ಸಿಂಗ್ ಅವರ ನಿಧನ ಸುದ್ದಿ ತಿಳಿದು ಈ ಕುಟುಂಬಕ್ಕೆ ಬರ ಸಿಡಿಲು ಬಡಿದಂತಾಗಿದೆ. ಹುಬ್ಬಳ್ಳಿಯ ಮನೆ ಮಂದಿ ಕಂಬನಿ ಮಿಡಿದಿದ್ದಾರೆ.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications