ಯುವಕ ಯುವತಿಯರಿಗೆ ನಾಯಕತ್ವದ 'ಲೀಡ್ ಪ್ರಯಾಣ'

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ನವೆಂಬರ್, 5 : ನಗರದ ಬಿವಿ ಭೂಮರೆಡ್ಡಿ ಕಾಲೇಜ್ ಆವರಣದಲ್ಲಿರುವ ದೇಶಪಾಂಡೆ ಫೌಂಡೇಶನ್ ಯುವಕ ಮತ್ತು ಯುವತಿಯರಿಗಾಗಿ ಮುಂದಿನ ವರ್ಷ ಲೀಡ್ ಪ್ರಯಾಣ ಕಾರ್ಯಕ್ರಮ ಆಯೋಜಿಸಿದೆ. ಇದು ಯುವಜನತೆಯಲ್ಲಿ ನಾಯಕತ್ವ ಬೆಳೆಸುವ ಮಹತ್ವದ ಯೋಜನೆ.

ಜನವರಿ 16ರಿಂದ ಜನವರಿ 29ರವರೆಗೆ ಈ ಲೀಡ್ ಪ್ರಯಾಣ ಹಮ್ಮಿಕೊಳ್ಳಲಾಗಿದೆ. ಹುಬ್ಬಳ್ಳಿಯಿಂದ ಹೊರಟ ಪ್ರಯಾಣವು ಬೆಳಗಾವಿ, ದೊಡ್ಡಬಳ್ಳಾಪುರ, ಬೆಂಗಳೂರು, ಮೈಸೂರು, ಮಣಿಪಾಲ, ಧರ್ಮಸ್ಥಳ ಮತ್ತು ಆಂಧ್ರಪ್ರದೇಶದ ಕುಪ್ಪಂವರೆಗೂ ತಲುಪಲಿದೆ. [ಯಶಸ್ವಿ ಉದ್ಯಮಿ ಗುರುರಾಜ ದೇಶಪಾಂಡೆ ಸಂದರ್ಶನ]

ಲೀಡ್ ಪ್ರಯಾಣದ ಸಂದರ್ಭದಲ್ಲಿ 10 ಜನ ವಿಶೇಷ ಸಾಧಕರನ್ನು ಭೇಟಿ ಮಾಡಿ ಚರ್ಚಿಸಲಾಗುವುದು. ಮತ್ತು 12 ಸಂಘಟನೆಗಳಿಗೆ ಭೇಟಿ ನೀಡಿ ಕಾರ್ಯ ವೈಖರಿ ತಿಳಿದುಕೊಳ್ಳಲಾಗುವುದು. ಜ.29ರಂದು ಮರಳಿ ಹುಬ್ಬಳ್ಳಿಗೆ ಬರುವ ಪ್ರಯಾಣವು ಅಂದು ಅಂತಾರಾಷ್ಟ್ರೀಯ ಯುವ ಸಮ್ಮೇಳನ ಆಯೋಜಿಸಲಾಗಿದೆ. [ಹುಬ್ಬಳ್ಳಿಯಲ್ಲಿ ದೇಶಪಾಂಡೆ ಫೌಂಡೇಶನ್‌ನಿಂದ ಅಭಿವೃದ್ಧಿ ಮಂತ್ರ]

Lead Prayana by Deshpande Foundation to unleash leadership potential

ಈ ಲೀಡ್ ಪ್ರಯಾಣದಲ್ಲಿ 18ರಿಂದ 26 ವರ್ಷದೊಳಗಿನ ಯುವಕ, ಯುವತಿಯರು ಪಾಲ್ಗೊಳ್ಳಬಹುದಾಗಿದೆ. ಡಿಸೆಂಬರ್ 15ರೊಳಗಾಗಿ ಆಸಕ್ತರು ಹೆಸರು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿ ಅಭಿನಂದನೆ ಕವಳೆ (99000 53763) ಇವರನ್ನು ಸಂಪರ್ಕಿಸಬಹುದು. ಮಾಹಿತಿ ಲೀಡ್ ಪ್ರಯಾಣದ ವೆಬ್ ಸೈಟ್ ಗೆ ಭೇಟಿ ನೀಡಿಬಹುದು. ವೆಬ್ ಸೈಟ್ ವಿಳಾಸ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Deshpande Foundation has organized Lead Prayana to unleash leadership potential in young boys and girls. The Prayana will be held from January 16 to January 29, 2017. Interested youngsters can register in the website before December 15, 2016.
Please Wait while comments are loading...