'ಕುರುಬ'ರಿಗೂ ಪ್ರತ್ಯೇಕ ಧರ್ಮದ ಬೇಡಿಕೆ ಇಟ್ಟ ಬಸವರಾಜ ದೇವರು

Posted By: Basavaraj
Subscribe to Oneindia Kannada

ಹುಬ್ಬಳ್ಳಿ, ಜುಲೈ 31: ಲಿಂಗಾಯತ ಹಾಗೂ ವೀರಶೈವ ಧರ್ಮದ ಬೇಡಿಕೆ ಹಾಗೂ ವಿರೋಧದ ಕುರಿತು ರಾಜ್ಯದಾದ್ಯಂತ ವ್ಯಾಪಕ ಚರ್ಚೆ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಕುರುಬ ಸಮುದಾಯದಿಂದಲೂ ಪ್ರತ್ಯೇಕ ಧರ್ಮದ ಬೇಡಿಕೆ ಬಂದಿದೆ.

ಲಿಂಗಾಯತ ಧರ್ಮದ ಬೇಡಿಕೆ ಸಂದರ್ಭ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಬೇರೆ ಜಾತಿಯವರೂ ಇದೇ ರೀತಿ ಬೇಡಿಕೆ ಎತ್ತಬಹುದು ಎಂದು ಎಚ್ಚರಿಕೆ ಕೊಟ್ಟಿದ್ದರು. ಅಷ್ಟರಲ್ಲಾಗಲೇ ಧಾರವಾಡ ಜಿಲ್ಲೆಯ ಮನ್ಸೂರಿನ ರೇವಣ ಸಿದ್ಧೇಶ್ವರ ಮಠದ ಬಸವರಾಜ ದೇವರು 'ಕುರುಬ' ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಬೇಕು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಕುರುಬರು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೆ ಆಗ್ರಹ, ಪ್ರತಿಭಟನೆ, ಧ್ವಂಸ

ಜುಲೈ 29ರಂದು ಬಾಗಲಕೋಟೆಯಲ್ಲಿ ಪರಿಶಿಷ್ಟ ಪಂಗಡ (ಎಸ್ಟಿ) ಮೀಸಲಾತಿಗಾಗಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಪ್ರಚೋದನಕಾರಿಯಾಗಿ ಭಾಷಣ ಮಾಡಿ ಜಿಲ್ಲಾಡಳಿತ ಕಚೇರಿ ದ್ವಂಸಕ್ಕೆ ಕಾರಣರಾಗಿದ್ದ ಸ್ವಾಮೀಜಿ ಈಗ ಪ್ರತ್ಯೇಕ ಧರ್ಮದ ಬೇಡಿಕೆ ಮುಂದಿಟ್ಟು ಅಚ್ಚರಿ ಮೂಡಿಸಿದ್ದಾರೆ.

Kuruba community also wants 'Independent Religion' title

ಈ ಕುರಿತು ಭಾನುವಾರ (ಜುಲೈ 30) ದಂದು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ದೇವರು, "ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ಸಿಗಬೇಕೆಂಬುದರಲ್ಲಿ ಯಾವುದೇ ಆಕ್ಷೇಪವಿಲ್ಲ. ಅದೇ ರೀತಿಯಾಗಿ ಹಿಂದುಳಿದ ಸಮುದಾಯದ ಕುರುಬರಿಗೂ ಪ್ರತ್ಯೇಕ ಧರ್ಮದ ಮಾನ್ಯತೆ ಸಿಗಬೇಕು. ದೇಶದಾದ್ಯಂತ ಕುರುಬ ಸಮುದಾಯಕ್ಕೆ ಸೇರಿದ ಅಂದಾಜು 16 ಕೋಟಿ ಜನಸಂಖ್ಯೆ ಇದೆ. ಅವರಿಗೆ ನ್ಯಾಯ ಸಿಗಬೇಕಾದರೆ ಅವರೆಲ್ಲರಿಗೂ ಪ್ರತ್ಯೇಕ ಧರ್ಮ ಸಿಗಲೇಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡೂ ಈ ಬೇಡಿಕೆ ಈಡೇರಿಸಲೇಬೇಕು," ಎಂದಿದ್ದಾರೆ.

ಕೇಂದ್ರದಲ್ಲಿ ಸಮುದಾಯವನ್ನು ಪ್ರತಿನಿಧಿಸುವ ಸಚಿವರಿದ್ದಾರೆ. ಸಂಸತ್‌ನಲ್ಲಿ ಅಂದಾಜು 10-11 ಕುರುಬ ಸಮುದಾಯದ ಸಂಸದರಿದ್ದಾರೆ. ಎಸ್ಟಿ ಮೀಸಲಾತಿ ಹೋರಾಟದೊಂದಿಗೆ ಪ್ರತ್ಯೇಕ ಧರ್ಮಕ್ಕೂ ಹೋರಾಟ ರೂಪಿಸಲಾಗುವುದು ಎಂದು ದೇವರು ತಿಳಿಸಿದರು.

ಜಿಲ್ಲಾಡಳಿವೇ ಹೊಣೆ
ಎಸ್ಟಿ ಮೀಸಲಾತಿಗಾಗಿ ಬಾಗಲಕೋಟೆಯಲ್ಲಿ ಶಾಂತಿಯುತವಾಗಿ ನಡೆಯುತ್ತಿದ್ದ ಹೋರಾಟದ ಸಂದರ್ಭದಲ್ಲಿ ನಡೆದ ಗಲಾಟೆಗೆ ಜಿಲ್ಲಾಡಳಿತವೇ ಹೊಣೆ ಎಂದು ಬಸವರಾಜ ದೇವರು ಆರೋಪಿಸಿದರು.

ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಹೋರಾಟಗಾರರ ಮೇಲೆ ಪೊಲೀಸರು ಏಕಾಏಕಿಯಾಗಿ ಲಾಠಿ ಬೀಸಲಾರಂಭಿಸಿದ್ದು ಏಕೆ? ಎಂದು ಪ್ರಶ್ನಿಸಿದರು.

Monkeys Ring Bell At Hanuman Temple

ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು. ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷಂತ್ ಅವರನ್ನು ಅಮಾನತು ಮಾಡಬೇಕು. ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಬೇಕು ಹಾಗೂ ಜಿಲ್ಲಾಡಳಿತ ಸಮುದಾಯದ ಕ್ಷಮೆ ಕೇಳಬೇಕು ಎಂದು ಅವರು ಒತ್ತಾಯಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Basavaraj Devaru from Revanasiddeshwar Mutt of Mansur has demanded state government to recommend independent religion for ‘Kuruba’ community. He clarified that Kuruba community wouldn’t oppose for Lingayath independent religion, but Kuruba community also eligible for the same.
Please Wait while comments are loading...