ಹುಬ್ಬಳ್ಳಿ ಬಳಿ ಅಕ್ರಮ 23 ಲಕ್ಷ ರೂ. ಹಣ ವಶ, ಮೂವರ ಬಂಧನ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಡಿಸೆಂಬರ್, 15 : ಹುಬ್ಬಳ್ಳಿಯಿಂದ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣಕ್ಕೆ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 23 ಲಕ್ಷ ರೂ. ಅಕ್ರಮ ಹಣವನ್ನು ಕುಂದಗೋಳ ಪೊಲೀಸರು ಗುರುವಾರ ವಶಪಡಿಸಿಕೊಂಡಿದ್ದಾರೆ.

ಅಕ್ರಮ ಹಣ ಸಾಗಿಸುತ್ತಿದ್ದ ಅರವಿಂದ, ಅಮೀರರಾಮ, ಪ್ರೇಮಸಿಂಗ್ ಎನ್ನುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 100 ರೂ. ಮುಖಬೆಲೆಯ 3 ಲಕ್ಷ ರೂ. ಹಾಗೂ 2000 ಸಾವಿರ ಮುಖಬೆಲೆಯ 20 ಲಕ್ಷ ಸೇರಿದಂತೆ ಒಟ್ಟು 23 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ.

Kundgol police seized Rs 23 lakh unaccounted cash

ಬ್ಲಾಕ್ ಮನಿಯನ್ನು ವೈಟ್ ಮಾಡಲು ಈ ಹಣವನ್ನು ಒಯ್ಯಲಾಗುತ್ತಿತ್ತು ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಹುಬ್ಬಳ್ಳಿ ಮತ್ತು ಲಕ್ಷ್ಮೇಶ್ವರ ಪಟ್ಟಣಗಳಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಕಲಿ ಐಟಿ ಅಧಿಕಾರಿಗಳ ಬಂಧನ: ಮೈಸೂರಿನ ಶಿವಾನಂದ ಭಜಂತ್ರಿ ಮತ್ತೆ ಮೂವರು ಸಹಚರರು ಐಟಿ ಅಧಿಕಾರಿಗಳೆಂದು ಲಾರಿ ಚಾಲಕ, ಆಟೋ ಡ್ರೈವರ್ ಗಳಿಂದ ಹಣ ವಸೂಲಿ ಮಾಡಿ ವಂಚಿಸುತ್ತಿದ್ದವರನ್ನು ಉಪನಗರ ಪೊಲೀಸರು ಬಂಧಿಸಿದ್ದಾರೆ.

ಬೈಕ್ ಕಳ್ಳತನ: ಮಂಜುನಾಥ ಫಕ್ಕೀರಪ್ಪ ಹಾವೇರಿ ಎನ್ನುವರ ಕೆಎ 25 ಟಿಜೆ 1280 ನಂಬರಿನ ಹೊಂಡಾ ಬೈಕ್ ನ್ನು ಡಿ.14ರಂದು ಕಳ್ಳತನವಾಗಿದೆ. ಈ ಬಗ್ಗೆ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮನೆಗಳ್ಳತನ: ಧಾರವಾಡ ಹೊಸಯಲ್ಲಾಪುರ ಮಾಯಕರ ಸಂದಿಯ ರಾಜು ಮಾರುತಿ ಗಂಡೋಳೆಕರ ಎಂಬುವರು ಮನೆಯಲ್ಲಿ ಡಿ.13 ರಂದು ಕಳ್ಳತನ ಮಾಡಿರುವ ಪ್ರಕರಣ ಶಹರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಕಳ್ಳರು 2000 ರೂ. ಮುಖಬೆಲೆಯ 18,000 ರೂ.ಗಳನ್ನು ಮನೆ ಕೀಲಿ ಮುರಿದು ಕದ್ದೊಯ್ದಿದ್ದಾರೆ.

17ವರ್ಷಗಳ ಬಳಿಕ ಆರೋಪಿ ಸೆರೆ: ತನ್ನ ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು 17 ವರ್ಷಗಳ ಬಳಿಕಹಳೇಹುಬ್ಬಳ್ಳಿ ಪೊಲೀಸರು ಬಂಧಿಸಿ ಗುರುವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

1999ರಲ್ಲಿ ಹಳೇಹುಬ್ಬಳ್ಳಿ ಮೆಹರವಾಡ ಚಾಳ ನಿವಾಸಿ ಸುಂದರ ಕಾಳಪ್ಪ ಶೆಟ್ಟಿ ಬಂಧಿತ ಆರೋಪಿಯಾಗಿದ್ದಾನೆ. ವರದಕ್ಷಿಣೆ ತರುವಂತೆ ಒತ್ತಾಯಿಸಿ ತನ್ನ ಹೆಂಡತಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದನು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kundgol police on Thursday intercepted a vehicle carrying Rs 23 lakh unaccounted cash. Three people transporting the cash illegally have been detained.
Please Wait while comments are loading...