ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಕೋತೋ ಸ್ಕೋಪ್ ಹಿಡಿಯಬೇಕಿದ್ದ ಕೈಯಲ್ಲಿ ಕನ್ನಡ ಬಾವುಟ

ರಾಜ್ಯ ಸರ್ಕಾರ ಸಹಕಾರ ಸಂಘಗಳಲ್ಲಿನ ೫೦ ಸಾವಿರದ ವರೆಗಿನ ಸಾಲವನ್ನು ಮನ್ನಾ ಮಾಡಿದ್ದು, ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಕೃಷಿ ಸಾಲವನ್ನು ಮನ್ನಾ ಮಾಡಬೇಕು ಎಂದು ಧಾರವಾಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

By Basavaraj Maralihalli
|
Google Oneindia Kannada News

ಹುಬ್ಬಳ್ಳಿ, ಜುಲೈ 8: ವೈದ್ಯಕೀಯ ಕಾಲೇಜು ಅಂದ್ರೆ ಸಾಮಾನ್ಯವಾಗಿ ಕಾಣಸಿಗುವುದು ವಿವಿಧ ವಿಭಾಗಗಳು, ಆಸ್ಪತ್ರೆ, ರೋಗಿಗಳು, ಲ್ಯಾಬರೋಟರಿ, ಆಡಳಿತ ಕಚೇರಿ, ತರಗತಿ ಕೋಣೆಗಳು, ಶವಾಗಾರ ಇಂಥ ವಾತಾವರಣವೇ ಕಾಣಸಿಗುತ್ತದೆ. ಹುಬ್ಬಳ್ಳಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯೂ ಇದಕ್ಕೆ ಹೊರತಾಗಿಲ್ಲ.

ಆದರೆ, ಶುಕ್ರವಾರ ಮತ್ತು ಶನಿವಾರ ಹುಬ್ಬಳ್ಳಿ ಕಿಮ್ಸ್‌ನ ವಾತಾವರಣ ಅಕ್ಷರಶಃ ಬದಲಾಗಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ 'ಕನ್ನಡ ಹಬ್ಬ-2017' ಇಲ್ಲಿನ ವಾತಾವರಣವನ್ನು ಸಂಪೂರ್ಣ ಬದಲಿಸಿತ್ತು. ಇಂಗ್ಲಿಷ್ ಮಯವಾಗಿರುತ್ತಿದ್ದ ವಾತಾವರಣವೆಲ್ಲಾ ಕನ್ನಡಮಯವಾಗಿ ಬದಲಾಗಿತ್ತು.

ಸಾಲ ಮನ್ನಾಕ್ಕೆ ಆಗ್ರಹ : ಜೋಶಿ ಮನೆಗೆ ಮುತ್ತಿಗೆ ಯತ್ನಸಾಲ ಮನ್ನಾಕ್ಕೆ ಆಗ್ರಹ : ಜೋಶಿ ಮನೆಗೆ ಮುತ್ತಿಗೆ ಯತ್ನ

ಎಫ್ರಾನ್ ಕೋಟ್ ಧರಿಸಬೇಕಿದ್ದ ವಿದ್ಯಾರ್ಥಿಗಳು ವಿವಿಧ ಬಗೆಯ ಉಡುಗೆಗಳನ್ನು ತೊಟ್ಟಿದ್ದರು. ಸ್ಟೇತಸ್ಕೋಪ್ ಹಿಡಿಯಬೇಕಿದ್ದವರ ಕೈಯಲ್ಲಿ ಕನ್ನಡದ ಬಾವುಟವಿತ್ತು. ಇಂಗ್ಲಿಷ್ ಮಾತನಾಡುವ ಧ್ವನಿಯಲ್ಲಿ ಕನ್ನಡವಿತ್ತು. ಹೀಗೆ ಹಲವು ಬದಲಾವಣೆಗಳು ಕಿಮ್ಸ್‌ನ ಆವರಣವನ್ನು ಸೆಳೆಯುವಂತೆ ಮಾಡಿತ್ತು.

ಲಂಕಾ ದಹನ ಸನ್ನಿವೇಶ

ಲಂಕಾ ದಹನ ಸನ್ನಿವೇಶ

ಕಿಮ್ಸ್‌ನ ಆಡಳಿತ ಕಚೇರಿ ಕಟ್ಟಡದಿಂದ ಆರಂಭವಾದ ಮೆರವಣಿಗೆ ಮುಖ್ಯ ಗೇಟ್‌ವರೆಗೆ ತೆರಳಿ ವಾಪಸ್ಸು ಮುಖ್ಯ ಕಟ್ಟಡಕ್ಕೆ ಆಗಮಿಸಿತು. ಮೆರವಣಿಗೆಯಲ್ಲಿ ಭಾಗವಹಿಸಿದ ಕಲಾವಿದರ ತಂಡ ಪ್ರದರ್ಶಿಸಿದ ಶ್ರೀರಾಮ, ಲಕ್ಷ್ಣಣ, ಆಂಜನೇಯ, ರಾವಣ, ಕಪಿಸೈನ್ಯ ಸೇರಿಕೊಂಡು ಲಂಕಾ ದಹನ ಸನ್ನಿವೇಶ ನೋಡುಗುರನ್ನು ಬೆರಗುಗೊಳಿಸಿತು.

ಶಹನಾಯಿಯ ಮೇಳ

ಶಹನಾಯಿಯ ಮೇಳ

ಡೊಳ್ಳು ಕುಣಿತ, ಗೊಂಬೆ ಕುಣಿತ, ಜಾಂಜ್‌ಮೇಳ, ಶಹನಾಯಿ ಮೇಳ ಮರೆವಣಿಗೆಯ ಅಂದ ಹೆಚ್ಚಿಸಿದವು. ಮೆರವಣಿಗೆಯಲ್ಲಿ ಒಂದು ತಂಡವಾದ ನಂತರ ಇನ್ನೂಂದು ತಂಡ ಬಂದು ತಮ್ಮ ಕಲೆಯನ್ನು ಕುಣಿತದ ಮೂಲಕ ಪ್ರದರ್ಶಿಸುತ್ತದವು.

ಸಾಧಕರಿಗೆ ಪುಷ್ಪಾಲಂಕಾರ

ಸಾಧಕರಿಗೆ ಪುಷ್ಪಾಲಂಕಾರ

ಹೂವಿನ ಸಿಂಗರಿಸಿದ ವಾಹನದಲ್ಲಿ ವಿಶ್ವಗುರು ಬಸವಣ್ಣ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ದ.ರಾ. ಬೇಂದ್ರ, ಅಕ್ಕಮಹಾದೇವಿ, ಸರ್.ಎಂ.ವಿಶೇಶ್ವರಯ್ಯ, ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ, ಒನಕೆ ಓಬವ್ವ, ಗದಗಿನ ಪುಟ್ಟರಾಜ ಗವಾಯಿ, ವೀರರಾಣಿ ಕಿತ್ತೂರು ಚನ್ನಮ್ಮ, ಕನ್ನಡಾಂಬೆ, ಯಕ್ಷಗಾನ ವೇಷ ಹಾಗೂ ಕೊಡುಗು, ಉತ್ತರ ಕರ್ನಾಟಕ, ಪಂಜಾಬಿ, ದಕ್ಷಣ ಕನ್ನಡ ಶೈಲಿಯ ವೇಷಧರಿಸಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಗಮನ ಸೆಳೆದರು.

ಎಲ್ಲೆಲ್ಲೂ ಕನ್ನಡ ವಾತಾವರಣ

ಎಲ್ಲೆಲ್ಲೂ ಕನ್ನಡ ವಾತಾವರಣ

ಮೆರವಣಿಗೆಯುದ್ದಕ್ಕೂ ಕನ್ನಡ ಗೀತೆಗಳು, ಕೆಂಪು, ಹಳದಿ ಭಾವುಟಗಳು ರಾರಾಜಿಸುತ್ತಿದ್ದವು. ಗಾಳಿ ತುಂಬಿದ ಕೆಂಪು ಹಳದಿ ಬಲೂನ್‌ಗಳು ಹಾರಿಬಿಡುತ್ತಿದ್ದಂತೆ ಎಲ್ಲರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಕಲಾವಿದರೊಂದಿಗೆ ವಿದ್ಯಾರ್ಥಿಗಳು, ಪಾಲಕರು ಸೆಲ್ಪಿ ತೆಗೆದುಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಮೆರವಣಿಗೆಯಲ್ಲಿ ಕನ್ನಡಪರ ಘೋಷಣೆಗಳು ಅಗ್ರಸ್ಥಾನ ಪಡೆದಿದ್ದವು.

ಚಿತ್ರಕಲಾ ಪ್ರದರ್ಶನ

ಚಿತ್ರಕಲಾ ಪ್ರದರ್ಶನ

ಡೊಳ್ಳು ಕುಣಿತ, ಗೊಂಬೆ ಕುಣಿತ, ಹುಲಿವೇಷ, ಬಾರಿಸು ಕನ್ನಡ ಡಿಂಡಿಮವ ನೃತ್ಯ, ಕರ್ನಾಟಕ ವಾದ್ಯ ಸಂಗೀತ, ಹಿಂದೂಸ್ಥಾನಿ ಸಂಗೀತ, ದಾಸರ ಪದಗಳು, ಜಾನಪದ ಗೀತೆ, ಸಾಮೂಹಿಕ ನೃತ್ಯ, ಯಕ್ಷಗಾನ, ಬಯಲಾಟ ಹಾಗೂ ಚಿತ್ರಕಲಾವಿದ ಜಿ.ಬಿ. ಘಾಟಗೆ ಅವರ ಪರಿಸರ ಚಿತ್ರಕಲಾ ಪ್ರದರ್ಶನ ನಡೆಯಿತು.

English summary
Medical students at Karnataka Institute of Medical Sciences were participating in ‘Kannada Habba’ in association with Kannada and Culture on July 7 and 8. Students organize different types of cultural programs like folk, dance, songs, etc at KIMS auditorium.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X