ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿಯಲ್ಲಿ ಭಾರೀ ಮಳೆ, ಮತದಾನಕ್ಕೆ ತೊಂದರೆ

|
Google Oneindia Kannada News

ಹುಬ್ಬಳ್ಳಿ, ಮೇ 12 : ಹುಬ್ಬಳ್ಳಿಯಲ್ಲಿ ಭಾರೀ ಮಳೆ ಆರಂಭವಾಗಿದ್ದು, ಮತದಾನಕ್ಕೆ ತೊಂದರೆ ಆಗಿದೆ. ಧಾರವಾಡ ಜಿಲ್ಲೆಯಲ್ಲಿ ಮಧ್ಯಾಹ್ನ 3 ಗಂಟೆಯ ತನಕ ಶೇ 52 ರಷ್ಟು ಮತದಾನ ವಾಗಿದೆ.

ಶನಿವಾರ ಮಧ್ಯಾಹ್ನ 3 ಗಂಟೆಯ ವೇಳೆಗೆ ಹುಬ್ಬಳ್ಳಿಯಲ್ಲಿ ಮಳೆ ಆರಂಭವಾಗಿದೆ. ಮಳೆ, ಗಾಳಿಯಿಂದಾಗಿ ಮತದಾನಕ್ಕೆ ಬರಲು ಜನರಿಗೆ ತೊಂದರೆ ಉಂಟಾಗಿದೆ.

LIVE: ಕರ್ನಾಟಕ ಚುನಾವಣೆ: ಇದುವರೆಗೂ ಶೇ.56 ರಷ್ಟು ಮತದಾನ ದಾಖಲೆLIVE: ಕರ್ನಾಟಕ ಚುನಾವಣೆ: ಇದುವರೆಗೂ ಶೇ.56 ರಷ್ಟು ಮತದಾನ ದಾಖಲೆ

ಹುಬ್ಬಳ್ಳಿ-ಧಾರವಾಡ ಪೂರ್ವ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್, ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮಳೆಯಾಗುತ್ತಿದೆ. ಸಂಜೆ 6ಗಂಟೆಯ ತನಕ ಮತದಾನ ಮಾಡಲು ಅವಕಾಶವಿದೆ.

Karnataka elections : Heavy rain in Hubballi

In Pics: ಕರ್ನಾಟಕದ ಭವ್ಯ ಭವಿತವ್ಯಕ್ಕಾಗಿ ಮತದಾನದ ಯಜ್ಞ

ಮಳೆಯಿಂದಾಗಿ ಮತಗಟ್ಟೆಗೆ ಜನರು ಬರಲು ತೊಂದರೆಯಾಗುತ್ತಿದೆ. ಮತದಾನಕ್ಕೆ ಹೆಚ್ಚಿನ ತೊಂದರೆ ಆದರೆ ಮತದಾನ ಮಾಡುವ ಸಮಯವನ್ನು ಚುನಾವಣಾ ಆಯೋಗ ವಿಸ್ತರಣೆ ಮಾಡುವ ಸಾಧ್ಯತೆ ಇದೆ.

ಧಾರವಾಡ ಜಿಲ್ಲೆಯಲ್ಲಿ ಬೆಳಗ್ಗೆ 9ಕ್ಕೆ ಶೇ 10, 11ಗಂಟೆಗೆ ಶೇ 23, 1 ಗಂಟೆಗೆ ಶೇ 37, ಮಧ್ಯಾಹ್ನ 3 ಗಂಟೆ ವೇಳೆಗೆ ಶೇ 52ರಷ್ಟು ಮತದಾನವಾಗಿದೆ.

ಕಲಬುರಗಿಯಲ್ಲೂ ಮಳೆ : ಅತ್ತ ಕಬಲಬುರಗಿ ಜಿಲ್ಲೆಯಲ್ಲಿಯೂ ಸಹ ಬಿರುಗಾಳಿ ಸಹಿತ ಮಳೆಯಾಗುತ್ತಿದ್ದು, ಮತದಾನಕ್ಕೆ ಕೊಂಚ ಅಡಚಣೆ ಉಂಟಾಗಿದೆ.

English summary
Karnataka elections 2018: Several parts of the Hubballi city witnessed heavy rainfall on May 12, 2018 evening. Voting process disrupted because of rain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X