• search
  • Live TV
ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯ ಕಾಂಗ್ರೆಸ್‌ನಲ್ಲಿ ಮೂರು ಪವರ್ ಸೆಂಟರ್‌ಗಳಿವೆ; ಹುಬ್ಬಳ್ಳಿಯಲ್ಲಿ ಶೆಟ್ಟರ್ ವ್ಯಂಗ್ಯ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ನವೆಂಬರ್‌, 13: ದೇಶದಲ್ಲಿ ಕಾಂಗ್ರೆಸ್ ಹೆಸರು ಹೇಳದಷ್ಟು ಅಧೋಗತಿಗೆ ಹೋಗಿದೆ. ಕಾಂಗ್ರೆಸ್‌ ಭವಿಷ್ಯ ಇಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹುಬ್ಬಳ್ಳಿಯಲ್ಲಿ ವ್ಯಂಗ್ಯವಾಡಿದರು. ಹಾಗೆಯೇ ಕರ್ನಾಟಕದಲ್ಲೂ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳಲಿದ್ದು, ಯಾವುದೇ ಕಾರಣಕ್ಕೋಸ್ಕರ ಜನರು ಕಾಂಗ್ರೆಸ್ ಅನ್ನು ನಂಬುವುದಿಲ್ಲ. ಆದ್ದರಿಂದ ಈಗ ಕಾಂಗ್ರೆಸ್ ಒಡೆದ ಮನೆಯಾಗಿದೆ.

ಮೊದಲು ಕಾಂಗ್ರೆಸ್‌ನಲ್ಲಿ ಎರಡು ಪವರ್ ಸೆಂಟರ್ ಇತ್ತು. ಇವಾಗ ಮೂರು ಪವರ್ ಸೆಂಟರ್ ಆಗಿವೆ. ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್ ಸೇರಿ ಮೂರು ಪವರ್ ಸೆಂಟರ್ ಆಗಿವೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.

Breaking: ನ.14ಕ್ಕೆ ವಿಚಾರಣೆಗೆ ಹಾಜರಾಗುವಂತೆ ಡಿಕೆಶಿಗೆ ಇಡಿ ಸಮನ್ಸ್Breaking: ನ.14ಕ್ಕೆ ವಿಚಾರಣೆಗೆ ಹಾಜರಾಗುವಂತೆ ಡಿಕೆಶಿಗೆ ಇಡಿ ಸಮನ್ಸ್

ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್‌ನವರು ಟಿಕೆಟ್‌ಗಾಗಿ ಮಲ್ಲಿಕಾರ್ಜುನ ಖರ್ಗೆ ಅವರ ಮನೆಗೆ ಹೋಗುತ್ತಿದಾರೆ. "ಈಗ ಕಾಂಗ್ರೆಸ್‌ನಲ್ಲಿ ಮತ್ತೊಂದು ಪವರ್ ಸೆಂಟರ್‌ನ ಮಹತ್ವ ಆಗಿದ್ದು, ಪವರ್ ಸೆಂಟರ್‌ಗಳಿಂದಲೇ ಕಾಂಗ್ರೆಸ್ ಅಧೋಗತಿಗೆ ಹೋಗುತ್ತದೆ. ಚುನಾವಣೆ ಬರುವ ಮುಂಚೆಯೇ ಸಿದ್ದರಾಮಯ್ಯ ಎಲ್ಲಿ ಚೇಂಜ್ ಮಾಡುತ್ತಾರೆಯೋ ಗೊತ್ತಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರದಲ್ಲಿ ನಿಲ್ಲಲ್ಲಿ ಅಥವಾ ಬದಾಮಿಯಲ್ಲಿ ನಿಲ್ಲಲಿ, ಅದು ಅವರಿಗೆ ಬಿಟ್ಟಿರುವ ವಿಚಾರವಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವ ಕ್ಷೇತ್ರದಲ್ಲಿ ಆದರೂ ಸ್ಪರ್ಧೆ ಮಾಡಲಿ. ಆದರೆ ಸ್ವತಂತ್ರರು‌ ಅದು ಏನೇ ಆಗಲಿ ಕೋಲಾರದಲ್ಲಿ ಪಕ್ಷದ ಸ್ಥಿತಿ ಏನಾಗಿದೆ ಅನ್ನುವುದನ್ನು ಅರ್ಥಮಾಡಿಕೊಳ್ಳಲಿ. ಅದಕ್ಕೆ ಅವರು ಸಹ ಯೋಚನೆ ಮಾಡಲು ಸಮರ್ಥರು ಇದ್ದಾರೆ ಎಂದರು.

ಸಿದ್ದರಾಮಯ್ಯ ವಿರುದ್ಧ ಶೆಟ್ಟರ್‌ ವಾಗ್ದಾಳಿ

ಸಿದ್ದರಾಮಯ್ಯ ವಿರುದ್ಧ ಶೆಟ್ಟರ್‌ ವಾಗ್ದಾಳಿ

ಸ್ಪರ್ಧೆಗೆ ನಿಲ್ಲುವುದಾದರೆ ಅಲ್ಲಿ ನಿಲ್ಲಲಿ, ಅದು ಅವರಿಗೆ ಬಿಟ್ಟಿರುವ ವಿಚಾರ. ಈ ಕುರಿತು ನಾನು ಹೆಚ್ಚಿಗೆ ಏನು ಹೇಳುವುದಿಲ್ಲ. ಬಾದಾಮಿಯಲ್ಲಿ 500,1000 ವೋಟ್‌ನಿಂದ ಆರಿಸಿ ಬಂದವರಾಗಿದ್ದರು. ಆದರೆ ಮೈಸೂರು ಜಿಲ್ಲೆಯ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಜನ ಸಿದ್ದರಾಮಯ್ಯ ಅವರನ್ನು ರಿಜೆಕ್ಟ್ ಮಾಡಿದ್ದರು. ಇದು ಸಹ ಬಾದಾಮಿಯಲ್ಲಿ ಸಿದ್ದರಾಮಯ್ಯ ಗೆದ್ದರೂ ಸೋತಂತೆ. ರಾಜ್ಯದಲ್ಲಿ ಐದು ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ಮಾಡಿದವರಿಗೆ ಹೆದರಿಕೆ ಇದೆ ಅಂದರೆ, ಅವರ ವ್ಯಕ್ತಿತ್ವ ಅರ್ಥ ಆಗತ್ತದೆ. ಇದು ಅವರ ಅಸಮರ್ಥತೆಯನ್ನು ತಿಳಿಸಿಕೊಡುತ್ತದೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಅಧಿಕಾರದ ಬಗ್ಗೆ ಶೆಟ್ಟರ್‌ ವಿಶ್ವಾಸ

ಬಿಜೆಪಿ ಅಧಿಕಾರದ ಬಗ್ಗೆ ಶೆಟ್ಟರ್‌ ವಿಶ್ವಾಸ

ಭಾರತೀಯ ಜನತಾ ಪಕ್ಷ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಈ ನಾಡಿನ ಜನತೆಗೆ ಕೊಟ್ಟಿದೆ.‌ ಇದರಿಂದ ರಾಜ್ಯದಲ್ಲಿ ಅಭಿವೃದ್ಧಿ ಪರ್ವ ನಡೆದಿದ್ದು, ಮುಂದಿನ ಚುನಾಚಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ವಿರುದ್ಧ ಜೋಶಿ ಆಕ್ರೋಶ

ಸಿದ್ದರಾಮಯ್ಯ ವಿರುದ್ಧ ಜೋಶಿ ಆಕ್ರೋಶ

ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಕೆಲಸ ಮಾಡಲಿಲ್ಲ. ಜನರು ಅವರನ್ನು ಸೋಲಿಸಿ ಮನೆಗೆ ಕಳುಹಿಸಿದ್ದರು. ಬಾದಾಮಿಯಲ್ಲಿ ಏನು ಪುಣ್ಯ ಇತ್ತೋ ಆರಿಸಿ ಬಂದಿದ್ದರು. ದೊಡ್ಡ ನಾಯಕರಗಾಗಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಆಗಿ ಕೆಲಸ ಮಾಡಿದವರು ಅಲ್ಲಿ ಗೆದ್ದರು. ಸಿದ್ದರಾಮಯ್ಯ ಎಲ್ಲಿ ಹೋದರೂ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲ್ಲ. ಹೀಗಾಗಿ ಅವರು ಪ್ರತಿ‌ ಬಾರಿ ಅಲೆದಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವ್ಯಂಗ್ಯವಾಡಿದರು.

ಸಿದ್ದರಾಮಯ್ಯನನ್ನು ಸೋಲಿಸಲು ಹೇಳುತ್ತೇನೆ

ಸಿದ್ದರಾಮಯ್ಯನನ್ನು ಸೋಲಿಸಲು ಹೇಳುತ್ತೇನೆ

ಈ ಬಾರಿ ಕೋಲಾರಕ್ಕೆ ಹೋಗಿದ್ದಾರೆ. ನಾನು ಕೋಲಾರದವರಿಗೆ ಹೇಳುತ್ತೇನೆ, ಚಾಮುಂಡೇಶ್ವರಿಯಲ್ಲಿ ಏನು ಮಾಡಿದಾರೆ? ಬಾದಾಮಿಯಲ್ಲಿ ಏನು ಮಾಡಿದ್ದಾರೆ ಕೇಳಿ ಅಂತಾ ಹೇಳುತ್ತೇನೆ. ಅವರನ್ನು ಸೋಲಿಸಿ ಮನೆಗೆ ಕಳುಹಿಸಿಸಿ ಎಂದು ಇವತ್ತೇ ನಾನು ಹೇಳುತ್ತೇನೆ ಎಂದು ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ವಿಚಾರವಾಗಿ ಜೋಶಿ ಪ್ರತಿಕ್ರಿಯಿಸಿದರು. ಹಾಗೆಯೇ ಸಿದ್ದರಾಮಯ್ಯ ಇನ್ನು ಸ್ವಲ್ಪ ದಿನದಲ್ಲಿ ಯಾವ ಪಾರ್ಟಿಗೆ ಹೋಗುತ್ತಾರೆ ನೋಡೋಣ ಎಂದರು.

ಸಿದ್ದರಾಮಯ್ಯ
Know all about
ಸಿದ್ದರಾಮಯ್ಯ
English summary
Jagdish Shettar said in Hubballi there are Siddaramaiah, DK Shivakumar and Mallikarjuna Khar three power centers in state Congress Hubballi, know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X