Get Updates
Get notified of breaking news, exclusive insights, and must-see stories!

ಆಫ್ರಿಕಾದ ಅತೀ ದೊಡ್ಡ ಕಿಲಿಮಾಂಜರೋ ಶಿಖರದ ಮೇಲೆ ಭಾರತದ ತ್ರಿವರ್ಣ ಧ್ವಜ ಹಾರಿಸಿದ ಕನ್ನಡಿಗ

ಹುಬ್ಬಳ್ಳಿ, ಸೆಪ್ಟೆಂಬರ್‌, 09: ವಯಸ್ಸಾಯಿತು ಇನ್ನೇನು ಸಾಧನೆ ಮಾಡಲು ಸಾಧ್ಯ ಎಂದು ಅಂದುಕೊಳ್ಳುವವರಿಗ ಈ ವ್ಯಕ್ತಿಯ ಜೀವನ ಚರಿತ್ರೆಯನ್ನು ಒಮ್ಮೆ ಓದಲೇ ಬೇಕು. ಹುಬ್ಬಳ್ಳಿ ನಿವಾಸಿ ಗಿರೀಶ್‌ ಹುಲ್ಲೂರ ಅವರು ಐವತ್ತರ ವಯಸ್ಸಿನಲ್ಲೂ ಆಫ್ರಿಕಾದ ಅತೀ ದೊಡ್ಡ ಕಿಲಿಮಾಂಜರೋ ಪರ್ವತವನ್ನು ಯಶಸ್ವಿಯಾಗಿ ಏರಿದ್ದು, ಇದೀಗ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.

ಅಷ್ಟೇ ಅಲ್ಲದೇ ಈ ಸಾಹಸಿ ಕನ್ನಡಿಗ ಶಿಖರದ ತುತ್ತ ತುದಿಯಲ್ಲಿ ದೇಶದ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ. ಹೀಗೆ ದಕ್ಷಿಣ ಆಫ್ರಿಕಾ ದೇಶದ ಶಿಖರದ ಮೇಲೆ ನಮ್ಮ ಭಾರತ ದೇಶದ ತ್ರಿವರ್ಣ ಧ್ವಜವನ್ನು ಹಾರಿಸುತ್ತಿರುವ ಇವರ ಹೆಸರು ಗಿರೀಶ ಹುಲ್ಲೂರು. ಮೂಲತಃ ಇವರು ಹುಬ್ಬಳ್ಳಿಯವರಾಗಿದ್ದಾರೆ. 75ನೇ ಅಮೃತ ಮಹೋತ್ಸವದ ಅಂಗವಾಗಿ, ವಿಶ್ವದಲ್ಲೇ ಅತಿ ಎತ್ತರದಲ್ಲಿರುವ ಕಿಲಿಮಾಂಜರೋ ಪರ್ವತದ ಮೇಲೆ ಹರ್ ಘರ್ ತಿರಂಗಾವನ್ನು ಹಾರಿಸುವ ಮೂಲಕ ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಹೆಮ್ಮೆ ತಂದಿದ್ದಾರೆ.

ಇನ್ನು ಗಿರೀಶ್‌ ಹುಲ್ಲೂರ ಅವರು ದೇಶ ಪ್ರೇಮದ ಜೊತೆಗೆ ಪರಿಸರ ಪ್ರೇಮಿಯೂ ಆಗಿದ್ದಾರೆ. ಇವರು ಬೈಕ್ ರೈಡ್ ಮೂಲಕ ಪಯಣ ಆರಂಭಿಸಿದ್ದು, ತಾಂಜಾನಿಯಾದ ಮಳೆ ಕಾಡಿನ ಮೂಲಕ ಆಗಸ್ಟ್ 13ರಿಂದ ಪರ್ವತಾರೋಹಣ ಆರಂಭ ಮಾಡಿದ್ದರು. ಆಗಸ್ಟ್ 19ರ ಬೆಳಗ್ಗೆ 7:45ಕ್ಕೆ ಪರ್ವತದ ತುತ್ತ ತುದಿಗೆ ತಲುಪಿ, ನಮ್ಮ ದೇಶದ ಧ್ವಜವನ್ನು ಹಾರಿಸಿದ್ದಾರೆ.

 ಗಿರೀಶ್‌ ಸಾಧನೆಗೆ ಅಭಿನಂದನೆಗಳ ಮಹಾಪೂರ

ಗಿರೀಶ್‌ ಸಾಧನೆಗೆ ಅಭಿನಂದನೆಗಳ ಮಹಾಪೂರ

ಐವತ್ತರ ವಯಸ್ಸಿನಲ್ಲೂ ಈ ರೀತಿ ಸಾಧನೆ ಮಾಡಿದ ಗಿರೀಶ್ ಅವರಿಗೆ ಎಲ್ಲೆಡೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಹಾಗೂ ಗಿರೀಶ್‌ ಸಾಧನೆಗೆ ಅವರ ಕುಟುಂಬದ ಸದಸ್ಯರು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಮೊದಲಿನಿಂದಲೂ ಏನಾದರೂ ಸಾಧನೆ ಮಾಡಬೇಕು ಎಂಬ ಹಂಬಲ ಗಿರೀಶ್ ಅವರದ್ದಾಗಿತ್ತು.

 ಕೊನೆಗೂ ಕಂಡ ಕನಸ್ಸಿನಂತೆ ಸಾಧನೆ

ಕೊನೆಗೂ ಕಂಡ ಕನಸ್ಸಿನಂತೆ ಸಾಧನೆ

ಅವರು ಯಾವಾಗಲೂ ಹೊಸತನದ ಬಗ್ಗೆ ಚಿಂತೆ ಮಾಡುತ್ತಿದ್ದು, ಸಾಧನೆ ಮಾಡಲು ಹಾತೊರೆಯುತ್ತಿದ್ದರು. ಇದೇ ವೇಳೆ ಅವರಿಗೆ ನೆನಪಾಗಿದ್ದು ಸ್ವಾತಂತ್ರ್ಯ ಅಮೃತ ಮಹೋತ್ಸವ. 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ವಿಭಿನ್ನ ಹಾಗೂ ಅದ್ಭುತ ರೀತಿಯಲ್ಲಿ ಆಚರಣೆ ಮಾಡಬೇಕು. ನಮ್ಮ ದೇಶದ ತಿರಂಗಾ ಧ್ವಜವನ್ನು ತುಂಬಾ ಎತ್ತರದಲ್ಲಿ ಹಾರಿಸಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಗಿರೀಶ್ ಅವರು ಪಣ ತೊಟ್ಟಿದ್ದಾರು. ಇದೀಗ ಕಂಡ ಕನಸ್ಸನ್ನ ನನಸು ಮಾಡಿಕೊಂಡಿದ್ದು, ವಿಶ್ವದ ಅತೀ ಎತ್ತರದ ಪರ್ವತ ಕಿಲಿಮಾಂಜರೋ ಪರ್ವತವನ್ನು ಏರಿದ್ದಾರೆ.

 ಅಣ್ಣನ ಸಾಧನೆಗೆ ಸಹೋದರಿಯ ಪ್ರತಿಕ್ರಿಯೆ

ಅಣ್ಣನ ಸಾಧನೆಗೆ ಸಹೋದರಿಯ ಪ್ರತಿಕ್ರಿಯೆ

ಬಹಳ ಪ್ರಿತೀಯ ಹಾಗೂ ಹೆಮ್ಮೆಯ ಅಣ್ಣ ಎಂದು ಹೇಳಲು ನನಗೆ ಬಹಳ ಸಂತೋಷ ಆಗುತ್ತದೆ ಎಂದು ಗಿರೀಶ್ ಹುಲ್ಲೂರು ಅವರ ಸಹೋದರಿ ಸುಹಾಸಿನಿ ದೇಸಾಯಿ ಅವರು ಅಭಿಪ್ರಾಯವನ್ನು ಹೊರಹಾಕಿದ್ದಾರೆ. ವೃತ್ತಿ ಹಾಗೂ ಪ್ರವೃತ್ತಿಯನ್ನು ಸೂಕ್ತವಾಗಿ ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ. ಅವರು ಬ್ಯಾಂಕ್ ವೃತ್ತಿಯಲ್ಲಿ ಇದ್ದರೂ ಕೂಡ ಸಾಹಸಿ ಪ್ರವೃತ್ತಿಯನ್ನು ಕೈಬಿಟ್ಟಿಲ್ಲ. ಕಳೆದ 25 ವರ್ಷಗಳಿಂದ ಬಹಳ ವಿಶಿಷ್ಟ ಹಾಗೂ ವಿಭಿನ್ನ ರೀತಿಯಲ್ಲಿ ಸಾಧನೆಯನ್ನು ಮಾಡುತ್ತಾ ಬಂದಿದ್ದಾರೆ ಎಂದು ಸುಹಾಸಿನಿ ದೇಸಾಯಿ ಅವರು ತಮ್ಮ ಅಣ್ಣನ ಸಾಧನೆ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡರು.

 ತಮ್ಮ ಸಾಧನೆ ಬಗ್ಗೆ ಗಿರೀಶ್‌ ಹೇಳಿದ್ದೇನು?

ತಮ್ಮ ಸಾಧನೆ ಬಗ್ಗೆ ಗಿರೀಶ್‌ ಹೇಳಿದ್ದೇನು?

40 ದಾಟಿದರೆ ಸಾಕು ನಮ್ಮ ವಯಸ್ಸು ಮುಗಿಯಿತು ಅನ್ನುವ ಈ ಜಾಯಮಾನದಲ್ಲಿ, 50ರ ಹರೆಯದಲ್ಲೂ ಅದ್ಭುತ ಸಾಧನೆಗೈದ ಗಿರೀಶ್‌ ಅವರು ಇಡಿ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಇವರ ಸಾಧನೆಯ ಮೆಟ್ಟಿಲು ಇಂದಿನ ಯುವ ಜನತೆಗೆ ಮಾದರಿ ಆಗಿದೆ. ಹೀಗೆ ಪರ್ವತಾರೋಹಣ ಮಾಡಿ, ಮಕ್ಕಳನ್ನು ಗ್ಯಾಜೆಟ್ ಪ್ರಿಯರನ್ನಾಗಿ ಮಾಡುವ ಬದಲು ಪರಿಸರದ ಬಗ್ಗೆ ಒಲವು ಬೆಳೆಸಿಕೊಳ್ಳಲು ಪೋಷಕರು ಪ್ರೇರೇಪಿಸಬೇಕು ಎಂದು ಗಿರೀಶ್‌ ಅವರು ಸಂದೇಶ ಸಾರಿದ್ದಾರೆ. ಹಾಗೂ ಹುಬ್ಬಳ್ಳಿಯಲ್ಲಿ ಗಿರೀಶ್ ಅವರಿಗೆ ಜನರು ಸರದಿಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+