ಜಲ್ಲಿಕಟ್ಟಿಗೆ ಸುಗ್ರೀವಾಜ್ಞೆ: ಜ.23ರಿಂದ ಕಳಸಾ-ಬಂಡೂರಿ ಹೋರಾಟ ಶುರು

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಜನವರಿ, 22 : ಜಲ್ಲಿಕಟ್ಟಿಗೆ ಸುಗ್ರೀವಾಜ್ಞೆ ಹೊರಡಿಸಿದ ಬೆನ್ನಲ್ಲೇ ಕಳಸಾ-ಬಂಡೂರಿ ಹೋರಾಟ ಸಮಿತಿ ಮತ್ತೆ ಹೋರಾಟದ ಹಾದಿ ತುಳಿಯಲಿದೆ. ಜನವರಿ 23 ರಿಂದ ಮತ್ತೆ ಹೋರಾಟವನ್ನು ಆರಂಭಿಸಲಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಕಳಸಾ-ಬಂಡೂರಿ ಹೋರಾಟ ಸಮಿತಿಯ ಅಧ್ಯಕ್ಷ ಸಲೀಂ ಸಂಗನಮುಲ್ಲಾ, ನಾಲ್ಕು ಜಿಲ್ಲೆಯ 9 ತಾಲೂಕಿನ ಹೋರಾಟಗಾರರು ನೀರಿನ ಬೇಡಿಕೆಯನ್ನು ಮುಂದಿಟ್ಟಿಕೊಂಡು ಜನವರಿ 23ರಂದು ಮತ್ತೆ ಹೋರಾಟ ಮಾಡಲಿದ್ದೇವೆ[ಮಹದಾಯಿ ವಿವಾದ : ಮತ್ತೆ ಅರ್ಜಿ ಸಲ್ಲಿಸಲು ರಾಜ್ಯಕ್ಕೆ ಅನುಮತಿ]

ಫೆಬ್ರವರಿ ಕೊನೆಯ ವಾರದೊಳಗಾಗಿ ಮಹದಾಯಿ ನೀರಿನ ವಿವಾದವನ್ನು ಬಗೆ ಹರಿಸಿಕೊಡಬೇಕು. ಇಲ್ಲದಿದ್ದರೆ ಮಾರ್ಚ 1ರಿಂದ ಇಡೀ ರಾಜ್ಯದ ಕೇಂದ್ರ ಸರಕಾರ ಕಚೇರಿಗಳಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದ್ದಾರೆ.

Kalasa-Banduri Horata Samiti will be protest on January 23

ಮಹದಾಯಿ ಹೋರಾಟಗಾರರ ಮೇಲೆ ಹಾಕಿದ ಕೇಸುಗಳನ್ನು ತಕ್ಷಣ ಹಿಂಪಡೆಯಬೇಕು. ವಿಳಂಬ ಮಾಡಿದರೆ ಅಥವಾ ಉತ್ತರ ಕರ್ನಾಟಕದ ಜನರಿಗೆ ಅನ್ಯಾಯ ಮಾಡಿದರೆ ಸಹಿಸುವುದಿಲ್ಲ.

ಕಾವೇರಿ ನೀರಿನ ವಿವಾದ ದಂಗೆಯಾದರೆ ಅಲ್ಲಿಯ ಹೋರಾಟಗಾರರ ಮೇಲಿರುವ ಕೇಸು ಸರಕಾರ ಹಿಂದಕ್ಕೆ ಪಡೆದುಕೊಳ್ಳುತ್ತದೆ. ಆದರೆ, ಮಹದಾಯಿ ವಿಷಯ ಬಂದಾಗ ನಿರ್ಲಕ್ಷ್ಯ ಏಕೆ ಎಂದು ಪ್ರಶ್ನಿಸಿದರು.

ಹಾಕಿ ಹೋರಾಟಗಾರರ ಮೇಲಿನ ಕೇಸುಗಳನ್ನು ವಾಪಸ್ ಪಡೆಯುವಂತೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಸರಕಾರದ ಮೇಲೆ ಒತ್ತಡ ಹಾಕಬೇಕು.

ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೋರಾಟದಲ್ಲಿ ಭಾಗವಹಿಸಬೇಕು ಎಂದು ಹೇಳಿದರು.

ಕೇಂದ್ರ ಸರಕಾರಕ್ಕೆ ಎಚ್ಚರಿಕೆ: ಮಹಾದಾಯಿ ಕಳಸಾ- ಬಂಡೂರಿ ನೀರಿನ ಹೋರಾಟದ ವಿಷಯಲ್ಲಿ ಕೇಂದ್ರ ಸರಕಾರ ತನ್ನ ಜವಾಬ್ದಾರಿಯನ್ನು ಮರೆತು ಉತ್ತರ ಕರ್ನಾಟಕದ 1.50 ಕೋಟಿ ಜನರ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆ ಹರಿಸುವಲ್ಲಿ ವಿಫಲವಾಗಿದೆ.

ಪ್ರಧಾನ ಮಂತ್ರಿ ಮೋದಿಯವರು ಸುಮಾರು 5ರಿಂದ 6ಸಲ ರಾಜ್ಯಕ್ಕೆ ಭೇಟಿ ಕೊಟ್ಟಿದ್ದರೂ ಸಹ ಒಂದು ನಿಮಿಷ ಮಹಾದಾಯಿ ಬಗ್ಗೆ ಮಾತನಾಡಲಿಲ್ಲ. ಮಾರ್ಚ 15 ರಂದು ದಿಲ್ಲಿ ಚಲೋ ಹಮ್ಮಿಕೊಳ್ಳಲಾಗುವುದು ಎಂದು ಸಂಗನಮುಲ್ಲಾ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After the success of Jallikattu, now Kalasa-Banduri Horata Samiti start protest mahadayi issue on January 23.
Please Wait while comments are loading...