ಹುಬ್ಬಳ್ಳಿ: ದಯಾ ಮರಣ ಕೋರಿ 500 ರೈತರಿಂದ ರಾಷ್ಟ್ರಪತಿಗೆ ಅರ್ಜಿ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಫೆಬ್ರವರಿ, 9: ಮಹದಾಯಿ ಮತ್ತು ಕಳಸಾ-ಬಂಡೂರಿ ಹೋರಾಟಗಾರರ ಒಕ್ಕೂಟದ 500 ರೈತರು ರಾಷ್ಟ್ರಪತಿಗೆ ದಯಾಮರಣಕ್ಕಾಗಿ ಅರ್ಜಿ ಸಲ್ಲಿಸಲು ನಿರ್ಧರಿದ್ದಾರೆ. ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ಸರಕಾರ ಸ್ಪಂದಿಸುತ್ತಿಲ್ಲ ಎಂಬುದು ಈ ಹೋರಾಟಗಾರರ ಆರೋಪವಾಗಿದೆ.

ಇಂದು (ಫೆ. 9) ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ರೈತರು ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆ ಜಾರಿಗೆ ತರಬೇಕೆಂದು ಆಗ್ರಹಿಸಿದರು. ನವಲಗುಂದ ತಾಲೂಕಿನಿಂದ ಆಗಮಿಸಿದ್ದ ಹೋರಾಟಗಾರರು ನಮ್ಮನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಡೆಗಣಿಸುತ್ತಿವೆ ಎಂದು ಆರೋಪಿಸಿದರು.[ಕಪ್ಪತಗುಡ್ಡ ರಕ್ಷಣೆಗೆ ಫೆ. 13 ರಿಂದ ಅಹೋರಾತ್ರಿ ಧರಣಿ: ಎಸ್ ಆರ್. ಹಿರೇಮಠ್]

Kalasa banduri: 500 Farmers will send request letter to President for euthanasia

ನಮ್ಮ ಬೇಡಿಕೆ ಈಡೇರಿಸದೇ ಹೋದಲ್ಲಿ ದಯಾಮರಣಕ್ಕಾಗಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೋರಾಟಗಾರರು ಹೇಳಿದರು. ಮಾತ್ರವಲ್ಲದೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಲೋಕನಾಥ ಹೆಬಸೂರು, ಸುಭಾಶ ಚಂದ್ರಗೌಡ ಸೇರಿದಂತೆ ಇನ್ನಿತರರು ದಯಾಮರಣಕ್ಕಾಗಿ ಅರ್ಜಿ ಸಲ್ಲಿಸುವುದಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದರು.[ವಿದ್ಯಾರ್ಥಿಯ ತಲೆ ಬೋಳಿಸಿ ಕ್ರೌರ್ಯ ಮೆರೆದ ಹುಬ್ಬಳ್ಳಿ ಮುಖ್ಯ ಶಿಕ್ಷಕಿ]

(ಚಿತ್ರ ಕೃಪೆ: ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mahadayi and Kalasa Banduri protesters warned central and state government that they will send letter to president for seeking permission to euthanasia.
Please Wait while comments are loading...