Tirupati Laddu Row: ಪಾವಿತ್ರ್ಯಕ್ಕೆ ಧಕ್ಕೆ ತಂದವರಿಗೆ ಕ್ಷಮಾಪಣೆ ಇಲ್ಲ, ಕೆಟ್ಟ ರಾಜಕೀಯ ಬೇಡ: ಜೈನ ಮುನಿ ಗಣನಂದಿ ಮಹಾರಾಜ
ಹುಬ್ಬಳ್ಳಿ, ಸೆಪ್ಟಂಬರ್ 22: ದೇಶದೆಲ್ಲಡೆ ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ ಮೀನಿನ ಎಣ್ಣೆ, ಪ್ರಾಣಿಗಳ ಕೊಬ್ಬು ಬಳಕೆ ವಿಚಾರ ವರೂರಿನ ಪ್ರಸಿದ್ಧ ಜೈನ್ ಮಂದಿರದ ಜೈನ್ ಮುನಿ ಗಣನಂದಿ ಮಹಾರಾಜರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಾಡುವಿನಲ್ಲಿ ದನದ ಮಾಂಸ ಬೆರಿಸಿರುವವರ ಮೇಲೆ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಭಾನುವಾರ ಸುದ್ದಿಗಾರರ ಜೊತೆಗೆ ಮಾತನಾಡಿದರು, ತಿರುಪತಿಯಲ್ಲಿ ಲಾಡುವಿನಲ್ಲಿ ಮಾಂಸ ಮಿಶ್ರಣ ಕುರಿತ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಲಾಡುವಿನಲ್ಲಿ ಏನಾದರೂ ಮಾಂಸ, ಚರ್ಬಿ ಬೇರೆಕೆ ಮಾಡಿದ್ದರೆ ಖಂಡಿತವಾಗಿಯೂ ಶಿಕ್ಷೆ ಆಗಬೇಕು. ಕಾನೂನು ಪ್ರಕಾರ ದಂಡ ಹಾಕಬೇಕು.

ತಿರುಮಲ ದೇವಸ್ಥಾನ ಒಂದು ಒಳ್ಳೆಯ ದೇವಸ್ಥಾನ ಇಂತಹ ಪವಿತ್ರವಾದ ಸ್ಥಳದಲ್ಲಿ ಈ ರೀತಿಯಾಗಿ ಮಾಡುವುದು ಸರಿಯಲ್ಲ. ಭಕ್ತರಿಗೆ ಹಂಚುವ ಲಾಡುವಿನಲ್ಲಿ ಮಾಂಸದ ಚರ್ಬಿ ಹಾಗೂ ಹಂದಿ ಬಿಸಿ ಮಾಂಸ ಬೆರೆಕೆ ಸರಿಯಲ್ಲ. ಈ ರೀತಿಯಲ್ಲಿ ಮಾಡುವವರ ವಿರುದ್ಧ ಯಾವುದೇ ರೀತಿಯ ಕ್ಷಮಾಪಣೆಯೇ ಇಲ್ಲ ಎಂದು ಹೇಳಿದರು. ಕಾನೂನಿನ ಅನ್ವಯ ಕಠಿಣ ಕ್ರಮ ಆಗಲಿ ಎಂದು ನಾವು ಕೂಡ ಮುಂದೆ ಹೋರಾಟ ನಡೆಸುತ್ತೇವೆ. ದೇವಾಲಯಕ್ಕೆ ಸಂಬಂಧಿಸಿದಂತೆ ಆರ್ಥಿಕ ಸಮೃದ್ಧಿ ಇದ್ದರೂ ಸಹ ಯಾಕೆ ಹೀಗೆಲ್ಲ ಮಾಡಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಯಡಿಯೂರಪ್ಪ, ಸಿದ್ದರಾಮಯ್ಯ ಮೇಲಿನ ಆರೋಪ ಸರಿಯಲ್ಲ
ಇನ್ನೂ ರಾಜ್ಯ ರಾಜಕಾರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮೇಲೆ ಆರೋಪ ಸರಿಯಲ್ಲ. ಹೊಲಸು ರಾಜಕೀಯ ಮಾಡಬಾರದು ಎಂದು ಅವರು ತಿಳಿ ಹೇಳಿದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವಿರುದ್ಧ ಮುಡಾ ಹಗರಣದ ಆರೋಪ ಮಾಡುವುದು ಸರಿಯಲ್ಲ. ಅದೇ ರೀತಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮೇಲಿನ ಆರೋಪಗಳು ಸರಿಯಲ್ಲ. ಇವರು ಸಾಕಷ್ಟು ಕೆಲಸ ಮಾಡಿದ್ದಾರೆ.
ಇಷ್ಟ ವರ್ಷಗಳ ಕಾಲ ಹೋರಾಟ ಮಾಡಿದ್ದಾರೆ.
ಅವರು ಮುಪ್ಪಿನ ಕಾಲದಲ್ಲಿದ್ದಾರೆ. ಇಂತಹ ಗಳಿಗೆಯಲ್ಲಿ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ಇದೊಂದು ನಿಜಕ್ಕೂ ಬೇಸರದ ಸಂಗತಿ 70,80 ವಯಸ್ಸಿನವರ ಮೇಲೆ ಇಲ್ಲಸಲ್ಲದ ಆರೋಪ ಸರಿಯಲ್ಲ. ರಾಜಕೀಯ ಇದೆ ಆದರೆ ಹೊಲಸು ರಾಜಕಾರಣ ಮಾಡಬಾರದು ಎಂದು ಅವರು ಪುನರುಚ್ಚರಿಸಿದರು.
ವರೂರಲ್ಲಿ ಮಹಾಮಸ್ತಕಾಭಿಷೇಕ ವೆಬ್ ಸೈಟ್ ಸಿದ್ಧ
ವರೂರಿನ ದಿಗಂಬರ ಜೈನ ನವಗ್ರಹ ತೀರ್ಥಕ್ಷೇತ್ರದಲ್ಲಿ ಮುಂದಿನ ವರ್ಷ ಜನವರಿ 15 ರಿಂದ 26ರ ರವರೆಗೆ ನಡೆಯಲಿರುವ ಪಾರ್ಶ್ವನಾಥ ಭಗವಾನ್ ರ ಮಹಾಮಸ್ತಕಾಭಿಷೇಕಕ್ಕೆ ಬರುವವರ ಅನುಕೂಲಕ್ಕಾಗಿ ವೆಬ್ ಸೈಟ್ ಸಿದ್ಧಪಡಿಸಲಾಗಿದೆ ಎಂದು ಗುಣಧರನಂದಿ ಮಹಾರಾಜರು ಇದೇ ವೇಳೆ ತಿಳಿಸಿದರು.
ಭಕ್ತರಿಗಾಗಿ https://mahamasthakabhisheka2025.agmrcet.ac.in ವೆಬ್‌ಸೈಟ್ ಸಿದ್ಧಪಡಿಸಲಾಗಿದೆ. ಕಾರ್ಯಕ್ರಮ ಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಮಾಡಿರುವ ವ್ಯವಸ್ಥೆಯನ್ನು ಇಲ್ಲಿ ಅಪ್ಲೋಡ್ ಮಾಡಲಾಗುತ್ತದೆ.
ಮಹಾಮಸ್ತಕಾಭುಷೇಕ ಅಂತಾರಾರಾಷ್ಟ್ರೀಯ ಕಾರ್ಯಕ್ರಮವಾಗಿದೆ. ಇದರಲ್ಲಿ ಜೈನ ಸಾಹಿತ್ಯ ಸಮ್ಮೇಳನ, ಸಂಗೀತ ಕಾರ್ಯಕ್ರಮ, ಪಂಚ ಕಲ್ಯಾಣ ಪ್ರತಿಷ್ಠಾ ಮಹೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಲಕ್ಷಾಂತರ ಜನಬರುವ ನಿರೀಕ್ಷೆ ಇದೆ ಎಂದು ಹೇಳಿದರು.
ಬಾಕಲರು ಹೃದಯಾಘಾತದಿಂದ ಸಾವನ್ನಪ್ಪುತ್ತಿರುವುದು ಆತಂಕಕಾರಿ ಬೆಳವಣಿಗೆ. ಈ ಬಗ್ಗೆ ಅರುವು ಮೂಡಿಸುವ ಉದ್ದೇಶದಿಂದ ಶೀಘ್ರದಲ್ಲಿ ವೈದ್ಯರಿಂದ ವೆಬಿನಾರ್ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದರು.












Click it and Unblock the Notifications