ಐಪಿಎಲ್ ಬೆಟ್ಟಿಂಗ್, ಹುಬ್ಬಳ್ಳಿಯಲ್ಲಿ ಬುಕಿ ಬಂಧನ

By: ಅನುಷಾ ರವಿ
Subscribe to Oneindia Kannada

ಹುಬ್ಬಳ್ಳಿ, ಏಪ್ರಿಲ್ 14: ಐಪಿಎಲ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಬುಕಿಯೊಬ್ಬನನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ. ಕ್ರಿಕೆಟ್ ಬೆಟ್ಟಿಂಗ್ ಬಗ್ಗೆ ಖಚಿತ ಮಾಹಿತಿ ದೊರೆತಿದ್ದರಿಂತ ಪೊಲೀಸರು ರಾಘವೇಂದ್ರ ಕಬಾಡಿ ಮನೆಯಲ್ಲಿ ಶೋಧ ನಡೆಸಿದರು. ಇಲ್ಲಿನ ಗ್ರೀನ್ ಗಾರ್ಡನ್ ನಲ್ಲಿ ಪೊಲೀಸರು ದಾಳಿ ನಡೆಸಿದ ವೇಳೆ ಬುಕಿ ಸಿಕ್ಕಿಬಿದ್ದಿದ್ದಾನೆ.

ಇದೇ ವೇಳೆ ಬೆಟ್ಟಿಂಗ್ ಗಾಗಿ ಬಳಸುತ್ತಿದ್ದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ರಾಘವೇಂದ್ರ ಮನೆಯಲ್ಲಿ ಒಂದು ಡಜನ್ ಮೊಬೈಲ್ ಫೋನ್, ಬೆಟ್ಟಿಂಗ್ ಹಣದ ಮೊತ್ತ ಹಾಗೂ ಬೆಟ್ಟಿಂಗ್ ಕಟ್ಟಿದ್ದವರ ಹೆಸರಿನ ಮಾಹಿತಿ ಒಳಗೊಂಡ ನೋಟ್ ಪುಸ್ತಕ, ಕ್ಯಾಲ್ಕುಲೇಟರ್ ಸಿಕ್ಕಿದೆ. ಸದ್ಯಕ್ಕೆ ಬುಕಿ ಪೊಲೀಸರ ವಶದಲ್ಲಿದ್ದು, ವಿಚಾರಣೆ ಮುಂದುವರಿದಿದೆ.[ಈ ಬಾರಿ ತುಮಕೂರಲ್ಲಿ ಐಪಿಎಲ್ ನೋಡುವ ಮಜಾನೇ ಬೇರೆ!]

IPL cricket betting: One held in Hubballi

ಹುಬ್ಬಳ್ಳಿಯು ಬೆಟ್ಟಿಂಗ್ ದಂಧೆಗೆ ಕುಖ್ಯಾತಿ ಪಡೆದಿದೆ. ಕಳೆದ ಬಾರಿಯ ಐಪಿಎಲ್ ಪಂದ್ಯಾವಳಿ ವೇಳೆ ಇಪ್ಪತ್ತು ಮಂದಿ ಬುಕಿಗಳನ್ನು ಬಂಧಿಸಲಾಗಿತ್ತು. ಈ ದಂಧೆಯಲ್ಲಿ ಪೊಲೀಸರೇ ಭಾಗೀದಾರರು ಎಂದು ವಿಪಕ್ಷಗಳು ಆರೋಪಿಸಿದ್ದವು. ಇದರಿಂದ ವಿಧಾನಸಭೆಯಲ್ಲಿ ಅಲ್ಲೋಲ ಕಲ್ಲೋಲವಾಗಿತ್ತು.

ಅಂದಹಾಗೆ, ರಾಘವೇಂದ್ರ ಬಂಧನದ ವೇಳೆ ಪೊಲೀಸರು 17,100 ರುಪಾಯಿ ಹೊಸ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Hubballi police arrested a bookie for indulging in IPL betting. Searches were conducted at the residence of Raghavendra Kabadi, a resident of Hubballi after the police received information about rampant cricket betting.
Please Wait while comments are loading...