ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ-ಧಾರವಾಡ ರಸ್ತೆಯಲ್ಲಿ ವಾಣಿಜ್ಯ ಚಟುವಟಿಕೆ ನಿಷೇಧ

By ಶಂಭು, ಹುಬ್ಬಳ್ಳಿ
|
Google Oneindia Kannada News

ಹುಬ್ಬಳ್ಳಿ, ಜನವರಿ, 3 : ಹುಬ್ಬಳ್ಳಿ-ಧಾರವಾಡದ ಮುಖ್ಯ ರಸ್ತೆಯ ಬದಿಯಲ್ಲಿ ಇನ್ಮುಂದೆ ಯಾವುದೇ ರೀತಿಯ ಚಟುವಟಿಕೆ ನಡೆಸುವಂತಿಲ್ಲ ಎಂದು ಬಿಆರ್ ಟಿಎಸ್ ವ್ಯವಸ್ಥಾಪಕ ನಿರ್ದೇಶಕ ಷೋರೂಂ ಮತ್ತು ಗ್ಯಾರೇಜ್ ಗಳಿಗೆ ಎಚ್ಚರಿಕೆ ನೀಡಿದ್ದಾರೆ

ಹುಬ್ಬಳ್ಳಿ ಧಾರವಾಡ ಪಿಬಿ ರಸ್ತೆಯನ್ನುಅಷ್ಟ ಪಥ ರಸ್ತೆಯನ್ನಾಗಿ ಮಾರ್ಪಡಿಸಲಾಗುತ್ತಿದ್ದು, ರಸ್ತೆ ಕಾಮಗಾರಿಯು ಈಗಾಗಲೇ ಪ್ರಗತಿಯಲ್ಲಿದೆ. ಒಂದು ಹಂತದಲ್ಲಿ ನಿರ್ಮಿಸಿರುವ ರಸ್ತೆಯ ಮೇಲೆ ಕೆಲವು ಷೋರೂಂ ಮಳಿಗೆಗಳು, ಗ್ಯಾರೇಜ್ ಹಾಗೂ ಇತರೆ ವ್ಯಾಪಾರಸ್ಥರು, ವಾಣಿಜ್ಯ ಚಟುವಟಿಕೆಗಳನ್ನು ಕೈಗೊಳ್ಳುತ್ತಿದ್ದಾರೆ.

ಅಲ್ಲದೇ ರಸ್ತೆ ಮೇಲೆ ಕಚ್ಚಾ ಸಾಮಗ್ರಿಗಳು, ಯಂತ್ರಗಳು, ಹಾಗೂ ಇನ್ನಿತರೆ ಭಾರಿ ಗಾತ್ರದ ವಸ್ತುಗಳನ್ನು ರಸ್ತೆಯ ಮೇಲೆ ಇಟ್ಟು ರಿಪೇರಿ ಹಾಗೂ ಇನ್ನಿತರೆ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ಕಾಮಗಾರಿ ನಡೆಸಲು ತೊಂದರೆಯಾಗುತ್ತಿದೆ. ನಿರ್ಮಿಸಿರುವ ರಸ್ತೆಯೂ ಸಹ ಹಾಳಾಗುತ್ತಿದೆ.

Hubli-Dharwad BRTS md warned to show rooms and garage to do not disturb the road work

ಇನ್ನು ರಸ್ತೆಯ ಇಕ್ಕೆಲಗಳಲ್ಲಿ ಇರುವ ಷೋರೂಂ, ಅಂಗಡಿಗಳು, ಗ್ಯಾರೇಜ್, ಆಸ್ಪತ್ರೆ, ಕಚೇರಿ, ಕಂಪನಿಗಳ ಸಿಬ್ಬಂದಿಗಳು ಹಾಗೂ ಇತರೆ ಕೆಲಸಗಳಿಗೆ ಬರುವ ಜನರು ತಮ್ಮ ವಾಹನಗಳನ್ನು ರಸ್ತೆಯ ಮೇಲೆ ಪಾರ್ಕಿಂಗ್ ಮಾಡುತ್ತಿದ್ದಾರೆ. ಇದರಿಂದ ರಸ್ತೆ ಕಾಮಗಾರಿಗೆ ತುಂಬಾ ಅಡಚಣೆಯಾಗುತ್ತಿದೆ.

ಈ ಬಗ್ಗೆ ಬಿಆರ್ ಟಿಎಸ್ ವ್ಯವಸ್ಥಾಪಕ ನಿರ್ದೇಶಕರು ರಸ್ತೆ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಹಾಗೂ ಈಗಾಗಲೇ ನಿರ್ಮಿಸಿರುವ ರಸ್ತೆಯ ಮೇಲೆ ಯಾವುದೇ ತೆರನಾದ ಚಟುವಟಿಕೆಗಳನ್ನು ಕೈಗೊಳ್ಳಬಾರದೆಂದು ಎಚ್ಚರಿಕೆ ನೀಡಿದ್ದಾರೆ.

ರಸ್ತೆಯ ಮೇಲೆ ಈಗಾಗಲೇ ಇಟ್ಟಿರುವ ಸಾಮಗ್ರಿಗಳನ್ನು ತೆರೆವುಗೊಳಿಸಲು ಸಂಬಂಧಿಸಿದವರು ಸೂಕ್ತ ಕ್ರಮ ಕೈಗೊಳ್ಳಬೇಕು. ಹಾಗೂ ಯಾವುದೇ ರೀತಿಯ ವಾಹನಗಳನ್ನು ರಸ್ತೆಯ ಮೇಲೆ ಪಾರ್ಕಿಂಗ್ ಮಾಡುವಂತಿಲ್ಲ. ತಪ್ಪಿದ್ದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಒನ್ ಇಂಡಿಯಾಕ್ಕೆ ತಿಳಿಸಿದ್ದಾರೆ.

English summary
Hubballi-Dharwar roads are occupied by show rooms and garages. By this distrbuning to brts project. Brts md warned to show rooms and garage to do not disturb the road work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X