ಹುಬ್ಬಳ್ಳಿ ಸಂಚಾರಿ ಪೊಲೀಸ್ರ ಕಣ್ತಪ್ಪಿಸಿದ್ರೆ 'ಟ್ರಾಫಿಕ್ ಆಪ್' ಇದೆ ಜೋಕೆ!

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಜನವರಿ. 24 : ಹುಬ್ಬಳ್ಳಿಯ ಬೈಕ್, ಆಟೋ, ಟ್ಯಾಕ್ಸಿ ಸವಾರರೇ ಇನ್ಮುಂದೆ ಹುಬ್ಬಳ್ಳಿ ಸಂಚಾರಿ ಪೊಲೀಸರನ್ನು ಯಾಮಾರಿಸಿ ಮನಸ್ಸಿಗೆ ಬಂದಂತೆ ವಾಹನ ಚಲಾಹಿಸಬಹದು ಎಂಬ ಭ್ರಮೆ ನಿಮ್ಮ ತಲೆಯಲ್ಲಿ ಇದ್ದರೆ ತೆಗೆದು ಹಾಕಿ.

ಹೌದು, 'ಟ್ರಾಫಿಕ್ ಆಪ್' ಎಂಬ ಮೊಬೈಲ್ ಆಪ್ ನ್ನು ನಗರದ ಸಂಚಾರಿ ಪೊಲೀಸರಿಗೆ ಮೊಬೈಲ್ ಆಪ್ ನೀಡಲಾಗಿದ್ದು ಇನ್ಮುಂದೆ ವಾಹನ ಸವಾರರನ್ನು ಮೊಬೈಲ್ ಮೂಲಕ ಚಿತ್ರ ತೆಗೆದು ದಂಡ ವಿಧಿಸುವ ನಿಯಮ ಜಾರಿಗೆ ತರಲಾಗಿದೆ. ಇದರಿಂದ ಸಂಚಾರ ಉಲ್ಲಂಘನೆ ಮಾಡಿದರೇ ದಂಡ ಬೀಳೊದಂತೂ ಕಟ್ಟಿಟ್ಟ ಬತ್ತಿ.

hubballi Traffic police launch traffic related operations mobile app

ಹೆಲ್ಮೆಟ್ ಧರಿಸದ, ತ್ರಿಬಲ್ ಡ್ರೈವಿಂಗ್, ಮೊಬೈಲ್ ಮಾತನಾಡುತ್ತ ವಾಹನ ಚಲಾಯಿಸುವವರು, ಸಮವಸ್ತ್ರ ಧರಿಸದ ಆಟೋ ಚಾಲಕರು, ನೋ ಪಾರ್ಕಿಂಗ್ ನಲ್ಲಿ ವಾಹನ ನಿಲುಗಡೆ ಮಾಡಿ ಟ್ರಾಫಿಕ್ ನಿಯಮ ಉಲ್ಲಂಘಿಸುವ ವಾಹನ ಸವಾರರ ಫೋಟೋ ಮೊಬೈಲ್ ಆಪ್ ಮೂಲಕ ತೆಗೆದು ಅದನ್ನು ಕಂಟ್ರೋಲ್ ರೂಮಗೆ ರವಾನಿಸಲಾಗುವುದು.

ಅಲ್ಲಿಂದ ವಾಹನ ಸವಾರರಿಗೆ ನೋಟಿಸ್ ನ್ನು ಮನೆಗೆ ಕಳಿಸಲಾಗುತ್ತದೆ. ಈಗ ಪೊಲೀಸರಿಗೆ 50 ಮೊಬೈಲ್ ಗಳನ್ನು ನೀಡಲಾಗಿದ್ದು, ಮುಂಬರುವ ದಿನಗಳಲ್ಲಿ ಹೆಚ್ಚಿನ ಮೊಬೈಲ್ ಗಳನ್ನು ಬೇಡಿಕೆ ನೋಡಿಕೊಂಡು ತರಿಸಿಕೊಳ್ಳಲಾಗುವುದು ಎಂದು ಹು-ಧಾ ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ ಹೇಳಿದರು.

ಈ ಹಿಂದೆ ನಗರದ ಕಂಟ್ರೋಲ್ ರೂಮ್ ನಲ್ಲಿ ನಗರದಾದ್ಯಂತ ಅಳವಡಿಸಿರುವ ಸಿಸಿ ಕ್ಯಾಮರಾ ನೋಡಿಕೊಂಡು ವಾಹನ ಸವಾರರಿಗೆ ದಂಡ ಮತ್ತು ನೋಟಿಸ್ ನೀಡಲಾಗುತ್ತಿತ್ತು.

ಹೆಚ್ಚು-ಹೆಚ್ಚು ಸಂಚಾರ ನಿಯಮ ಉಲ್ಲಂಘನೆ ಮಾಡುವವರನ್ನು ಪತ್ತೆ ಹಚ್ಚಲು ಈಗ ಮೊಬೈಲ್ ಆಪ್ ಸಹಾಯವಾಗಲಿದೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mobile app realised traffic police in hubballi. police comminisioner pandurang rane handover 50 mobile to traffic police. The 'Traffic App' help for traffic related operations.
Please Wait while comments are loading...