ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ ಪ್ರೀಮಿಯರ್ ಲೀಗ್ 2ನೇ ಆವೃತ್ತಿಗೆ ಆಟಗಾರರ ಹರಾಜು

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ನವೆಂಬರ್, 11 : ಜನವರಿ ತಿಂಗಳಲ್ಲಿ ನಡೆಸಲುದ್ದೇಶಿಸಿರುವ ಹುಬ್ಬಳ್ಳಿ ಪ್ರೀಮಿಯರ್ ಲೀಗ್ 2ನೇ ಆವೃತ್ತಿಯ ಟಿ-20 ಕ್ರಿಕೆಟ್ ಪಂದ್ಯಾವಳಿಗೆ ಇತ್ತೀಚೆಗೆ ಆಟಗಾರರ ಹರಾಜು ಪ್ರಕ್ರಿಯೆ ನಡೆಯಿತು.

ನಗರದ ಡೆನಿಸನ್ಸ್ ಹೊಟೆಲ್ ನಲ್ಲಿ ಹರಾಜು ಪ್ರಕ್ರಿಯೆ ನಡೆಯಿತು. ಇದರಲ್ಲಿ ಒಟ್ಟು 200 ಆಟಗಾರರನ್ನು ಹರಾಜಿಗೆ ಆಯ್ದುಕೊಳ್ಳಲಾಗಿತ್ತು. ಇದರಲ್ಲಿ ಎಂಟು ತಂಡಗಳು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು. ತಲಾ 18 ಆಟಗಾರರನ್ನು ಖರೀದಿಸಿದವು.

18 ವರ್ಷ ಮೇಲ್ಪಟ್ಟ ಧಾರವಾಡ, ಹಾವೇರಿ, ಗದಗ, ಬೆಳಗಾವಿ ವಲಯ ವ್ಯಾಪ್ತಿಯ ಆಟಗಾರರನ್ನು ಹರಾಜು ಮೂಲಕ ಖರೀದಿಸಲಾಯಿತು. ಆಟಗಾರರ ಹರಾಜಿಗೆ ಕನಿಷ್ಠ 2 ಸಾವಿರ ರೂ. ಗರಿಷ್ಠ 15 ಸಾವಿರ ರೂ ನಿಗದಿ ಪಡಿಸಲಾಗಿತ್ತು.

Hubballi premier league 2 Edition players auction

ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ರಣಜಿ ಆಟಗಾರರಾದ ನಿತಿನ ಭಿಲ್ಲೆ, ಮೀರಕೊನೇಶ್ ಅಬ್ಬಾಸ, ಕೆಪಿಎಲ್ ಆಟಗಾರರಾದ ರಾಜು ಭಟ್ಕಳ್, ಶೋಯಬ್ ಮ್ಯಾನೇಜರ್, ಸಾದಿಕ ಕೀರ್ಮಾನಿ, ಕಿಶೋರ ಕಾಮತ್, ಶಿಶಿರ ಭವಾನೆ ಸೇರಿದಂತೆ ಹಲವು ಖ್ಯಾತ ಆಟಗಾರರನ್ನು ಹರಾಜು ಪ್ರಕ್ರಿಯೆಯಲ್ಲಿ ತಂಡಗಳು ಖರೀದಿ ಮಾಡಿದವು.

ರಘು ನಾಗ್ವೆ, ಸುಬ್ರಮಣ್ಯ ವಾಲಿ ಮುಂಡಗೋಡ ಮೊನಸ್ಟರ್ಸ್ ತಂಡ, ರಾಮು ಮಿಸ್ಕಿನ ಹುಬ್ಬಳ್ಳಿ ಸ್ಪ್ಯಾಮರ್ಸ್, ಇಸ್ಮಾಯಿಲ್ ತಮಟಗಾರ, ಸುರೇಂದ್ರ ಚೋಪ್ರಾ ಧಾರವಾಡ ಪ್ಯಾಂಥರ್ಸ್ ತಂಡ, ರಾಜು ಕಬಾಡಿ, ಅಸ್ವಿನ ಕಬಾಡಿ ಮಿಲನ ವಾರಿಯರ್ಸ್, ಜ್ಯೋತಿ ನಿಲೇಕಣಿ, ಗೀತಾ ಚಿಮ್ಮಣಿ ಕ್ಯಾಪ್ಟನ್ಸ್ ಎಲೆವೆನ್, ನರೇಶ ನಗ್ವಾ ಕರಾವಳಿ ಕಿಂಗ್ಸ್ ಮತ್ತು ಚೇತನ ಪವಾರ, ಮಲ್ಲಿಕಾರ್ಜುನ ಸರ್ವಿ ಸ್ಕೈಟೌನ್ ಬಾಶರ್ಸ್ ತಂಡದ ಮಾಲೀಕರಾಗಿದ್ದಾರೆ.

ಮನೀಶ ಹರಾಜು ಪ್ರಕ್ರಿಯೆ ನಡೆಸಿಕೊಟ್ಟರು. ನಗರದ ರಾಜನಗರದ ಕೆಎಸ್ ಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ಎಚ್ ಪಿಎಲ್ ಪಂದ್ಯಾವಳಿಗಳು ನಡೆಯಲಿದ್ದು ಈ ಬಾರಿ ಹೊನಲು ಬೆಳಕಿನ ಪಂದ್ಯಗಳನ್ನು ಆಡಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

English summary
Over 200 cricketers have registered for the Hubballi premier league (HPL) second edition 2017 Players Auction to be held in HUbballi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X