ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೆಕೆಂಡ್ ಹ್ಯಾಂಡ್ ಬೈಕ್ ಕೊಳ್ಳುವ ಮುನ್ನ ಎಚ್ಚರ ವಹಿಸಿ.

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಅಕ್ಟೋಬರ್ 3: ಹಳೆಯ ಬೈಕ್ ಗಳಿಗೆ ಉತ್ತರ ಕರ್ಣಾಟಕದಲ್ಲಿ ಹೆಚ್ಚಿನ ಬೇಡಿಕೆ ಇದೆ . ಧಾರವಾಡ, ಬೆಳಗಾವಿ, ಹಾವೇರಿ ಬಾಗಲಕೋಟೆ ಹೀಗೆ ಸುತ್ತಲಿನ ರೈತಾಪಿ ಜನ ಹಳೆಯ ಬೈಕ್ ಗಳನ್ನು ಕೊಳ್ಳಲು ಹುಬ್ಬಳ್ಳಿಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ . ಯಾಕಂದ್ರೆ ಇಲ್ಲಿ ಎಲ್ಲ ಕಂಪನಿಯ ಬೈಕ್ ಗಳು ನಿಮ್ಮ ಕೈಗೆ ಎಟಕುವ ದರದಲ್ಲಿ ಸಿಗುತ್ತವೆ . ಹೀಗಾಗಿ ಇಲ್ಲಿನ ಸೆಕೆಂಡ್ ಹ್ಯಾಡ್ ಬೈಕ್ ಗಳಿಗೆ ಬಾರಿ ಬೇಡಿಕೆ ಇದೆ .

ಆದ್ರೆ ಇನ್ನು ಮುಂದೆ ನೀವು ಹುಬ್ಬಳ್ಳಿಯಲ್ಲಿ ಬೈಕ್ ಕೊಳ್ಳುವ ಮುನ್ನ ಒಂದಲ್ಲಾ ಎರಡು ಸಾರಿ ವಿಚಾರ ಮಾಡಲೇ ಬೇಕು , ಯಾಕಂದ್ರೆ ಇಲ್ಲಿ ಮಾರಾಟ ಆಗುವ ಬೈಕಗಳ ಯಾರದ್ದೋ ಕದ್ದ ಬೈಕ್ ಆಗಿರಬಹುದು!ಹೀಗಾಗಿ ಇಲ್ಲಿನ ಬೈಕ್ ಕೊಳ್ಳುವ ಒಂದಲ್ಲಾ ಎರಡು ಸಾರಿ ವಿಚಾರ ಮಾಡಲೇ ಬೇಕು . ಹೌದು, ಬೈಕ್ ಕಳ್ಳರನ್ನು ಹಿಡಿದಾಗ ಈ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

Hubballi police arrests many thieves who have stolen vehicles

ಕಳೆದ ಎರಡ್ಮೂರು ವರ್ಷಗಳಿಂದ ಹುಬ್ಬಳ್ಳಿ- ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲಿ ತಮ್ಮ ಕೈಚಳಕ ತೊರಿಸಿ ವಾಹನಗಳನ್ನು ಕಳ್ಳತನ ಮಾಡುತ್ತಿದ್ದರು. ಆದ್ರೆ ಈ ಗ್ಯಾಂಗ್ ಸದ್ದಿಲ್ಲದೆ ಉತ್ತರ ಕರ್ನಾಟಕದಲ್ಲಿ ವ್ಯವಸ್ಥಿತವಾಗಿ ಕಳ್ಳತನ ಮಾಡ್ತಾ ಇರೋದು ಪೊಲೀಸರಿಗೆ ಗೊತ್ತೇ ಇರಲಿಲ್ಲ. ಅಕ್ಟೋಬರ್ 2 ರ ಮುಂಜಾನೆ ಹಳೇ ಹುಬ್ಬಳ್ಳಿ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿ ಕಳ್ಳರನ್ನು ಪತ್ತೆ ಮಾಡಿದ್ದಾರೆ. ಹಾವೇರಿ ಜಿಲ್ಲೆಯ ನೂರಬಾಷಾ ಯಾದವಾಡ, ಜಹೀರ ಬುರಾನವರ , ಮತ್ತು ಇನ್ನೊಂದು ತಂಡ ಹಳೇಹುಬ್ಬಳ್ಳಿಯ ರಾಕೇಶ ಫೋಡಕೆ ವಿನಾಯಕ ಜಿತೂರಿ ಹಾಗೂ ಸಾಗರ ಪೂಜಾರ ಎನ್ನುವ ಆರೋಪಿಗಳನ್ನು ಬಂಧಿಸಿದ್ದಾರೆ.

ಹಾವೇರಿ ಜಿಲ್ಲೆ ಹಾಗೂ ಹಳೇಹುಬ್ಬಳ್ಳಿ ಪ್ರತ್ಯೇಕ ತಂಡಗಳು ಹುಬ್ಬಳ್ಳಿ ಧಾರವಾಡ ಅವಳಿ ನಗರ ಸೇರಿದಂತೆ ಉತ್ತರ ಕರ್ನಾಟಕ ಹಲವು ಜಿಲ್ಲೆಗಳಲ್ಲಿ ಕಳ್ಳತನ ಮಾಡಿದ್ದಾರೆ. ಆದ್ರೆ ಈ ಕಳ್ಳರು ತಾವು ಕದ್ದ ಬೈಕ್ ಮತ್ತು ನಾಲ್ಕು ಚಕ್ರದ ವಾಹನದ ನಂಬರ್ ಪ್ಲೇಟ್ ಸೇರಿದಂತೆ ಚೆಸ್ಸಿ ನಂಬರ್ ಕೂಡಾ ಬದಲಾವಣೆ ಮಾಡಿ ಮಾರಾಟ ಮಾಡುತ್ತಿದ್ದರು.

ಹೀಗಾಗಿ ಅದೆಷ್ಟೋ ಸಾರಿ ಕದ್ದ ವಾಹನಗಳನ್ನು ಹಿಡಿದಾಗಲೂ ಪೊಲೀಸರಿಗೆ ಕದ್ದ ವಾಹನ ಪತ್ತೆ ಮಾಡುವುದು ಕಷ್ಟವಾಗುತಿತ್ತು. ಆದ್ರೆ ಪೊಲೀಸ್ ಇಲಾಖೆಯ ಚಾಣಾಕ್ಷತನದಿಂದ ಬೈಕ್ ಕಳ್ಳರು ಪೊಲೀಸರ ಅತಿಥಿಗಳಾಗಿದ್ದಾರೆ. ಬಂಧಿತ ಆರೋಪಿಗಳಿಂದ 35 ಲಕ್ಷ ಮೌಲ್ಯದ ನಾಲ್ಕು ಚಕ್ರದ ಮೂರು ವಾಹನ ಹಾಗೂ ವಿವಿಧ ಕಂಪನಿಯ 21 ಬೈಕ್ ಗಳನ್ನು ವಶಪಡೆಸಿಕೊಳ್ಳಲಾಗಿದೆ .

ಕಳ್ಳತನ ಎಲ್ಲಿ ?

ಪಕ್ಕದಲ್ಲಿ, ಹಾಗೂ ಮನೆ ಮುಂದೆ ನಿಲ್ಲಿಸಿರೋ ಬೈಕ್ ಹಾಗೂ ಕ್ರೂಸರ್,ಬೋಲೋರೋ ವಾಹನಗಳೇ ಇವರ ಟಾರ್ಗೆಟ್.
ಕಳ್ಳತನ ಮಾಡಿ ನಂಬರ್ ಹಾಗೂ ಚೆಸ್ಸಿ ಬದಲಾವಣೆ ಮಾಡಿ ಮಾರಾಟ ಮಾಡುತ್ತಿದ್ದರಿಂದ, ಪೊಲೀಸರಿಗೆ ಕಳ್ಳರ ಸುಳಿವು ಸಿಕ್ಕಿರಲಿಲ್ಲ. ಹಳೇಹುಬ್ಬಳ್ಳಿ ಪೊಲೀಸರು ನಿನ್ನೆ ಬೆಳಿಗ್ಗೆ ಕಾರ್ಯಚರಣೆ ನಡೆಸಿ, ಕಾರವಾರ ರಸ್ತೆಯ ಬ್ರಿಡ್ಜ್ ಬಳಿ ಆರೋಪಿಗಳನ್ನು ಬಂಧಿಸಿದ್ದಾರೆ.

ಪೊಲೀಸ್ ಡಿಪಾರ್ಟ್ಮೆಂಟ್ ಗೆ ತಲೆ ನೋವಾಗಿದ್ದ ಕಳ್ಳರು ಈವರಿಗೆ 24 ಕ್ಕೂ ಹೆಚ್ಚು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ಎಲ್ಲಾ ಪೊಲೀಸ ಠಾಣೆಗೆ ಮಾಹಿತಿ ರವಾನಿಸಲಾಗುತ್ತಿದೆ. ಹಾಗೇ ಭರ್ಜರಿ ಕಾರ್ಯಚರಣೆ ಮಾಡಿದ ತಂಡಕ್ಕೆ ಹುಬ್ಬಳ್ಳಿ ಧಾರವಾಡ ಅವಳಿನಗರ ಪೊಲೀಸ್ ಆಯುಕ್ತ ಎಮ್ ಎನ್ ನಾಗರಾಜ್ ಅವರು 10 ಸಾವಿರ ಬಹುಮಾನ ಘೋಷಣೆ ಮಾಡಿದ್ದಾರೆ.

English summary
Hubballi police have arrested many thieves who have stolen many vehicles in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X