ಇಂದಿನಿಂದ ಒಂದು ವಾರ ಹುಬ್ಬಳ್ಳಿ-ಹೈದರಾಬಾದ್ ವಿಮಾನ ಹಾರಾಟ ರದ್ದು

ಹುಬ್ಬಳ್ಳಿ, ಮಾರ್ಚ್ 20: ಕೊರೊನಾ ವೈರಸ್ ನಿಯಂತ್ರಣ ಹಾಗೂ ಸಾರ್ವಜನಿಕರ, ಪ್ರಯಾಣಿಕರ ಆರೋಗ್ಯ ಹಿತದೃಷ್ಟಿಯಿಂದ ಹುಬ್ಬಳ್ಳಿ-ಹೈದರಾಬಾದ್ ವಿಮಾನ ಹಾರಾಟ ರದ್ದು ಮಾಡಲಾಗಿದೆ.

ಇಂದಿನಿಂದ ಒಂದು ವಾರದ ಮಟ್ಟಿಗೆ ಹುಬ್ಬಳ್ಳಿ-ಹೈದ್ರಾಬಾದ್ ವಿಮಾನ ಹಾರಾಟವನ್ನು ರದ್ದುಗೊಳಿಸಲಾಗಿದೆ. ಬೆಳಗ್ಗೆ 7:55ಕ್ಕೆ ಹೈದರಾಬಾದ್ ನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಅಲೈನ್ಸ್ ಏರ್ ವಿಮಾನ ಕೂಡ ರದ್ದಾಗಿದೆ.‌

ಇದಲ್ಲದೆ ಗಬ್ಬೂರ ಕ್ರಾಸ್ ನಲ್ಲಿರುವ ಪೂರ್ವ ವಿಭಾಗದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಇಂದಿನಿಂದ ಕಲಿಕಾ ಚಾಲನಾ ಅನುಜ್ಞಾ ಪತ್ರ (ಎಲ್ ಎಲ್ ಆರ್) ಹಾಗೂ ಚಾಲನಾ ಅನುಜ್ಞಾ ಪತ್ರ (ಡಿ.ಎಲ್) ಗಳ ಪರೀಕ್ಷೆಗಳಿಗೆ ಹಾಜರಾಗುವುದನ್ನು ಮುಂದಿನ ಆದೇಶದವರೆಗೆ ನಿರ್ಬಂಧಿಸಲಾಗಿದೆ.

Hubballi Hyderabad Flight Cancelled For One Week

ಏಪ್ರಿಲ್ 15ರವರೆಗೆ ಮಾತ್ರ ಕಲಿಕಾ ಚಾಲನಾ ಅನುಜ್ಞಾ ಪತ್ರ (ಎಲ್ ಎಲ್ ಆರ್) ಸಿಂಧುತ್ವ ಹೊಂದಿರುವವರು ಈಗಾಗಲೇ ಅರ್ಜಿ ಸಲ್ಲಿಸಿದ್ದರೆ ಅವರಿಗೆ ನೀಡಿದ ನಿಗದಿತ ದಿನದಂದು ಹಾಜರಾಗಬಹುದು. ಹೆಚ್ಚಿನ ವಿವರಗಳಿಗೆ ಸಾರ್ವಜನಿಕರು 0836-2244550 ಸಂಪರ್ಕಿಸಬಹುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಅಪ್ಪಯ್ಯ ನಾಲತ್ವಾಡಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+