Bengaluru-Hubballi Train: ನಿಲ್ದಾಣದಲ್ಲಿ ಬದಲಾವಣೆ-ರೈಲ್ವೆ ಪ್ರಯಾಣಿಕರು ಗಮನಿಸಿ

ಹುಬ್ಬಳ್ಳಿ, ಫೆಬ್ರವರಿ 22: ದಕ್ಷಿಣ ಕರ್ನಾಟಕದ ಬೆಂಗಳೂರು ಉತ್ತರ ಕರ್ನಾಟಕದ ಹುಬ್ಬಳ್ಳಿ ಮಧ್ಯೆ ನಿತ್ಯ ಜನಶತಾಬ್ದಿ ರೈಲು (Bengaluru-Hubballi jan shatabdi train) ಸಾವಿರಾರು ಜನರು ಹೊತ್ತು ತೆರಳುತ್ತದೆ. ಆದರೆ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ತೊಂದರೆ ಆಗುತ್ತಿರುವ ಕಾರಣ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.

ನೈರುತ್ಯ ರೈಲ್ವೆ ನಿಲ್ದಾಣದಲ್ಲಿನ ಪ್ರಯಾಣಿಕರ ಅನುಕೂಲಕ್ಕಾಗಿ ಶ್ರೀ ಸಿದ್ದಾರೂಢ ಸ್ವಾಮಿ ರೈಲು ನಿಲ್ದಾಣ ಪ್ಲಾಟ್ ಫಾರಂ ಬದಲಾವಣೆ ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Hubballi-Bengaluru Jan Shatabdi Train Will Left from Platform 3 of hubballi from March 1st

12079/80 ಸಂಖ್ಯೆಯ ಹುಬ್ಬಳ್ಳಿ-ಬೆಂಗಳೂರು- ಹುಬ್ಬಳ್ಳಿ ಮಧ್ಯ ಸಂಚರಿಸುವ ಜನ ಶತಾಬ್ದಿ ರೈಲು ಕಾರಣಾಂತರದಿಂದ ಹುಬ್ಬಳ್ಳಿ ನಿಲ್ದಾಣದಲ್ಲಿ ಮೂರನೇ ದ್ವಾರದ ಆರನೇ ಪ್ಲ್ಯಾಟ್ ಫಾರ್ಮ್ ನಿಂದ ಸಂಚರಿಸುತ್ತಿತ್ತು. ಇದೀಗ ಇದರಲ್ಲಿ ಬದಲಾವಣೆ ಆಗಿದ್ದು, ಪ್ರಯಾಣಿಕರು ಸಂಚರಿಸವು ಮುನ್ನ ಇಲ್ಲಿನ ಮಾಹಿತಿ ಗಮನಿಸಬೇಕಿದೆ.

ಮಾರ್ಚ್ 1ರಿಂದ ಬದಲಾವಣೆ

ಹುಬ್ಬಳ್ಳಿಯ ಜನರಿಗೆ ಸಂಚಾರಕ್ಕೆ ಅತ್ಯಂತ ಪ್ರಮುಖ ರೈಲು ಇದಾಗಿದ್ದು, ಆರನೇ ಪ್ಲಾಟ್‌ಫಾರ್ಮ್, ಮೂರನೇ ದ್ವಾರದಿಂದ ಜನರಿಗೆ ಸಂಚರಿಸುವಲ್ಲಿ ತೊಂದರೆ ಆಗುತ್ತಿದೆ. ಈ ಸಂಬಂಧ ಪಟ್ಟ ರೈಲ್ವೆ ಅಧಿಕಾರಿಗಳೊಂದಿಗೆ ಈ ಕುರಿತು ಚರ್ಚಿಸಲಾಗಿದೆ. ಈ ರೈಲನ್ನು ನಿಲ್ದಾಣದ ಪ್ರಮುಖ ದ್ವಾರದಿಂದ ಚಲಿಸಿಲು ಸೂಚಿಸಿದ್ದು ಅದರಂತೆ ಬರುವ ಮಾರ್ಚ್ 1ರಿಂದ ಜನ ಶತಾಬ್ದಿ ರೈಲು ಎರಡನೇ ಪ್ಲ್ಯಾಟ್ ಫಾರ್ಮ್ ನಿಂದ ಸಂಚರಿಸಲಿದೆ.

Hubballi-Bengaluru Jan Shatabdi Train Will Left from Platform 3 of hubballi from March 1st

ಪ್ರಯಾಣಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟು ಸಂಚಾರದ ವ್ಯವಸ್ಥೆಯನ್ನು ಸುಗಮಗೊಳಿಸಿದ ರೈಲ್ವೆ ಅಧಿಕಾರಿಗಳಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಪ್ರಯಾಣಿಕರು ಧನ್ಯವಾದ ತಿಳಿಸಿದ್ದಾರೆ.

ಉ.ಕ ಜಿಲ್ಲೆಗಳ ಜನರಿಗೆ ಹೆಚ್ಚು ಅನುಕೂಲ

ಈಗಾಗಲೇ ಸಂಚರಿಸುತ್ತಿರುವ ರೈಲುಗಳಿಗೆ ಕೂಡ ಹೆಚ್ಚುವರಿ ಕೋಚ್‌ಗಳನ್ನು ಅಳವಡಿಸಲಾಗಿದೆ. ಇದು ಹುಬ್ಬಳ್ಳಿ ಧಾರವಾಡ ಕಾರವಾರ, ಬೆಳಗಾವಿ, ಬಾಗಲಕೋಟ, ವಿಜಯಪುರ ಹಾಗೂ ಉತ್ತರ ಕರ್ನಾಟಕ ಕರಾವಳಿ ಭಾಗದ ಜನರಿಗೆ ಬಹಳಷ್ಟು ಅನುಕೂಲ ಆಗಿದೆ.

ಮೀನುಗಾರಿಕೆ, ಕೈಗಾರಿಕಾ, ಉದ್ಯಮಿಗಳಿಗೆ ಹಾಗೂ ಮಧ್ಯಮ ವರ್ಗದ ಜನರಿಗೆ ಈ ರೈಲು ಹಾಗೂ ಹೆಚ್ಚುವರಿ ರೈಲು ಬೋಗಿ ಜೋಡಣೆಯಿಂದ ಸಹಾಯವಾಗಿದೆ. ಇದರಲ್ಲಿ ಮಹಿಳಾ ಉದ್ಯಮಿಗಳಿಗೆ ವಿಶೇಷವಾಗಿ ವಕೀಲರು ಕೇಸ್ ನಡೆಸಲು ಸಹ ಬೆಂಗಳೂರಿಗೆ ತೆರಳಬೇಕಾಗಿರುತ್ತದೆ.

ಇವರೆಲ್ಲರಿಗೂ ನಿಲ್ದಾಣದ ಮಧ್ಯಭಾಗದಲ್ಲಿದ್ದ ಆರನೇ ಪ್ಲಾಟ್‌ಫಾರಂ ನಿಂದ ಹೊರ ಹೋಗಲು, ಬರುವುದಕ್ಕೆ ತೊಂದರೆ ಆಗುತ್ತಿತ್ತು. ಮಹಿಳೆಯರು, ವೃದ್ಧರಿಗೆ ಸಮಸ್ಯೆ ಎದುರಿಸುತ್ತಿದ್ದರು. ಈ ಬಗ್ಗೆ ಮನವಿ ಮಾಡಲಾಗಿತ್ತು. ಅದರಂತೆ ನೈಋತ್ಯ ರೈಲ್ವೆ ಸ್ಪಂದಿಸಿದ್ದು, ಮೂರನೇ ಪ್ಲಾಟ್‌ಫಾರಂನಿಂದ ಬೆಂಗಳೂರು-ಹುಬ್ಬಳ್ಳಿ ರೈಲು ಓಡಿಸಲು ಆರಂಭಿಸಿದೆ.

ಎರಡು ನಿಲ್ದಾಣಗಳಿಗೆ ಹೆಚ್ಚುವರಿ ನಿಲುಗಡೆ

ಹುಬ್ಬಳ್ಳಿಯು ಜಂಕ್ಷನ್ ಆಗಿದ್ದು,ನಿತ್ಯ ಅನೇಕ ರೈಲುಗಳು ಓಡಾಡುತ್ತಿದ್ದು, ಲಕ್ಷಾಂತರ ಪ್ರಯಾಣಿಕರು ಇಲ್ಲಿಂದ ಪ್ರಯಾಣಿಸುತ್ತಾರೆ. ಅದರಲ್ಲಿ ಬೆಂಗಳೂರು-ಹುಬ್ಬಳ್ಳಿ ರೈಲಿಗೆ ಅತ್ಯಧಿಕ ಜನರು ಓಡಾಡುತ್ತಾರೆ. ನೈಋತ್ಯ ರೈಲ್ವೆ ಅಧಿಕಾರಿಗಳ ಇಂದಿನ ನಿರ್ಧಾರವನ್ನು ಈ ಪ್ರಯಾಣಿಕರು ಸ್ವಾಗತಿಸಿದ್ದಾರೆ.

ವಾಣಿಜ್ಯ ನಗರಿ ಹುಬ್ಬಳ್ಳಿ ಹಾಗೂ ಬೆಂಗಳೂರಿಗೆ ಹಿಂದೆ ಬಿಡಲಾಗಿದ್ದ ಸೂಪರ್‌ಪಾಸ್ಟ್‌ ಎಕ್ಸ್‌ಪ್ರೆಸ್‌ ಎರಡು ರೈಲನ್ನು ಇನ್ನೂ ಜುಲೈವರೆಗೆ ವಿಸ್ತರಣೆ ಮಾಡಲಾಗಿದೆ. ಮನವಿ ಮೇರೆಗೆ ರೈಲು ಸಂಚಾರ ವಿಸ್ತರಣೆ ಮಾಡಲಾಗಿದೆ. ಅಲ್ಲದೇ ರಾಣಿಬೆನ್ನೂರು ಮತ್ತು ಹಾವೇರಿಗೆ ಹೆಚ್ಚುವರಿ ನಿಲಗಡೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+