ಹುಬ್ಬಳ್ಳಿ ಜಿ.ಪಂ: ಕಾಂಗ್ರೆಸ್ ಅಭ್ಯರ್ಥಿ 6 ಮತಗಳ ಅಂತರದಿಂದ ಗೆಲುವು

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ನವೆಂಬರ್ 24: ಜಿಲ್ಲಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಜಿ.ಪಂ.ಉಪಚುನಾವಣೆಯ ಫಲಿತಾಂಶ ಬುಧವಾರ ಪ್ರಕಟಗೊಂಡಿದ್ದು ಕಾಂಗ್ರೆಸ ನ ಚನ್ನಬಸಪ್ಪ ಮಟ್ಟಿ ಕೇವಲ 6 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ನ.20 ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಲ್ಲಮ್ಮ ಯೋಗೀಶಗೌಡ ಕೂದಲೆಳೆಯ ಅಂತದಲ್ಲಿ ಸೋಲುಂಡಿದ್ದಾರೆ.

ಕಾಂಗ್ರೆಸ್ ಗೆ 10482, ಬಿಜೆಪಿ 10476, ಜೆಡಿಎಸ್ 893 ಮತಗಳು ಲಭಿಸಿದ್ದು ಇವುಗಳೊಂದಿಗೆ ನೋಟಾ ಮತಗಳು 222.

election

ಹಿಂದಿನ ಜಿ.ಪಂ.ಸದಸ್ಯ ಯೋಗೀಶಗೌಡ ಹತ್ಯೆಯ ಹಿನ್ನೆಲೆಯಲ್ಲಿ ಉಪಚುನಾವಣೆ ಘೋಷಿಸಲಾಗಿತ್ತು. ಅನುಕಂಪದ ಆಧಾರದ ಮೇಲೆ ಗೆಲುವು ತಮ್ಮದೇ ಎಂದು ಬಿಜೆಪಿ ಧುರೀಣರು ಯೋಗೀಶಗೌಡ ಪತ್ನಿ ಮಲ್ಲಮ್ಮನನ್ನು ಉಪಚುನಾವಣೆಯಲ್ಲಿ ಕಣಕ್ಕಿಳಿಸಿದ್ದರು. ಮಲ್ಲಮ್ಮ ತನ್ನ ಮಕ್ಕಳೊಂದಿಗೆ ಮತ ಯಾಚಿಸಿ ಹತ್ಯೆಯಾದ ತಮ್ಮ ಪತಿ ಯೋಗೀಶಗೌಡರ ಸೇವೆಯನ್ನು ಮುಂದುವರಿಸಲು ಅವಕಾಶ ಕೊಡಿ ಎಂದು ಮತದಾರರಲ್ಲಿ ಕೇಳಿಕೊಂಡಿದ್ದರು.[ಹುಬ್ಬಳ್ಳಿ ಜಿ.ಪಂ. ಕ್ಷೇತ್ರದ ಉಪಚುನಾವಣೆಗೆ ದಿನಾಂಕ ಪ್ರಕಟ]

ಇತ್ತ ಉಪಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಶತಾಯ ಗತಾಯ ಕ್ಷೇತ್ರವನ್ನು ಗೆಲ್ಲಲೇಬೇಕಂಬ ಪಣ ತೊಟ್ಟಿದ್ದರು.

ಬಹುಮತ ಇಳಿಕೆ:
11 ಕ್ಷೇತ್ರಗಳನ್ನು ಗೆದ್ದು ಪಕ್ಷೇತರ ಅಭ್ಯರ್ಥಿ ಶಿವಾನಂದ ಕರಿಗಾರ ಅವರ ಬೆಂಬಲದಿಂದ ಜಿ.ಪಂ. ಗದ್ದುಗೆಯನ್ನು ಬಿಜೆಪಿ ಹಿಡಿದಿತ್ತು. ಈಗ ಕ್ಷೇತ್ರದಲ್ಲಿ ಬಿಜೆಪಿ ಸೋಲಿನ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ. ಈ ಸಮಯದಲ್ಲಿ ಜಿ.ಪಂ. ಉಪಾಧ್ಯಕ್ಷ ಸ್ಥಾನ ಪಡೆದುಕೊಂಡಿರುವ ಶಿವಾನಂದ ಕರಿಗಾರ ಕೂಡ ತಮ್ಮ ಹುದ್ದೆ ಕಳೆದುಕೊಳ್ಳಬಹುದು ಎಂಬುದು ರಾಜಕೀಯ ಲೆಕ್ಕಾಚಾರವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Election Commission will announce Hubballi Zilla panchayat by election result chenna basappa chetti winner in 6 votes.
Please Wait while comments are loading...