Get Updates
Get notified of breaking news, exclusive insights, and must-see stories!

Uttara Karnataka flood: ಡ್ಯಾಂ ನೀರು ಬಿಡುಗಡೆ, ವಿಪರೀತ ಮಳೆ: 231 ಗ್ರಾಮಗಳಲ್ಲಿ ಪ್ರವಾಹ, ಇಲ್ಲಿದೆ ಕಂಪ್ಲಿಟ್ ಮಾಹಿತಿ

ಹುಬ್ಬಳ್ಳಿ, ಜುಲೈ 27: ಉತ್ತರ ಕರ್ನಾಟಕದಲ್ಲಿ ಮಳೆ ಇನ್ನಿಲ್ಲದಂತೆ ಕಾಡುತ್ತಿದೆ. ನಿರಂತರ ಮಳೆಗೆ ಜನರು ಬೇಸತ್ತಿದ್ದಾರೆ. ಮನೆಯಿಂದ ಬರದಂತಹ ಮಳೆ, ಪ್ರವಾಹ ಮತ್ತು ಶೀತವಾತಾವರಣ ನಿರ್ಮಾಣವಾಗಿದೆ. ಇದಷ್ಟೇ ಅಲ್ಲದೇ ಉತ್ತರ ಕರ್ನಾಟಕದಲ್ಲಿ ಮಳೆ, ಪ್ರವಾಹಕ್ಕೆ ಅನೇಕ ಜಿಲ್ಲೆಗಳಲ್ಲಿ ಅವಾಂತರಗಳು ಸೃಷ್ಟಿಯಾಗಿವೆ. ಅದರ ಕಂಪ್ಲಿಟ್ ಡಿಟೇಲ್ಸ್ ಇಲ್ಲಿದೆ.

ಒಂದು ಕಡೆ ಕಾವೇರಿ ಕೊಳ್ಳದ ವ್ಯಾಪ್ತಿಯ 11 ಜಿಲ್ಲೆಗಳಲ್ಲಿ ನದಿಗಳ ನೀರಿನ ಮಟ್ಟ ಏರಿಕೆಯಾಗಿದ್ದು, ಹಲವು ಸೇತುವೆಗಳು ಮುಳುಗಡೆಯಾಗಿದೆ. ಇತ್ತ ಉತ್ತರ ಕರ್ನಾಟಕ ಸೇರಿ ಸುಮಾರು 231 ಗ್ರಾಮಗಳಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಆಯಾ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ನೂರಾರು ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.

Heavy Rain and Dam Outflows Flood 231 Villages in Uttara Karnataka 50 Bridges Collapse

ಆತಂಕದಲ್ಲಿ ಬದುಕುತ್ತಿರುವ ಉ.ಕ. ಜನರು

ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು, ಯಾದಗಿರಿ, ಬಳ್ಳಾರಿ, ಕೊಪ್ಪಳ, ಮಂಡ್ಯ, ಮೈಸೂರು, ಹಾಸನ ಜಿಲ್ಲೆಗಳಲ್ಲಿ ಜಲಾಶಯಗಳ ಮೂಲಕ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ ಗೊಳಿಸುತ್ತಿರುವುದರಿಂದ ನದಿಗಳ ತೀರ ಪ್ರದೇಶಗಳಲ್ಲಿ ಆತಂಕ ಮನೆ ಮಾಡಿದೆ. ಈ ಮಧ್ಯೆ ಮಳೆ ನಿಲ್ಲದೇ ದಿನವಿಡೀ ಸುರಿಯುತ್ತಲೇ ಇದೆ. ಜನರು ಭಯದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ.

ಇನ್ನೂ ಉತ್ತರ ಕರ್ನಾಟಕದ ಪ್ರಮುಖ ನದಿಗಳಾಗಿರುವ ಕೃಷ್ಣಾ, ದೂಧಗಂಗಾ, ವೇದಗಂಗಾ, ಘಟಪ್ರಭಾ, ಮಲಪ್ರಭಾ, ತುಂಗಭದ್ರಾ ನದಿಗಳ ಒಳಹರಿವು ಹೆಚ್ಚಾಗಿದೆ. ಜಲಾಶಯಗಳಿಂದ ನೀರು ಹೊರ ಬಿಡುವ ಪ್ರಮಾಣವು ಏರಿಕೆ ಆಗಿದೆ. ಈ ರೌದ್ರಾವತಾರಕ್ಕೆ ಜಲಪ್ರಳಯವೇ ಆಗಿದ್ದು, ಜಲಾಶಯಗಳು ಧುಮ್ಮಿಕ್ಕುತ್ತಿವೆ.

Heavy Rain and Dam Outflows Flood 231 Villages in Uttara Karnataka 50 Bridges Collapse

50ಕ್ಕೂ ಹೆಚ್ಚು ಸೇತುವೆಗಳು ಮುಳುಗಡೆ

ನಿರಂತರ ಮಳೆ, ಪ್ರವಾಹ ಕಾರಣದಿಂದ ವಿವಿಧ ತಾಲೂಕಗಳ ವ್ಯಾಪ್ತಿಯಲ್ಲಿರುವ 50ಕ್ಕೂ ಹೆಚ್ಚು ಸೇತುವೆಗಳು ಮುಳುಗಡೆಯಾಗಿವೆ. ಕೆಲವು ಗ್ರಾಮಗಳು ನಡುಗಡ್ಡೆಯಾಗಿವೆ. ನೂರಾರು ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.

ಗಡಿನಾಡು ಜಿಲ್ಲೆ ಬೆಳಗಾವಿ ವ್ಯಾಪ್ತಿಯ ಸಪ್ತ ನದಿಗಳು ಉಕ್ಕಿ ಹರಿಯುತ್ತಿವೆ. 122 ಗ್ರಾಮಗಳಿಗೆ ಜಲದಿಗ್ಬಂ ಧನವಾಗಿದೆ. ದ್ವೀಪದಂತಹ ಭೂ ಪ್ರದೇಶದಲ್ಲಿ ಜನರು ವಾಸಿಸುತ್ತಿದ್ದಾರೆ. ಈ ಸಮಸ್ಯೆಯಿಂದ ಶೀಘ್ರವೇ ಮುಕ್ತಿ ಕೊಡು ಎಂದು ಬೇಡಿಕೊಳ್ಳುತ್ತಿದ್ದಾರೆ.

ವಿವಿಧೆಡೆ ಸೇತುವೆಗಳು ಜಲಾವೃತ ಸಂಪರ್ಕ ಕಡಿತ

ಬೆಳಗಾವಿಯಲ್ಲಿ 32, ಬಾಗಲಕೋಟೆಯಲ್ಲಿ 12, ರಾಯಚೂರಿನಲ್ಲಿ 2, ಯಾದಗಿರಿ, ಕಂಪ್ಲಿಯಲ್ಲಿ ತಲಾ 1 ಸೇರಿದಂತೆ 48 ಸೇತುವೆಗಳು ಜಲಾವೃತವಾಗಿವೆ. ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.

ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು, ಯಾದಗಿರಿ ಹಾಗೂ ತುಂಗಭದ್ರಾ ಡ್ಯಾಂನಿಂದ 1.07 ಲಕ್ಷ ಕ್ಯೂಸೆಕ್ ನೀರು ಬಿಟ್ಟಿದ್ದರಿಂದ ನದಿ ತೀರದ ಕೊಪ್ಪಳ, ಗಂಗಾವತಿ, ಕಂಪ್ಲಿ, ಸಿರಗುಪ್ಪ, ಹಂಪಿಯಲ್ಲಿ ನೆರೆ ಆವರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

10ಕ್ಕೂ ಹೆಚ್ಚು ಹಳ್ಳಿಗಳಿಗೆ ನೆರೆ ಭೀತಿ

ಇನ್ನೂ ದಕ್ಷಿಣ ಒಳನಾಡು ಜಿಲ್ಲೆ ವ್ಯಾಪ್ತಿಗೆ ಬರುವ ಕಬಿನಿ ಜಲಾಶಯದಲ್ಲಿ ನೀರಿನ ಸಂಗ್ರಹ ಸಾಮರ್ಥ್ಯದ 19 ಟಿಎಂಸಿಯಷ್ಟು ಏರಿಕೆ ಆಗಿದೆ. ಈ ಜಲಾಶಯದಿಂದ 70 ಸಾವಿರ ಕ್ಯುಸೆಕ್‌ಗೂ ಹೆಚ್ಚು ನೀರನ್ನು ಕಪಿಲಾ ನದಿಗೆ ಹರಿಬಿಟ್ಟರೆ ಮೈಸೂರು ಜಿಲ್ಲೆಯ 10ಕ್ಕೂ ಹೆಚ್ಚು ಹಳ್ಳಿಗಳಿಗೆ ನೆರೆ ಭೀತಿ ಕಾಡಲಿದೆ.

ಇನ್ನೂ ಹೆಗ್ಗಡದೇವನಕೋಟೆ (ಎಚ್‌.ಡಿ ಕೋಟೆ) ತಾಲೂಕಿನ ಬಿದರಹಳ್ಳಿ, ಕಡೆಗದ್ದೆ, ಸಾಗರೆ, ಅಗತ್ತೂರು, ತುಂಬುಸೋಗೆ, ಇಟ್ನಾ, ಹೆಬ್ಬಲಗುಪ್ಪೆ, ನೇರಳೆ, ಮಾಗೂಡಿಲು ಗ್ರಾಮಗಳಲ್ಲಿ ನೆರೆ ಸಂಭವಿಸಲಿದೆ. ಸದ್ಯ ರಾಜ್ಯದ ಮಳೆನಾಡು ಹಾಗೂ ಉತ್ತರ ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ವಿಪರೀತ ಮಳೆ ಮುಂದುವರಿದಿದೆ. ಇದಕ್ಕೆ ಅರಬ್ಬಿ ಸಮುದ್ರದಲ್ಲಿ ಎದ್ದಿರುವ ಹವಾಮಾನದಲ್ಲಿನ ಬದಲಾವಣೆಗಳು ಮತ್ತು ವೈಪರಿತ್ಯಗಳೇ ಕಾರಣ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+